More

    3 ವರ್ಷಗಳ ನಂತರ ಉಪೇಂದ್ರ; 4 ವರ್ಷಗಳ ನಂತರ ಹೋಂ ಮಿನಿಸ್ಟರ್

    ಬೆಂಗಳೂರು: ಕರೊನಾ 2 ಅಲೆಗಳ ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಚಿತ್ರಗಳೆಲ್ಲವೂ ಬಿಡುಗಡೆಯಾದರೂ, ಅದೇಕೋ ಉಪೇಂದ್ರ ಅಭಿನಯದ ಒಂದು ಚಿತ್ರವೂ ಬಿಡುಗಡೆ ಅಗಿರಲಿಲ್ಲ. ಉಪೇಂದ್ರ ಅಭಿನಯದ 3-4 ಚಿತ್ರಗಳು ಮುಗಿದಿದ್ದರೂ, ಚಿತ್ರಮಂದಿರಗಳಲ್ಲಿ ಅವರ ದರ್ಶನ ಮಾತ್ರ ಆಗಿರಲಿಲ್ಲ. ಈಗ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’ ಚಿತ್ರವು ಏಪ್ರಿಲ್ 01ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರ 2018ರಲ್ಲೇ ಸೆಟ್ಟೇರಿತ್ತು. ಕಾರಣಾಂತರಗಳಿಂದ ತಡವಾಗಿ ಈಗ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ.

    ಇದುವರೆಗೂ ಉಪೇಂದ್ರ ಇಂಥದ್ದೊಂದು ಪಾತ್ರ ಮಾಡಿರಲಿಲ್ಲವಂತೆ. ಅದನ್ನು ಹೇಳಿಕೊಳ್ಳುವ ಅವರು, ‘ನಾನು ಇದುವರೆಗೂ ಮಾಡದಿರುವ ಒಂದು ವಿಭಿನ್ನವಾದ ಪಾತ್ರ ಇದು. ಇಲ್ಲಿನ ನಿರ್ಮಾಪಕರು ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ, ತೆಲುಗು ನಿರ್ಮಾಪಕರು ಈ ಚಿತ್ರವನ್ನು ನಿರ್ವಿುಸಿದ್ದಾರೆ. ಇನ್ನೂ 100 ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡುವಂತಾಗಬೇಕು. ಆ ರೀತಿಯಲ್ಲಿ ಈ ಚಿತ್ರವನ್ನು ಯಶಸ್ವಿಗೊಳಿಸೋಣ’ ಎನ್ನುತ್ತಾರೆ ಉಪೇಂದ್ರ.

    ಚಿತ್ರದಲ್ಲಿ ನಾಯಕಿಯಾಗಿ ವೇದಿಕಾ ನಟಿಸಿದ್ದಾರೆ. ಅವರಿಗೆ ಉಪೇಂದ್ರ ಜತೆ ನಟಿಸಿದ್ದು ಖುಷಿ ತಂದಿದೆಯಂತೆ. ‘ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದ್ದು, ನಾನಿಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದೀನಿ’ ಎನ್ನುತ್ತಾರೆ. ‘ಹೋಂ ಮಿನಿಸ್ಟರ್’ ನಿರ್ವಿುಸಿರುವುದು ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವೀರಮಾಚನನಿ. ಸುಜಯ್ ಕೆ ಶ್ರೀಹರಿ ನಿರ್ದೇಶನದ ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ, ಕುಂಟುನಿ ಎಸ್. ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.

    10ಕ್ಕೆ ಹೊಸ ಚಿತ್ರ ಘೋಷಣೆ: ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಈ ವರ್ಷ ಶುರುವಾಗಬಹುದು ಎಂಬ ಮಾತಿತ್ತು. ಮೊದಲ ಹಂತವಾಗಿ ಮಾ.10ಕ್ಕೆ ತಮ್ಮ ನಿರ್ದೇಶನದ ಚಿತ್ರವನ್ನು ಘೋಷಿಸುವುದಾಗಿ ಉಪೇಂದ್ರ ಹೇಳಿಕೊಂಡಿದ್ದಾರೆ. ಆ ಚಿತ್ರ ಯಾವುದು? ಹೆಸರೇನು? ಯಾರೆಲ್ಲ ಇರಲಿದ್ದಾರೆ? ಎಂಬ ಮಾಹಿತಿ ಅಂದೇ ಹೊರಬೀಳಲಿದೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts