More

    ಮಹಿಳೆಯೊಂದಿಗೆ ಡೇಟಿಂಗ್: ಕೊಲಂಬಿಯಾದಲ್ಲಿ ಯುಎಸ್ ಹಾಸ್ಯನಟನ ಅಪಹರಿಸಿ ಕೊಲೆ!

    ವಾಷಿಂಗ್ಟನ್​: ಕೊಲಂಬಿಯಾ ಪ್ರವಾಸದ ಸಂದರ್ಭ ಅಪಹರಣಕ್ಕೊಳಗಾಗಿದ್ದ ಅಮೇರಿಕಾದ ಹಾಸ್ಯನಟನನ್ನು ಸೋಮವಾರ ಇರಿದು ಕೊಲ್ಲಲಾಗಿದೆ. ಮಿನ್ನೇಸೋಟದಲ್ಲಿ ವಾಸಿಸುತ್ತಿದ್ದ ಏಷ್ಯನ್-ಅಮೆರಿಕನ್ ಟೌ ಗೆರ್ ಕ್ಸಿಯಾಂಗ್(50) ಘಟನೆ ಸಂಭವಿಸಿದಾಗ ದಕ್ಷಿಣ ಅಮೆರಿಕಾದದಲ್ಲಿ ವಿಹಾರಕ್ಕೆ ತೆರಳಿದ್ದರು. ಅವರ ಸಹೋದರ ಎಹ್ ಕ್ಸಿಯಾಂಗ್ ಮಂಗಳವಾರ ಫೇಸ್‌ಬುಕ್‌ನಲ್ಲಿ ಹತ್ಯೆಯನ್ನು ಖಚಿತಪಡಿಸಿದ್ದಾರೆ.

    ಇದನ್ನೂ ಓದಿ: ಪನ್ನುನ್ ಹತ್ಯೆ ಪ್ರಕರಣ: ಭಾರತೀಯ ಪ್ರಜೆ ಹಸ್ತಾಂತರಕ್ಕೆ ಅಮೆರಿಕಾ ಒತ್ತಾಯ- ನಿಖಿಲ್ ಗುಪ್ತಾ ಯಾರು?
    “ನಮ್ಮ ಕುಟುಂಬದ ಪ್ರೀತಿಯ ಸದಸ್ಯ ಟೌ ಗೆರ್ ಕ್ಸಿಯಾಂಗ್ ಅವರ ಮೃತದೇಹ ಪತ್ತೆಯಾಗಿದ್ದು, ಈ ಹೃದಯವಿದ್ರಾವಕ ಸುದ್ದಿಯನ್ನು ನಾವು ಅಪಾರ ದುಃಖದಿಂದ ಹಂಚಿಕೊಳ್ಳುತ್ತೇವೆ. ನೋವು ವರ್ಣನಾತೀತವಾಗಿದೆ” ಎಂದು ಕ್ಸಿಯಾಂಗ್ ಅವರ ಕುಟುಂಬವು ಪೋಸ್ಟ್​ನಲ್ಲಿ ಬರೆದಿದೆ.
    ಕ್ಸಿಯಾಂಗ್ ನ.29 ರಂದು ರಜಾದಿನಗಳನ್ನು ಕಳೆಯಲು ಕೊಲಂಬಿಯಾದ ಮೆಡೆಲಿನ್‌ಗೆ ಆಗಮಿಸಿದ್ದರು. ಭಾನುವಾರ ಅವರು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ಮಹಿಳೆಯನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ನಿಗೂಢ ಮಹಿಳೆಯನ್ನು ಭೇಟಿಯಾದ ಕೂಡಲೇ ಪುರುಷರ ಗುಂಪೊಂದು ಆತನ ಮೇಲೆ ದಾಳಿ ಮಾಡಿ ಅಪಹರಿಸಿತ್ತು.

    ಅಪಹರಣಕಾರರು ಆತನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹಣಕ್ಕಾಗಿ ಆತನ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕಿಸಿದರು. ಅವರು $ 2,000 ಗೆ ಬೇಡಿಕೆಯಿಟ್ಟರು. ಆದರೆ ಹಣವನ್ನು ಸಂಗ್ರಹಿಸದೆ ಒಂದು ದಿನದ ನಂತರ ಆತನನ್ನು ಕೊಂದಿದ್ದಾರೆ.

    ಲಾ ಕೊರ್ಕೊವಾಡೊ ಕಂದರದ ನೀರಿನಲ್ಲಿ ಆತನ ದೇಹವು ಪತ್ತೆಯಾಗಿದೆ. ಅನೇಕ ಇರಿತದ ಗಾಯಗಳು ಮತ್ತು ಬಲವಾದ ಒಡೆತ ಕಂಡುಬಂದಿದೆ. ಆತನ ದೇಹವನ್ನು ಪತ್ತೆ ಮಾಡಿದ ನಂತರ, ಪೊಲೀಸರು ಆತ ವಾಸವಿದ್ದ ಅಪಾರ್ಟ್ಮೆಂಟ್​ಗೆ ಹೋಗಿದ್ದು, ಆತನ ಕೋಣೆಯಿಂದ ವಸ್ತುಗಳನ್ನು ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಮಹಿಳೆ ಕಂಡುಬಂದಿದ್ದು, ಆಕೆಯನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ ಓಡಿಹೋಗಿದ್ದಾಳೆ.

    ಕ್ಸಿಯಾಂಗ್ ಒಬ್ಬ ಲಾವೋಷಿಯನ್-ಅಮೇರಿಕನ್ ಹಾಸ್ಯನಟ, ಶಿಕ್ಷಣತಜ್ಞ ಮತ್ತು ಹಾಸ್ಯನಟ, ಈತ ಮಿನ್ನೇಸೋಟದ ಸೇಂಟ್ ಪಾಲ್‌ನಲ್ಲಿ ಬೆಳೆದವರು. ಪ್ರಾಥಮಿಕವಾಗಿ ಆಗ್ನೇಯ ಏಷ್ಯಾದಲ್ಲಿ ವಾಸಿಸುವ ಸ್ಥಳೀಯ ಗುಂಪಾದ ಹ್ಮಾಂಗ್ ಜನರ ಪರ ಸಮರ್ಥನೆಗಾಗಿ ಹೆಸರುವಾಸಿಯಾಗಿದ್ದರು.
    ಅಧಿಕಾರಿಗಳ ಪ್ರಕಾರ ಕೊಲಂಬಿಯಾದಲ್ಲಿ ಅಪಹರಣಗಳು ಹೆಚ್ಚುತ್ತಿವೆ. ಕಳೆದ ತಿಂಗಳಿಂದ ಕ್ಸಿಯಾಂಗ್ ಸೇರಿದಂತೆ ಮೂವರು ಅಮೇರಿಕನ್ ಪ್ರವಾಸಿಗರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಶ್ರೀದೇವಿ ಪುತ್ರಿಗೆ ಮದುವೆ ಫಿಕ್ಸ್ ಆಯ್ತಾ? ಬಾಯ್​ಫ್ರೆಂಡ್ ಜೊತೆ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ ಜಾಹ್ನವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts