More

    ಕರೊನಾ ಕಟ್ಟಿಹಾಕಲು ಲಾಕ್​ಡೌನ್ ಕ್ರಮ ತೆಗೆದುಕೊಳ್ಳಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಸಲಹೆ

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸರಪಳಿಯನ್ನು ಮುರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್​ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್​ ಭಾನುವಾರ ಸಲಹೆ ನೀಡಿದೆ.

    ಕರೊನಾ ಎರಡನೇ ಅಲೆಯನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ದೇಶದ ಉನ್ನತ ನ್ಯಾಯಾಲಯ ಈ ಆದೇಶವನ್ನು ಮಾಡಿದೆ.

    ದೇಶದಲ್ಲಿ ಕರೊನಾ ಪ್ರಕರಣಗಳ ಏರಿಕೆ ಮುಂದುವರಿದಿದ್ದು, ವೈರಸ್​ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ದಾಖಲೆ ರೂಪದಲ್ಲಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುತ್ತೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅವರು ತೆಗೆದುಕೊಳ್ಳಲು ಯೋಜಿಸುವ ಕ್ರಮಗಳನ್ನು ಸಹ ದಾಖಲಿಸಿ ಎಂದು ಸುಪ್ರೀಂಕೋರ್ಟ್​ ಹೇಳಿದೆ.

    ಸಾಮೂಹಿಕ ಸಭೆ ಮತ್ತು ಕರೊನಾ ವೇಗವಾಗಿ ಹರಡಲು ಕಾರಣವಾಗುವ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಸಂಪೂರ್ಣ ಬ್ಯಾನ್​ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಕರೊನಾ ಎರಡನೇ ಅಲೆಗೆ ಕಡಿವಾಣ ಹಾಕಲು ಲಾಕ್​ಡೌನ್​ ಅನ್ನು ಗಂಭೀರವಾಗಿ ತೆಗೆದುಕೊಳ್ಳಲು ಇದೇ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇವೆಂದು ಸುಪ್ರೀಂಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

    ಬಡ ಸಮುದಾಯಗಳ ಮೇಲೆ ಲಾಕ್‌ಡೌನ್‌ನ ಸಾಮಾಜಿಕ ಹಾಗೂ ಆರ್ಥಿಕ ಪ್ರಭಾವದ ಬಗ್ಗೆ ನಾವು ನಿರ್ದಿಷ್ಟವಾಗಿ ತಿಳಿದಿದ್ದೇವೆ. ಲಾಕ್‌ಡೌನ್ ಹೇರುವ ಮುನ್ನ ಈ ಸಮುದಾಯಗಳ ಅಗತ್ಯತೆಗಳನ್ನು ಪೂರೈಸಲು ಮೊದಲೇ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

    ಭಾರತದಲ್ಲಿ ಭಾನುವಾರ 3.92 ಲಕ್ಷ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅದೇ ಸಮಯದಲ್ಲಿ ವೈರಸ್ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,689 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪ್ರಕರಣಗಳಲ್ಲಿನ ಈ ತೀಕ್ಷ್ಣವಾದ ಉಲ್ಬಣವು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡವನ್ನು ಬೀರುತ್ತಿದೆ. ಇದರ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕ ಸಂಬಂಧಿತ ಉಪಕರಣಗಳ ಕೊರತೆ ಉಂಟಾಗಿದೆ. (ಏಜೆನ್ಸೀಸ್​)

    ಕೋವಿಡ್-19 ಸೋಂಕಿಗೆ ಬಲಿಯಾದವರಲ್ಲಿ ಪುರುಷರೇ ಅಧಿಕ!

    Web Exclusive | ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಡೆಗೆ ವಿದ್ಯಾರ್ಥಿಗಳ ವಿರೋಧ: ಪರೀಕ್ಷೆ ಮುಗಿಯದಿದ್ದರೂ ಮುಂದಿನ ತರಗತಿಗೆ ಸಿದ್ಧತೆ!

    ಲಸಿಕೆಗೆ ಹೆದರಿ ಪೋಡು ಬಿಟ್ಟು ಕಾಡಿಗೆ ಗಿರಿಜನರ ಓಟ!; ತಪ್ಪು ತಿಳಿವಳಿಕೆಯಿಂದ ಇಂಜೆಕ್ಷನ್ ಪಡೆಯಲು ಹಿಂದೇಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts