More

  ಅವೈಜ್ಞಾನಿಕ ವಾರಬಂದಿ ಪದ್ಧತಿಗೆ ಖಂಡನೆ

  ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸದೆ ಏಕಪಕ್ಷೀಯವಾಗಿ ವಾರಬಂದಿ ಹಾಕಿ ನೀರು ಸ್ಥಗಿತ ಮಾಡಿರುವುದನ್ನು ಖಂಡಿಸಿ, ಚಿಕ್ಕಹೊನ್ನಕುಣಿ ಗ್ರಾಮದಲ್ಲಿರುವ ಕೆಬಿಜೆಎನ್‌ಎಲ್ ಕಚೇರಿ ಮುಂದೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ( ಆರ್‌ಕೆಕೆಎಸ್) ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

  ಇದನ್ನೂ ಓದಿ: ನೀರಾವರಿ ಸಲಹಾ ಸಮಿತಿ ನಿರ್ಣಯ ಅವೈಜ್ಞಾನಿಕ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಟೀಕೆ

  ಆಲಮಟ್ಟಿಯಲ್ಲಿ ಆ.22ರಂದು ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವೈಜ್ಞಾನಿಕ ಹಾಗೂ ಏಕ ಪಕ್ಷೀಯವಾಗಿ ನಾಲೆಗೆ ನೀರು ಹರಿಸಲು ವಾರಬಂದಿ ಪದ್ಧತಿ ಹಾಕಿರುವುದು ಖಂಡನೀಯ.

  ಸಭೆಯಲ್ಲಿ ರೈತರಿಗೆ ಅವಕಾಶ ನೀಡದೆ, ಅವರ ಅಭಿಪ್ರಾಯ ಪಡೆಯದೆ ತೀರ್ಮಾನ ಕೈಗೊಂಡಿದ್ದಾರೆ. ಆ.22ರಂದು ಸಭೆ ನಡೆಸಿ 23ರಿಂದ ನಾಲೆಗೆ ನೀರು ಬಂದ್ ಮಾಡಿರುವುದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಬಲದಂಡೆ ನಾಲೆ ನೀರು ನಂಬಿಕೊಂಡು ಜಿಲ್ಲೆಯ ರೈತರು ಮುಂಗಾರು ಬಿತ್ತನೆ ತಡವಾಗಿ ಮಾಡುತ್ತಿದ್ದಾರೆ. ಸದ್ಯ ಹಲವು ರೈತರು ಮೆಣಸಿನಕಾಯಿ ಹಾಗೂ ಹತ್ತಿ ನಾಟಿ ಮಾಡುತ್ತಿದ್ದು ಏಕಾಏಕಿ ನೀರು ಬಂದ್ ಮಾಡಿರುವುದರಿಂದ ರೈತರಿಗೆ ದೊಡ್ಡ ಹೊಡೆತ ಬೀಳಲಿದೆ.

  ಹತ್ತಿ, ಮೆಣಸಿನಕಾಯಿ ಬೆಳೆಗೆ ನೀರಿನ ಅಗತ್ಯವಿದ್ದು 10ದಿನ ವಾರಬಂದಿ ಹಾಕಿರುವುದು ಸರಿಯಲ್ಲ ಎಂದು ದೂರಿದರು. ಕೂಡಲೇ ಐಸಿಸಿ ಸಭೆಯಲ್ಲಿ ಕೈಗೊಂಡ ತೀರ್ಮಾನ ಕೈಬಿಟ್ಟು ವಾರಬಂದಿ ವಾಪಸ್ ಪಡೆಯಬೇಕು. ಕೂಡಲೇ ನಾಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

  ತಾಲೂಕು ಅಧ್ಯಕ್ಷ ಶರಣಪ್ಪ ಅಡಕಲಗುಡ್ಡ, ತಾಲೂಕು ಕಾರ್ಯದರ್ಶಿ ದುರ್ಗಣ್ಣ ಅಡಕಲಗುಡ್ಡ, ಅಮರೇಶ ದೊರೆ, ಚನ್ನಬಸವ ಜಾನೇಕಲ್, ಆಂಜಿನೇಯ, ಬಸವರಾಜ ಸಾಹುಕಾರ, ವೆಂಕಟೇಶ ಆಲ್ಕೋಡ್, ಶಿವರಾಜ ತೆಗ್ಗಿನಮನಿ, ವಂದಲಯ್ಯ, ದುರುಗೇಶ ಭೇರಿ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts