More

    ಯುಪಿಎಸ್​ಸಿ ನಾಗರಿಕ ಸೇವೆ ಪ್ರಿಲಿಮ್ಸ್​ ಪರೀಕ್ಷೆ ದಿನಾಂಕ ಪರಿಷ್ಕರಣೆ ಆಗಿಲ್ಲ, ಮೇ 31ಕ್ಕೆ ನಡೆಯಲಿವೆ ಪರೀಕ್ಷೆ

    ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್​ಸಿ) ಆಯೋಜಿಸುವ ನಾಗರಿಕ ಸೇವೆಗಳ ಪಿಲಿಮ್ಸ್​ ಪರೀಕ್ಷೆ ದಿನಾಂಕ ಸದ್ಯಕ್ಕೆ ಪರಿಷ್ಕರಣೆಗೊಂಡಿಲ್ಲ. ಅದು ನಿಗದಿಯಂತೆ ಮೇ 31ಕ್ಕೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಯುಪಿಎಸ್​ಸಿ, ನಾಗರಿಕ ಸೇವೆಗಳು-2020 ಪಿಲಿಮ್ಸ್​, ಇಂಜಿನಿಯರಿಂಗ್​ ಸರ್ವಿಸ್​ ಮೇನ್​ ಮತ್ತು ಜಿಯೋಲಿಜಿಸ್ಟ್​ ಸೇವೆಗಳು ಮೇನ್​ ಪರೀಕ್ಷೆಗಳು ಈ ಹಿಂದೆ ಮೇ 31ಕ್ಕೆ ನಿಗದಿಯಾಗಿದ್ದವು. ಸದ್ಯ ಕೋವಿಡ್​ 19 ಹರಡುವಿಕೆ ತಡೆಯಲು ದೇಶಾದ್ಯಂತ ಮೇ 3ರವರೆಗೆ ಲಾಕ್​ಡೌನ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ಸದ್ಯಕ್ಕೆ ಪರಿಷ್ಕರಣೆಗೊಳಿಸುವ ಅನಿವಾರ್ಯ ಉದ್ಭವಿಸಿಲ್ಲ. ಹಾಗಾಗಿ ಮೇ 31ಕ್ಕೆ ಪರೀಕ್ಷೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.

    ಒಂದು ವೇಳೆ ದಿನಾಂಕ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾದರೆ, ಪರಿಷ್ಕೃತ ದಿನಾಂಕದ ಬಗ್ಗೆ ಪರೀಕ್ಷಾರ್ಥಿಗಳಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

    ಕೇರಳ ಹೈಕೋರ್ಟ್‌ನಿಂದ ಬಂತೊಂದು ಆದೇಶ: ಸಹಸ್ರಾರು ವಾಹನ ಮಾಲೀಕರು ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts