More

    ಆ್ಯಂಬುಲೆನ್ಸ್​​ಗೆ ಅಡ್ಡಲಾಗಿ ಕಾರು ನಿಲ್ಲಿಸಿದ ಬಿಜೆಪಿ ನಾಯಕ; ರೋಗಿ ಮೃತ್ಯು

    ಲಖನೌ: ಬಿಜೆಪಿ ನಾಯಕರೊಬ್ಬರುಆ್ಯಂಬುಲೆನ್ಸ್​ಗೆ ಅಡ್ಡಲಾಗಿ ಕಾರು ನಿಲ್ಲಿಸಿ ರೋಗಿಯ ಸಾವಿಗೆ ಕಾರಣವಾಗಿರುವ ಘಟನೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

    ಬಿಜೆಪಿ ನಾಯಕ ಉಮೇಶ್​ ಮಿಶ್ರಾ ತಮ್ಮ ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸಿದ್ದರು ಈ ವೇಳೆ ರೋಗಿ ಒಬ್ಬರನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಬಿಡದ ಕಾರಣ ರೋಗಿ ಪ್ರಾಣ ಬಿಟ್ಟಿದ್ದಾರೆ. ಈ ದುರ್ನಡತೆಯನ್ನು ಪ್ರಶ್ನಿಸಿದ ರೋಗಿಯ ಕುಟುಂಬಸ್ಥರಿಗೆ ಬಿಜೆಪಿ ನಾಯಕ ಧಮ್ಕಿ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

    ಮೃತ ವ್ಯಕ್ತಿ ಸುರೇಶ್​ ಚಂದ್ರ ಅವರಿಗೆ ಎದೆ ನೋವು ಖಾಣಿಸಿಕೊಂಡಿದ್ದ ಕಾರಣ ಅವರನ್ನು ಸೀತಾಪುರದಿಂದ ಲಖನೌಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್​​ಗೆ ಉಮೇಶ್​ ಮಿಶ್ರಾ ಕಾರು ಅಡ್ಡಲಾಗಿ ನಿಲ್ಲಿಸಲಾಗಿತ್ತು. 30 ನಿಮಿಗಳಿಗೂ ಹೆಚ್ಚಿನ ಕಾಲ ಆ್ಯಂಬುಲೆನ್ಸ್​ ತೆರಳಲು ದಾರಿ ಮಾಡದ ಕಾರಣ ರೋಗಿ ಕೊನೆಯುಸಿರೆಳೆದಿದ್ದಾರೆ.

    ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ರಾಜ್ಯದ 865 ಹಳ್ಳಿಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾ ಸರ್ಕಾರ

    ಬಿಜೆಪಿ ನಾಯಕ ಹಿಂತಿರುಗಿದ ನಂತರ ಕುಟುಂಬಸ್ಥರು ಉಮೇಶ್​ ಮಿಶ್ರಾ ಜೊತೆ ವಾಗ್ವಾದ ನಡೆದಿದ್ದು ಈ ವೇಳೆ ತಪ್ಪಿತಸ್ಥನು ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿ ತನ್ನ ನಿರ್ದೇಶನದ ಮೇಲೆ ಕೆಲಸ ಮಾಡುತ್ತಾರೆ. ಪೊಲೀಸ್​ ಕೇಸ್​ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಉಪಸ್ಥಿತರಿದ್ದರು ಯಾವುದೇ ಕ್ರಮವನ್ನು ಜರುಗಿಸದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ ಮತ್ತು ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts