More

    10 ತಿಂಗಳ ಹೆಣ್ಣು ಮಗು ರೇಪ್​ ಮಾಡಿ, ಗೂಗಲ್ ಹುಡುಕಾಡಿದ ಪಾಪಿ ತಂದೆ: ಮೊಬೈಲ್​ನಲ್ಲಿತ್ತು ಭಯಾನಕ ರಹಸ್ಯ

    ನ್ಯೂಯಾರ್ಕ್​: ಇಡೀ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಹಾಗೂ ಹೇಯ ಕೃತ್ಯ ಅಮೆರಿಕದ ಫೆಲಿಡೆಲ್ಪಿಯಾದಲ್ಲಿ ನಡೆದಿದೆ. ಕಾಮುಕ ತಂದೆಯೊಬ್ಬ ತನ್ನ 10 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣನಾಗಿದ್ದಾನೆ. ಸಾವಿಗೂ ಮುನ್ನ ಮಗು ಉಸಿರಾಡುವುದನ್ನು ನಿಲ್ಲಿಸಿದರೆ ಏನು ಮಾಡಬೇಕು ಎಂಬುದನ್ನು ಗೂಗಲ್​ ಹುಡುಕಾಡಿದ್ದಾನೆ.

    ಡೈಲಿ ಮೇಲ್​ ವರದಿ ಪ್ರಕಾರ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮಗುವಿನ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಮಗುವಿಗೆ ಅಪಾಯ ಉಂಟು ಮಾಡಿದ್ದು ಸೇರಿ ಇನ್ನಿತರ ಪ್ರಕರಣಗಳನ್ನು ಅಧಿಕಾರಿಗಳು ಮಂಗಳವಾರ ದಾಖಲಿಸಿದ್ದಾರೆ.

    ಆರೋಪಿ ತಂದೆಯನ್ನು ಆಸ್ಟಿನ್​ ಸ್ಟೀವನ್​ (29) ಎಂದು ಗುರುತಿಸಲಾಗಿದೆ. ಫೆಲಿಡೆಲ್ಪಿಯಾದಲ್ಲಿ ತನ್ನ ನಿವಾಸದಲ್ಲಿ ತನ್ನ 10 ತಿಂಗಳ ಮಗಳನ್ನು ನೋಡಿಕೊಳ್ಳುತ್ತಿದ್ದ. ಕಳೆದ ಶನಿವಾರ ಮಗುವಿನ ಮೇಲೆ ಅತ್ಯಾಚಾರ ಎಸಗಿ, ರಕ್ತಸಿಕ್ತ ಗಾಯದ ಸ್ಥಿತಿಯಲ್ಲಿ ಬಿಟ್ಟಿದ್ದ. ಇದರ ಬೆನ್ನಲ್ಲೇ ಮಗು ಉಸಿರಾಡುವುದನ್ನು ನಿಲ್ಲಿಸುತ್ತಿದ್ದಂತೆ ಏನು ಮಾಡಬೇಕು? ಮತ್ತು ಮಗು ಸತ್ತಿದೆ ಎಂದು ಹೇಗೆ ತಿಳಿಯುವುದು? ಎಂಬುದನ್ನು ಗೂಗಲ್​ನಲ್ಲಿ ಹುಡುಕಾಡಲು ಆರಂಭಿಸಿದ್ದಾನೆ. ಮಗು ಗಂಭೀರ ಗಾಯದಿಂದ ನರಳುತ್ತಿದ್ದರೂ ಆಸ್ಪತ್ರೆಗಾಗಲಿ ಅಥವಾ ತುರ್ತು ಸೇವೆಗಾಗಲಿ ಕರೆ ಮಾಡಿಲ್ಲ.

    ಇದನ್ನೂ ಓದಿ: ಇಬ್ಬರು ಖದೀಮರು ಕದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 108 ಬೈಕ್: ಪೊಲೀಸರ ಕೈಗೆ ಸಿಕ್ಕಿದ್ದೇ ರೋಚಕ..!

    ಗೂಗಲ್​ ಸರ್ಚ್​ ಮಾಡಿದ್ದಲ್ಲದೆ, ಜಾಲತಾಣದಲ್ಲಿ ಇಬ್ಬರು ಸ್ನೇಹಿತೆಯರ ಜತೆ ಪರೋಕ್ಷವಾಗಿ ಮಗುವಿನ ಬಗ್ಗೆ ಮಾತನಾಡಿದ್ದು, ತನ್ನ ಮಗುವಿನ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿಲ್ಲ. ಈ ಎಲ್ಲ ವಿಚಾರಗಳು ಆತನ ಫೋನ್​ನಿಂದ ಬಹಿರಂಗವಾಗಿದೆ. ತದನಂತರ ಆರೋಪಿ ಆಸ್ಪತ್ರೆಗೆ ಕರೆ ಮಾಡಿದ್ದಾನೆ. ಆದರೆ, ಮೊದಲೇ ತಡವಾಗಿದ್ದರಿಂದ ಮಗು ಉಳಿಯಲಿಲ್ಲ.

    ಪ್ರಕರಣದ ಮೇಲೆ ಅನುಮಾನದಿಂದ ಪೊಲೀಸರು ಆರೋಪಿ ತಂಗಿದ್ದ ಅಪಾರ್ಟ್​ಮೆಂಟ್​ ಹುಡುಕಾಡಿದಾಗ ರಕ್ತ ಕಲೆಯುಳ್ಳ ಮಗುವಿನ ಡೈಪರ್​ ಪತ್ತೆಯಾಗಿದೆ. ಬಳಿಕ ಮರಣೋತ್ತರ ವರದಿಯಲ್ಲೂ ಸಹ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಖಚಿತವಾಗಿದೆ. ಮಗುವಿನ ಜನನಾಂಗದಲ್ಲಿ ಗಾಯಗಳಾಗಿರುವುದು ಕಂಡುಬಂದಿದೆ. ಇದೀಗ ಆರೋಪಿ ಬಂಧನಲ್ಲಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts