More

    ನಿಗದಿಪಡಿಸದ ಮಾರ್ಗದಲ್ಲಿ ಸಂಚಾರ

    ಕಂಪ್ಲಿ: ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸದ ಬಸ್‌ಗಳ ತಪಾಸಣೆಗಾಗಿ ಏ.2 ಮತ್ತು ಏ.3ರ ರಾತ್ರಿ ಕೆಕೆಆರ್‌ಟಿಸಿ ಅಧಿಕಾರಿಗಳು ಕಂಪ್ಲಿ ಮತ್ತು ಕಡೇಬಾಗಿಲು ಬಳಿ ಬೀಡು ಬಿಟ್ಟಿದ್ದರು.

    ಏ.1ರಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಕಂಪ್ಲಿ ಹೊಸಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಿಗದಿಪಡಿಸದ ಕಡೇಬಾಗಿಲು ಮೂಲಕ ಬಸ್‌ಗಳು ಸಂಚರಿಸುವ ಕುರಿತು ಸಾರ್ವಜನಿಕರು ದೂರಿದ್ದರಿಂದ, ಪರಿಶೀಲನೆಗಾಗಿ ಅಧಿಕಾರಿಗಳನ್ನು ನೇಮಿಸಿದ್ದರು.

    ಇದನ್ನು ಓದಿ: ರಾಜ್ಯ ಪಮಿರ್ಟ್​ ಇಲ್ಲದ ಬಸ್​ಗಳು ವಶಕ್ಕೆ

    ಈ ಹಿನ್ನೆಲೆಯಲ್ಲಿ ಏ.2, 3ರಂದು ಇಡೀ ರಾತ್ರಿ ಕಂಪ್ಲಿ ಮತ್ತು ಕಡೇಬಾಗಿಲು ಬಳಿ ಕೆಕೆಆರ್‌ಟಿಸಿ ಅಧಿಕಾರಿಗಳು ಬೀಡು ಬಿಟ್ಟು ನಿಗದಿಪಡಿಸಿದ ಮಾರ್ಗ ಬಿಟ್ಟು ಸಂಚರಿಸುವ ಬಸ್‌ಗಳನ್ನು ಪತ್ತೆ ಮಾಡಿ ಮೆಮೋ ನೀಡಿದ್ದಾರೆ.

    ಈ ಕುರಿತಂತೆ ಬಳ್ಳಾರಿಯ ವಿಭಾಗೀಯ ಸಂಚಾರ ಅಧಿಕಾರಿ ಚಾಮರಾಜ ಮಾಹಿತಿ ನೀಡಿ, ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸದ ಮೂವರು ಚಾಲಕರು, ಮೂವರು ನಿರ್ವಾಹಕರಿಗೆ ಮೆಮೋ ನೀಡಲಾಗಿದೆ ಎಂದು ಗುರುವಾರ ತಿಳಿಸಿದರು.

    ಬಸ್ಸಿನ ಮಾರ್ಗ ತಪಾಸಿಸಿ, ನಿಗದಿತ ಮಾರ್ಗದಲ್ಲಿ ಬಸ್ ಸಂಚರಿಸುವಂತೆ ಚಾಲಕ, ನಿರ್ವಾಹಕರಿಗೆ ತಾಕೀತು ಮಾಡಬೇಕು. ನಿಗದಿತ ಮಾರ್ಗದಲ್ಲಿ ಸಂಚರಿಸದ ಚಾಲಕ, ನಿರ್ವಾಹಕರಿಗೆ ತನಿಖಾ ನಿರೀಕ್ಷಕರಿಂದ ಮೆಮೋ ಕೊಡಿಸಬೇಕು ಎಂದು ಗಂಗಾವತಿ, ಹೊಸಪೇಟೆಯ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಏ.4ರ ರಾತ್ರಿಯೂ ತಪಾಸಣೆ ಜರುಗಲಿದೆ ಎಂದರು.

    ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗ್‌ವಾನ್, ತನಿಖಾದಳದ ನಿರೀಕ್ಷಕರಾದ ಉಮಾಪತಿ, ಶ್ಯಾಮನಾಯ್ಕ, ಪಂಪಾರೆಡ್ಡಿ, ದೇವೇಂದ್ರಪ್ಪ, ಪ್ರಕಾಶ ಕಾರ್ಯನಿರ್ವಹಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts