More

    ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

    ವಾಷಿಂಗ್ಟನ್‌: ಈ ಹಕ್ಕಿಯ ಬಲಭಾಗ ಸಂಪೂರ್ಣ ಗಂಡು, ಎಡಭಾಗ ಸಂಪೂರ್ಣ ಹೆಣ್ಣು. ಅರ್ಧ ಗಂಡು, ಅರ್ಧ ಹೆಣ್ಣಾಗಿರುವ ವಿಚಿತ್ರ ಪಕ್ಷಿಯೊಂದರನ್ನು ಪಕ್ಷಿತಜ್ಞರು ಇದೀಗ ಪತ್ತೆಹಚ್ಚಿದ್ದಾರೆ. ಈ ಪಕ್ಷಿಯ ಬಗ್ಗೆ ಸಂಶೋಧಕರಲ್ಲಿ ಹೆಚ್ಚು ಕೌತುಕ ಕಾಡಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

    ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಇದು ಕಂಡುಬಂದಿದೆ. ಎದೆಯ ಭಾಗದಲ್ಲಿ ಗುಲಾಬಿ ಬಣ್ಣ, ಬಲಗೈ ಭಾಗದಲ್ಲಿ ಕಪ್ಪುಗರಿಗಳನ್ನು ಇದು ಹೊಂದಿದ್ದು, ಇಲ್ಲಿ ಗಂಡುಹಕ್ಕಿಯೆಂದು ಗುರುತಿಸಲಾಗಿದೆ. ಆದರೆ ಎಡಭಾಗದಲ್ಲಿ ಹಳದಿ ಮತ್ತು ಕಂದು ಬಣ್ಣದ ಪುಕ್ಕಗಳು ಇದ್ದು ಇಲ್ಲಿ ಹೆಣ್ಣಿನ ಲಕ್ಷಣಗಳನ್ನು ಹೊಂದಿರುವುದಾಗಿ ತಜ್ಞರು ಹೇಳಿದ್ದಾರೆ.

    ಸೆಪ್ಟೆಂಬರ್ 24 ರಂದು ಪೆನ್ಸಿಲ್ವೇನಿಯಾದ ರೆಕ್ಟರ್‌ ಎಂಬ ಪ್ರಾಂತ್ಯದಲ್ಲಿ ಪಕ್ಷಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಷಿ ತಜ್ಞರಾಗಿರುವ ಅನ್ನಿ ಲಿಂಡ್ಸೆ ಎನ್ನುವವರಿಗೆ ಈ ಪಕ್ಷಿ ಕಾಣಿಸಿಕೊಂಡಿದೆ. ಇದನ್ನು ಸೆರೆಹಿಡಿದಿರುವ ಅವರು, ಇದರ ಬಗ್ಗೆ ಇದೀಗ ಅಧ್ಯಯನ ಶುರು ಮಾಡಿದ್ದಾಳೆ.

    ಇದನ್ನೂ ಓದಿ: ವಾಕಿಂಗ್‌ ಮಾಡುತ್ತಿದ್ದ ಬಿಜೆಪಿ ಶಾಸಕನ ಸಂಬಂಧಿ ಮೇಲೆ ಗುಂಡಿನ ದಾಳಿ- ಸಾವು

    ಗೈನಾಂಡ್ರೊಮಾರ್ಫ್‌ ಎಂದು ಕರೆಯಲ್ಪಡುವ ಅರ್ಧ ಪುರುಷ-ಅರ್ಧ ಸ್ತ್ರೀ ಪಕ್ಷಿ ಇದು ಎಂದು ಅವರಿಗೆ ಇಲ್ಲಿಯವರೆಗೆ ಮಾಹಿತಿ ಸಿಕ್ಕಿದ್ದು, ಇದೀಗ ಸಂಪೂರ್ಣ ಪಕ್ಷಿತಜ್ಞರಲ್ಲಿ ಕುತೂಹಲ ಮೂಡಿಸಿದೆ.

    ಇದೊಂದು ತೀವ್ರ ಅದ್ಭುತವಾಗಿರುವ ಪಕ್ಷಿ. ಸಂತಾನೋತ್ಪತ್ತಿ ಸಮಯದಲ್ಲಿ ಇದರ ಪುಕ್ಕದಲ್ಲಿ ಬದಲಾವಣೆಯಾಗುತ್ತದೆ. ವಸಂತ ಋತುವು ಇದರ ಸಂತಾನೋತ್ಪತ್ತಿ ಸಮಯವಾಗಿದೆ. ಈ ಸಮಯದಲ್ಲಿ ಈ ಹಕ್ಕಿ ಪುಕ್ಕಗಳ ಸಹಾಯದಿಂದ ಸಂತಾನೋತ್ಪತ್ತಿಗೆ ಮುಂದಾಗುತ್ತದೆ. ಆದರೆ ಉಳಿದ ಸಮಯದಲ್ಲಿ ಅಂದರೆ ಬೇರೆ ಋತುಗಳಲ್ಲಿ ಇದರ ಪುಕ್ಕವು ಗಂಡಿನ ಪುಕ್ಕದಂತೆ ಮಾರ್ಪಾಡಾಗುತ್ತದೆ. ಇದು ಪ್ರಕೃತಿಯ ವೈಚಿತ್ರ ಎಂದಿ ಅನ್ನಿ ಲಿಂಡ್ಸೆ ಹೇಳುತ್ತಾರೆ.

    ಎರಡು ಹಕ್ಕಿಗಳು ಕೂಡಿ ಸಂತಾನೋತ್ಪತ್ತಿಗೆ ಮುಂದಾಗುತ್ತವೆ. ಹಕ್ಕಿಗಳ ಎರಡು ವೀರ್ಯಗಳು ಒಟ್ಟಾಗಿ ಮೊಟ್ಟೆಯಾಗಿ ಮಾರ್ಪಡುತ್ತದೆ. ಒಂದು ಬೀಜದ ಬದಲು ಎರಡು ನ್ಯೂಕ್ಲಿಯಸ್‌ಗಳನ್ನು ಈ ಹಕ್ಕಿ ಹೊಂದಿದೆ. ಇದು ತೀರಾ ವಿಚಿತ್ರವಾದ ಸೃಷ್ಟಿ.
    ವೀರ್ಯಗಳು ಮೊಟ್ಟೆಯಾಗಿ ಪರಿವರ್ತನೆಯಾದ ಬಳಿಕ ಒಂದು ಬದಿಯಲ್ಲಿ ಪುರುಷ ಲೈಂಗಿಕ ವರ್ಣತಂತುಗಳನ್ನು ಮತ್ತು ಇನ್ನೊಂದು ಬದಿಯಲ್ಲಿ ಸ್ತ್ರೀ ಲೈಂಗಿಕ ವರ್ಣತಂತುಗಳು ಅಭಿವೃದ್ಧಿಯಾಗುತ್ತವೆ ಎಂದು ಅವರು ಬಣ್ಣಿಸುತ್ತಾರೆ.

    ಈ ಹಕ್ಕಿಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.

    ಹಾಥರಸ್‌ ಕೇಸ್‌: ಎಫ್‌ಐಆರ್‌ ಇಲ್ಲ, ಸರ್ಕಾರದ ಪ್ರಶ್ನೆಗೆ ಉತ್ತರವೂ ಇಲ್ಲ… ತನಿಖೆಗೆ ಒಪ್ಪುತ್ತಿಲ್ಲವೆ ಸಿಬಿಐ?

    ಹಾಥರಸ್​ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts