More

    ಗಲ್ವಾನ್ ಕಣಿವೆ ಸಂಘರ್ಷ: ಅಮೆರಿಕ ಗುಪ್ತಚರ ವರದಿ ಬಿಚ್ಚಿಟ್ಟ ರಹಸ್ಯವೇನು?

    ನವದೆಹಲಿ: ಜೂನ್ 15 ರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಘೋರ ಯುದ್ಧದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಕೆಲವು ದಿನಗಳ ನಂತರ, ಅಮೆರಿಕದ ಗುಪ್ತಚರ ವರದಿಯು ಚೀನಾವು ಭಾರತೀಯ ಸೈನ್ಯದ ಮೇಲೆ ದಾಳಿ ನಡೆಸಲು ಆದೇಶಿಸಿತ್ತು ಎಂದು ಹೇಳಿದೆ. ಈ ಘಟನೆಯು ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

    ಇದನ್ನೂ ಓದಿ: ಟಿಬೆಟ್​ನಲ್ಲಿ ನದಿ ಹರಿವಿನ ದಿಕ್ಕನ್ನೇ ಬದಲಿಸಿರುವ ಚೀನಾ, ನೇಪಾಳ ಬಹುತೇಕ ಭಾಗ ಕಬಳಿಕೆ

    ಚೀನಾ ಸೈನಿಕರ ಸಾವುನೋವುಗಳನ್ನು ವರದಿಯು ದೃಢಪಡಿಸಿದೆ. ವಿಶೇಷವೆಂದರೆ, ಬೀಜಿಂಗ್‌ನಲ್ಲಿನ ಚೀನಿ ಕಮ್ಯೂನಿಟಿ ಪಕ್ಷದ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಸೋಮವಾರ ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ನಲ್ಲಿ ನಡೆದ ಸಂಘರ್ಷದಲ್ಲಿ ಕನಿಷ್ಠ 20 ಸೈನಿಕರನ್ನು ಕಳೆದುಕೊಂಡಿರುವುದರ ಬಗ್ಗೆ ವರದಿ ಮಾಡಿತ್ತು.

    ಬೀಜಿಂಗ್ ಉಲ್ಬಣವನ್ನು ತಪ್ಪಿಸಲು ಬಯಸಿರುವುದೇ ಚೀನಾ ತನ್ನ ಸಾವುನೋವುಗಳ ಸಂಖ್ಯೆಯನ್ನು ಬಿಡುಗಡೆ ಮಾಡದಿರಲು ಪ್ರಮುಖ ಕಾರಣ” ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
    “ಚೀನಾವು ಸಾವಿನ ಸಂಖ್ಯೆಯನ್ನು (ಕನಿಷ್ಠ 20 ಜನರ) ಬಿಡುಗಡೆ ಮಾಡಿದರೆ, ಭಾರತ ಸರ್ಕಾರ ಮತ್ತೆ ಒತ್ತಡಕ್ಕೆ ಒಳಗಾಗುತ್ತದೆ” ಎಂದು ಅದು ಹೇಳಿದೆ.

    ಇದನ್ನೂ ಓದಿ: ಭಾರತೀಯ ಇಂಜಿನಿಯರ್​ ಅನ್ನು ಜಾಗತಿಕ ಉಗ್ರನನ್ನಾಗಿಸಲು ಪಾಕ್​ ಯತ್ನ; ಅಮೆರಿಕ ಅಡ್ಡಗಾಲು

    ಪೂರ್ವ ಲಡಾಖ್​​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 35 ಸೈನಿಕರು ಸಾವನ್ನಪ್ಪಿದ ಕುರಿತು ಸುದ್ದಿ ಸಂಸ್ಥೆ ಪಿಟಿಐ ಜೂನ್ 17 ರಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿತ್ತು. ಅಮೆರಿಕದ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ, ಈ ಸಂಖ್ಯೆ ಸಂಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಮತ್ತು ಗಂಭೀರವಾಗಿ ಗಾಯಗೊಂಡ ಒಟ್ಟು ಸೈನಿಕರ ಸಂಯೋಜನೆಯಾಗಿರಬಹುದು ಎಂದೂ ತಿಳಿಸಿದೆ. 50 ವರ್ಷಗಳ ಇತಿಹಾಸದಲ್ಲೇ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಅತಿದೊಡ್ಡ ಸಂಘರ್ಷದಲ್ಲಿ ಕರ್ನಲ್ ಸೇರಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ಜೂನ್ 15 ರಂದು ಹುತಾತ್ಮರಾದರು.

    ಹೇಡಿಗಳಂತೆ ಗುಂಡು ಹಾರಿಸಿದ ಉಗ್ರರನ್ನು ಕೊಂದ ಸಿಆರ್​ಪಿಎಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts