More

    ಇಸ್ರೇಲ್​ನಲ್ಲಿ ಹೋಳಿ, ಪುರಿಮ್ ಸಂಭ್ರಮ: ಟೆಲ್ ಅವಿವ್‌ನಲ್ಲಿ ಹಿಂದು- ಯಹೂದಿಗಳು ಒಟ್ಟಿಗೆ ಸೇರಿ ಆಚರಣೆ..!

    ಟೆಲ್ ಅವಿವ್(ಇಸ್ರೇಲ್​): ಹೋಳಿಯು ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಬಣ್ಣದ ಹಬ್ಬ ಮನಸ್ಸಿಗೆ ಮುದ ಮತ್ತು ಸಂತೋಷವನ್ನು ನೀಡುತ್ತದೆ. ಹೋಳಿಯನ್ನು ಭಾರತ ಮಾತ್ರವಲ್ಲದೆ ಪ್ರಪಂಚದ ಇತರ ಭಾಗಗಳಲ್ಲಿಯೂ ಉತ್ಸಾಹದಿಂದ ಆಚರಿಸಲಾಗುತ್ತದೆ. ಅದೇ ರೀತಿ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಹೋಳಿ ಆಚರಣೆ ಮಾಡಲಾಗಿದ್ದು, ವಿವರ ಇಲ್ಲಿದೆ.

    ಇದನ್ನೂ ಓದಿ: ನಡು ರಸ್ತೇಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಕಾದಿತ್ತು ಬಿಗ್​ಶಾಕ್!

    ಟೆಲ್ ಅವಿವ್ ಯಾಫೊ ಮುನ್ಸಿಪಾಲಿಟಿಯ ಸಹಯೋಗದೊಂದಿಗೆ, ಭಾರತದ ರಾಯಭಾರ ಕಚೇರಿಯು ಹೋಳಿ ಮತ್ತು ಪುರಿಮ್ ಹಬ್ಬಗಳ ಸಂದರ್ಭದಲ್ಲಿ ‘ಇಂಡಿಯಾ ಇನ್ ಫ್ಲೀ ಮಾರ್ಕೆಟ್’ ಕಾರ್ಯಕ್ರಮವನ್ನು ಆಚರಿಸಿತು. 2000 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಬಣ್ಣಗಳ ಎರಚಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದರ ಜತೆಗೆ ಭಾರತೀಯ ನೃತ್ಯ, ಶಾಸ್ತ್ರೀಯ ಸಂಗೀತ, ಉಡುಗೆ, ತೊಡುಗೆ ಸೇರಿದಂತೆ ಎಲ್ಲವನ್ನೂ ಕಂಡು ಆನಂದಿಸಿದರು.

    ಫ್ಲೀ ಮಾರ್ಕೆಟ್ ಈವೆಂಟ್‌ನಲ್ಲಿ ಡೆಪ್ಯೂಟಿ ಚೀಫ್ ಆಫ್ ಮಿಷನ್ ನ ರಾಜೀವ್ ಬೋಡ್ವಾಡೆ ಮತ್ತು ಟೆಲ್ ಅವಿವ್ ಯಾಫೊ ಪುರಸಭೆಯ “ಮಿಶ್ಲಾಮಾ ಲಿಯಾಫೊ” ನ ಸಿಇಒ ರಫಿ ಶುಶನ್ ಭಾಗವಹಿಸಿದ್ದರು.

    ಯಹೂದಿ ಪುರಿಮ್: ಇದು ಯಹೂದಿಗಳನ್ನು ವಿನಾಶದಿಂದ ಉಳಿಸಿದ ಹಾಮಾನ್ ಎಂಬ ಅಕೆಮೆನಿಡ್ ಸಾಮ್ರಾಜ್ಯದ ಅಧಿಕಾರಿಯ ಸ್ಮರಿಸುವ ಹಬ್ಬವಾಗಿದ್ದು, ಇದನ್ನು ಬುಕ್ ಆಫ್ ಎಸ್ತರ್ ನಲ್ಲಿ ವಿವರಿಸಲಾಗಿದೆ. ಈ ಹಬ್ಬದ ಆಚರಣೆಗಳಲ್ಲಿ ಜನರು ವರ್ಣರಂಜಿತ ಉಡುಪು ಧರಿಸುತ್ತಾರೆ, ಪರಸ್ಪರ ಉಡುಗೊರೆ ಹಂಚಿಕೊಳ್ಳುತ್ತಾರೆ ಈ ಹಬ್ಬವು ಹೋಳಿಯೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿದೆ ಎಂದು ನಂಬಲಾಗಿದೆ. ಹೋಳಿ ಮತ್ತು ಪುರಿಮ್‌ನ ಈ ಸಂಯೋಜನೆಯು ಟೆಲ್ ಅವೀವ್‌ನ ಬೀದಿಗಳಲ್ಲಿ ಸಂಸ್ಕೃತಿ ಮತ್ತು ಸಂತೋಷದ ವಿನಿಮಯದ ಭವ್ಯವಾದ ದೃಶ್ಯವನ್ನು ಪ್ರದರ್ಶಿಸಿತು.

    “ಎರಡೂ ಹಬ್ಬಗಳನ್ನು ದುಷ್ಟಶಕ್ತಿಗಳ ಮೇಲೆ ವಿಜಯ ಸಾಧಿಸುವ ಸಲುವಾಗಿ ಆಚರಿಸಲಾಗುತ್ತದೆ. ಎರಡೂ ಹಬ್ಬಗಳನ್ನು ಒಂದೇ ಸಮಯದಲ್ಲಿ ಆಚರಿಸಲಾಗುವುದು ಮತ್ತೊಂದು ವಿಶೇಷವಾಗಿದೆ. ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವಾಗುವುದರಿಂದ ಎರಡೂ ಹಬ್ಬಗಳನ್ನು ಹೊರಾಂಗಣದಲ್ಲಿ ಆಚರಿಸಲಾಗುತ್ತದೆ. ಇಸ್ರೇಲ್​ನಲ್ಲಿ ಎರಡೂ ಸಮುದಾಯಗಳು ಒಟ್ಟಿಗೆ ಸೇರುತ್ತವೆ, ನೃತ್ಯ ಮಾಡಲಾಗುತ್ತದೆ. “ಹಾಡಿ, ತಿನ್ನಿ ಮತ್ತು ತಮಾಷೆ ಮಾಡಿ” ಎಂಬ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತದೆ.

    ಒಂದು ತಿಂಗಳ ನಂತರ ಅನುಷ್ಕಾಶರ್ಮಾ ಪೋಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts