More

    ಬಾಂಗ್ಲಾದ ‘ಬೇಗಮ್ಸ್ ಕದನ’: ಭಾರತ – ಚೀನಾ ವಿರೋಧ ಪಾಳಯದಲ್ಲೇಕಿದೆ ಅಮೆರಿಕಾ? ಆಸಕ್ತಿದಾಯಕ ಸಂಗತಿ ಇಲ್ಲಿದೆ…

    ನವದೆಹಲಿ: ಬಾಂಗ್ಲಾದೇಶದಲ್ಲಿ ಮುಂದಿನ ತಿಂಗಳು ಅಂದರೆ ಜನವರಿ 7ಕ್ಕೆ ನಡೆಯಲಿರುವ ಚುನಾವಣೆಯು ಆ ದೇಶಕ್ಕೆ ಮಾತ್ರವಲ್ಲದೆ ಭಾರತ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು ಆಸಕ್ತಿ ತೋರುವಂತಾಗಿದೆ. ಪ್ರಧಾನಿ ಶೇಖ್ ಹಸೀನಾ ಬೆಂಬಲಕ್ಕೆ ಭಾರತ, ರಷ್ಯಾ ಮತ್ತು ಚೀನಾ ನಿಂತಿದ್ದರೆ, ಅವರ ವಿರೋಧಿ ಖಲೀದಾ ಜಿಯಾ ಪರವಾಗಿ ಅಮೆರಿಕಾ ನಿಂತಿದೆ. ಪರಸ್ಪರ ವಿರೋಧಿಗಳಾದ ಭಾರತ, ಚೀನಾ ಮತ್ತು ರಷ್ಯಾ ಒಂದು ಪಾಳಯ ಹಾಗೂ ಭಾರತದ ಮಿತ್ರ ರಾಷ್ಟ್ರ ಅಮೆರಿಕಾ ವಿರೋಧಿ ಪಾಳಯದಲ್ಲಿ ನಿಂತು ಬೆಂಬಲಿಸುತ್ತಿರುವುದೇಕೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

    ಇದನ್ನೂ ಓದಿ: ಮೋದಿ ಜತೆ ಮೆಲೋನಿ ಸೆಲ್ಫಿ: ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆದ ಪೋಸ್ಟ್‌ – ನೆಟ್ಟಿಗರ ಶ್ಲಾಘನೆ
    ಭಾರತವು 1971 ರಲ್ಲಿ ಪಾಕಿಸ್ತಾನದಿಂದ ವಿಮೋಚನೆಗೊಳ್ಳಲು ಸಹಾಯ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸರ್ಕಾರದಲ್ಲಿ ಭಾರತದ ಹೂಡಿಕೆ ಹೆಚ್ಚಾಗಿದೆ. ಇದಿಷ್ಟೇ ಅಲ್ಲ, ನೆರೆಹೊರೆಯಲ್ಲಿ ದೇಶದ ಭದ್ರತೆ ದೃಷ್ಟಿಯಿಂದಲೂ ನಿರ್ಣಾಯಕವೆನಿಸುತ್ತದೆ. ಹೀಗಾಗಿ ಚುನಾವಣೆ ಪರಿಣಾಮವು ಭಾರತದ ಮೇಲೆ ಬೀರಿದೆ.

    ಇನ್ನು ದಶಕಗಳಷ್ಟು ಹಿಂದಿನಿಂದಲೂ ಬಾಂಗ್ಲಾದಲ್ಲಿ ವ್ಯಾಪಾರ ನಡೆಸುತ್ತಿರುವ ಚೀನಾ ಪ್ರಭಾವ ಹೊಂದಿದೆ. ಈಗಂತೂ ಚುನಾವಣೆಯಲ್ಲಿ ಅಮೇರಿಕದ ಹಸ್ತಕ್ಷೇಪ ಮಾಡುತ್ತಿರುವುದು ಅದಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಆದಾಗ್ಯೂ ಅಮೆರಿಕಾ ತನ್ನ ನಿಲುವು ಮಿತ್ರರಾಷ್ಟ್ರವಾದ ಭಾರತದ ಕಡೆಗಿಲ್ಲ. ಸಾಂಪ್ರದಾಯಿಕ ಎದುರಾಳಿ ರಷ್ಯಾ ಮತ್ತು ಚೀನಾ ಕಡೆ ಒಲವು ತೋರದ ವಿರೋಧ ಪಾಳೆಯದಲ್ಲಿ ತೋರಿಸುತ್ತಿದೆ. ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್​ಪಿ) ಯನ್ನು ಬೆಂಬಲಿಸುವ ಮೂಲಕ ಬಾಂಗ್ಲಾದಲ್ಲಿ ಪ್ರಭಾವಕ್ಕಾಗಿ ಯತ್ನಿಸುತ್ತಿದೆ.

    ಬಾಂಗ್ಲಾದಲ್ಲಿ ಮಿಲಿಟರಿ, ವ್ಯಾಪಾರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಉದ್ದೇಶಗಳಿಗಾಗಿ ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಈ ಎಲ್ಲ ದೇಶಗಳು ಆಸಕ್ತಿ ತೋರುತ್ತಿವೆ ಎಂದು ಢಾಕಾ ವಿವಿ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕ ಶಾಂತನು ಮಜುಂದಾರ್ ತಿಳಿಸಿದ್ದಾರೆ.

    ಶೇಖ್ ಹಸೀನಾ ಸರ್ಕಾರದ ಮೇಲೆ ಒತ್ತಡ ಹೇರಲು ಅಮೆರಿಕವು ‘ಮುಕ್ತ ಮತ್ತು ನ್ಯಾಯಯುತ ಚುನಾವಣೆ’ ವಿಷಯವನ್ನು ಬಳಸುತ್ತಿದೆ ಎಂದು ಢಾಕಾದಲ್ಲಿ ಕೆಲವರು ನಂಬುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆಡಳಿತ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಭಾರತ ಆ ಪಕ್ಷವನ್ನು ಬೆಂಬಲಿಸುತ್ತಿದೆ ಎಂದು ಇನ್ನೂ ಕೆಲವರು ಭಾರತವನ್ನು ದೂಷಿಸುತ್ತಾರೆ.
    ಅಮೆರಿಕಾಗೆ ಏಕೆ ಆಸಕ್ತಿ?: ವರ್ಷಗಳಿಂದ ವಿವಿಧ ವಿಷಯಗಳಲ್ಲಿ ಬಾಂಗ್ಲಾ ಜತೆ ಅಮೆರಿಕಾಗೆ ವೈರುಧ್ಯವಿದೆ. ಮೊದಲನೆಯದಾಗಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ ಬಾಂಗ್ಲಾದೇಶ ರಚನೆಯಾದಾಗ ಅಮೆರಿಕಾ ವಿರೋಧಿಸಿತ್ತು. ಅದು ಈಗಲೂ ಮುಂದುವರೆದಿದೆ. ಎರಡನೆಯದಾಗಿ, ವಾಷಿಂಗ್ಟನ್ ಬಿಎನ್​ಪಿ ಮತ್ತು ಖಲೀದಾ ಜಿಯಾ ಜೊತೆಗೆ ಹೆಚ್ಚಿನ ಅನುಕೂಲ ಕಂಡುಕೊಳ್ಳುತ್ತದೆ, ಇದು ಹಳೆಯ ಪಾಕಿಸ್ತಾನದ ದಿನಗಳಿಂದ ಹಿಡಿದಿಟ್ಟುಕೊಳ್ಳುವ ಭಾವನೆಯಾಗಿದೆ. ಮೂರನೆಯದಾಗಿ, ಶೇಖ್ ಹಸೀನಾ ಚೀನಾಕ್ಕೆ ತುಂಬಾ ಹತ್ತಿರವಾಗುತ್ತಿದ್ದಾರೆ ಎಂದು ವಿಶ್ಲೇಷಕ ಬಾಗ್ಚಿ ವಿವರಿಸುತ್ತಾರೆ.

    2024ರಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಆಮಂತ್ರಣ ಪತ್ರ ವಿತರಣೆ ಪ್ರಾರಂಭ; 6,000 ಮಂದಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts