More

    50 ವರ್ಷದಿಂದ ಬರ್ಗರ್​ ಸೇವಿಸುತ್ತಿರುವ ಈ ವ್ಯಕ್ತಿಯಿಂದ ಸಂಭ್ರಮಾಚರಣೆ: ಗಿನ್ನಿಸ್​​ ದಾಖಲೆ

    ನ್ಯೂಯಾರ್ಕ್​: ಆಧುನಿಕತೆಯಲ್ಲಿ ಜೀವನ ಶೈಲಿ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಯೂ ಬದಲಾಗಿದೆ. ಪಾಶ್ಚಾತ್ಯ ಆಹಾರ ಶೈಲಿಯನ್ನು ಇಷ್ಟಪಡುವ ಸಂಖ್ಯೆ ಭಾರತದಲ್ಲೂ ಕಡಿಮೆಯೇನಿಲ್ಲ.

    ಫಾಸ್ಟ್​ ಫುಡ್​ ಎಂಬುದು ಪಾಶ್ಚಾತ್ಯರಿಂದಲೇ ಬಂದಿದ್ದು, ಈಗ ನಮ್ಮಲ್ಲೂ ಕೂಡ ಇದಕ್ಕೆ ಸಾಕಷ್ಟು ಮಂದಿ ಅನುಸರಿಸುತ್ತಿದ್ದಾರೆ. ಆದರೆ ಆಹಾರವನ್ನೇ ಇಲ್ಲಿ ಇದನ್ನೇ ಆಹಾರವನ್ನಾಗಿ ಬಳಸುವುದಿಲ್ಲ.

    ನಮ್ಮಲ್ಲಿ ಆಗೊಮ್ಮೆ ಈಗೊಮ್ಮೆ ಫಾಸ್ಟ್​ಫುಡ್​ ತಿನ್ನುವುದು ಸಾಮಾನ್ಯ. ಆದರೆ ಅಮೆರಿಕದಲ್ಲಿರುವ ಮನುಷ್ಯನೊಬ್ಬ ಕಳೆದ 50 ವರ್ಷಗಳಿಂದ ಮ್ಯಾಕ್​​ಡೊನಾಲ್ಡ್ಸ್​ ಫಾಸ್ಟ್​​ಫುಡ್​ ತಿಂದೇ ಜೀವಿಸುತ್ತಿದ್ದಾನೆ. ಹಾಗಾಗಿ 50ನೇ ವರ್ಷಕ್ಕೆ ಸಂಭ್ರಮಾಚರಣೆಯನ್ನು ಮಾಡಿಕೊಂಡಿದ್ದಾನೆ. ಈತನ ಹೆಸರು ಡಾನ್​​ ಗೋರ್ಸ್ಕೆ.

    ಈತನಿಗೆ ಫಾಸ್ಟ್​ಫುಡ್​ ಎಂದರೆ ಪಂಚಪ್ರಾಣ. ಪ್ರತಿದಿನ ಈತ ಸೇವಿಸುವುದು ಇದನ್ನೆ. ಈವರೆಗೆ ಈತ 32,000 ಸಾವಿರ ಬರ್ಗರ್​ಗಳನ್ನು ಸೇವಿಸಿದ್ದಾನಂತೆ. 1972ರಲ್ಲಿ ಈತ ಬರ್ಗರ್​ ತಿನ್ನಲು ಆರಂಭಿಸಿದ್ದನಂತೆ ಈಗ 50 ವರ್ಷದ ತುಂಬಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

    ನಾನು ಫಾಸ್ಟ್​​ಫುಡ್​​ನ್ನು ತುಂಬಾ ಪ್ರೀತಿಸುತ್ತೇನೆ. 50 ವರ್ಷ ಪೂರೈಸಿದ್ದು, ತುಂಬಾ ಖುಷಿಯಾಗುತ್ತಿದ್ದೇನೆ. ನಾನು ಬದುಕಿರುವವರೆಗೂ ಇದನ್ನೇ ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾನೆ.

    ಸತತ ಐದು ದಶಕಗಳ ಕಾಲ ಬರ್ಗರನ್ನೇ ತಿಂದು ಬದುಕುತ್ತಿರುವ ಈತನ ಹೆಸರು ಗಿನ್ನಿಸ್​ ದಾಖಲೆಯಲ್ಲೂ ಸೇರಿದೆ. ಬಹುಶಃ ಈ ದಾಖಲೆಯನ್ನು ಬೇರೆಯವರು ಮುರಿಯಲು ಸಾಧ್ಯವಿಲ್ಲವೇನೋ. (ಏಜೆನ್ಸೀಸ್​)

    ತಾಯಿ ಮೊಬೈಲ್​ನಿಂದ 31 ಚೀಸ್​ಬರ್ಗರ್​ ಆರ್ಡರ್​ ಮಾಡಿದ ಪುಟ್ಟ ಕಂದಮ್ಮ, ಆಮೇಲೇನಾಯ್ತು ಗೊತ್ತಾ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts