ಹೇಡಿಗಳಂತೆ ಗುಂಡು ಹಾರಿಸಿದ ಉಗ್ರರನ್ನು ಕೊಂದ ಸಿಆರ್​ಪಿಎಫ್​

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿರುವ ಬ್ಯಾಂಡ್‌ಜೂ ಏರಿಯಾದಲ್ಲಿ ಇಂದು ಮುಂಜಾನೆ ಇಬ್ಬರು ಉಗ್ರರನ್ನು ಸಿಆರ್​ಪಿಎಫ್​ ಸಿಬ್ಬಂದಿ ಹತ್ಯೆಗೈದಿದ್ದಾರೆ. ಈ ಎನ್​ಕೌಂಟರ್​​ನಲ್ಲಿ ಓರ್ವ ಸಿಆರ್​ಪಿಎಫ್​ ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ. ಸತ್ತ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರಿಂದ ಅಪಾರ ಪ್ರಮಾಣ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಕಾಶ್ಮೀರ ವಲಯದ ಐಜಿಪಿ ಮಾಹಿತಿ ನೀಡಿದ್ದಾರೆ. ಉಗ್ರರ ವಿರುದ್ಧ ಹೋರಾಟದಲ್ಲಿ ಸಿಆರ್​ಪಿಎಫ್​ನ ಹೆಡ್​ ಕಾನ್ಸ್ಟೇಬಲ್​ ಓರ್ವರು ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಿದರೂ ಫಲಕಾರಿ ಆಗಲಿಲ್ಲ ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ … Continue reading ಹೇಡಿಗಳಂತೆ ಗುಂಡು ಹಾರಿಸಿದ ಉಗ್ರರನ್ನು ಕೊಂದ ಸಿಆರ್​ಪಿಎಫ್​