More

    ಮೋದಿ ಜತೆ ಮೆಲೋನಿ ಸೆಲ್ಫಿ: ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆದ ಪೋಸ್ಟ್‌ – ನೆಟ್ಟಿಗರ ಶ್ಲಾಘನೆ

    posts pic with
    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಇತ್ತೀಚಿನ ಸೆಲ್ಫಿ ಫೋಟೋಗಳನ್ನು ಇನ್​ಸ್ಟಾಗ್ರಾಮ್ ಮತ್ತು X(ಎಕ್ಸ್​) ನಲ್ಲಿ ಹಂಚಿಕೊಂಡಿದ್ದು, ಇದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ, ಪ್ರಸ್ತುತ ಟಾಪ್ ಟ್ರೆಂಡ್‌ ಪಟ್ಟಿಯಲ್ಲಿದೆ.

    ಇದನ್ನೂ ಓದಿ: ಹಿಂದು ಸಂಪ್ರದಾಯದಂತೆ ಡಚ್ ಗೆಳತಿಯನ್ನು ಮದುವೆಯಾದ ಉತ್ತರ ಪ್ರದೇಶ ಯುವಕ…
    ದುಬೈನಲ್ಲಿ ಇತ್ತೀಚೆಗೆ ನಡೆದ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ) ನ 28 ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಹ ಭಾಗವಹಿಸಿದ್ದರು. ಆಗ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದ ಮೆಲೋನಿ ಅವರು ತನ್ನ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಪ್ರೊಫೈಲ್‌ಗಳಲ್ಲಿ ಅವುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘#Melodi’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ “ಸಿಒಪಿ28 ನಲ್ಲಿ ಉತ್ತಮ ಸ್ನೇಹಿತರು” ಎಂದು ಪೋಸ್ಟ್ನಲ್ಲಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದು ಅತಿ ಕಡಿಮೆ ಅವಧಿಯಲ್ಲಿಯೇ ಟಾಪ್ ಟ್ರೆಂಡ್ ಆಗಿದೆ.

    ಇನ್‌ಸ್ಟಾಗ್ರಾಮ್ ಮತ್ತು ‘X’ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಸೆಲ್ಫಿ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ, ಬಳಕೆದಾರರು ಇಬ್ಬರು ನಾಯಕರ ನಡುವಿನ ಸೌಹಾರ್ದ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಶ್ಲಾಘಿಸಿದ್ದಾರೆ.

    ಇದಕ್ಕೂ ಮುನ್ನ ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಅವರು ಮೆಲೋನಿ ಅವರೊಂದಿಗಿನ ಭೇಟಿಯ ಸಮಯದಲ್ಲಿ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿಯ ಸಹಕಾರ ಮತ್ತು ಬದ್ಧತೆ ಕುರಿತು ಪ್ರತಿಪಾದಿಸಿದ್ದರು.

    ಈ ಹಿಂದೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ನಡುವಿನ ಒಡನಾಟ ಗಮನ ಸೆಳೆದಿತ್ತು. ಇಟಾಲಿಯನ್ ನಾಯಕಿಯ ಭೇಟಿ ಸಮಯದಲ್ಲಿ ಅವರ ನಗುಮೊಗದ ಆತ್ಮೀಯತೆ ಎಂಥವರನ್ನೂ ಬೆರಗುಗೊಳಿಸಿತ್ತು. ಮೆಲೋನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಸಹ ತಿಳಿಸಿದ್ದರು.

    2028ಕ್ಕೆ ಭಾರತದಲ್ಲಿ ಸಿಒಪಿ; ವಿಶ್ವಸಂಸ್ಥೆಯ 28ನೇ ಹವಾಮಾನ ಶೃಂಗಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts