More

    ಸಂವಿಧಾನ ಪೀಠಿಕೆ ಜಾಥಾಗೆ ಅದ್ದೂರಿ ಸ್ವಾಗತ

    ಸಕಲೇಶಪುರ: ತಾಲೂಕಿನ ಕುಣಿನಹಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಆಗಮಿಸಿದ ಸಂವಿಧಾನ ಪೀಠಿಕೆ ಜಾಗೃತಿ ಜಾಥಾಗೆ ತಾಲೂಕು ಆಡಳಿತ ಆದ್ದೂರಿಯಾಗಿ ಸ್ವಾಗತ ಕೋರಲಾಯಿತು.

    ಆಲೂರು ತಾಲೂಕಿನಿಂದ ಆಗಮಿಸಿದ ಜಾಥಕ್ಕೆ ಬೃಹತ್ ಹೂವಿನ ಹಾರ ಹಾಕಿ ಮಂಗಳವ ವಾದ್ಯಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ನಾಗರಿಕರು ಹಾಗೂ ಅಧಿಕಾರಿಗಳು ಮತ್ತು ಗ್ರಾಪಂ ಆಡಳಿತದಿಂದ ಭವ್ಯ ಸ್ವಾಗತ ಕೋರಲಾಯಿತು.

    ನಂತರ ಗ್ರಾಪಂ ಅವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯತೀಶ್, ಸಂವಿಧಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಇಡೀ ರಾಜ್ಯದಾದ್ಯಂತ ಜಾಥಾ ಸಂಚರಿಸಲಿದೆ. ಸಂವಿಧಾನ ನಮಗೆ ಸಾಕಷ್ಟು ಹಕ್ಕುಗಳನ್ನು, ಕರ್ತವ್ಯಗಳನ್ನು ನೀಡಿದೆ. ಪ್ರಜ್ಞಾವಂತ ಜನತೆ ಈ ಎರಡನ್ನು ಅನುಸರಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ತಾಲೂಕು ಪಂಚಾಯಿತಿ ಇಒ ರಾಮಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ ಮತ್ತಿತರರಿದ್ದರು. ನಂತರ ಬಾಳ್ಳುಪೇಟೆ, ಬಾಗೆ ಹಾಗೂ ಬೆಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಜಾಥಾ ಸಾಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts