More

    17ರಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ

    ವಿಶ್ವಸಂಸ್ಥೆ: ಕೋವಿಡ್​ 19 ಕಾರಣಕ್ಕೆ ಹೊಸ ಚುನಾವಣಾ ವ್ಯವಸ್ಥೆಯೊಂದಿಗೆ ಜೂನ್ 17ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಗೆ ಸಂಬಂಧಿಸಿದ ಐದು ಕಾಯಂಯೇತರ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪ್ರತಿಯೊಬ್ಬ ಸದಸ್ಯರು ಮತ ಚಲಾಯಿಸಲಿದ್ದಾರೆ. ಇದೇ ವೇಳೆ, 75ನೇ ಜನರಲ್ ಅಸೆಂಬ್ಲಿಯ ಅಧ್ಯಕ್ಷರ ಆಯ್ಕೆ ಕೂಡ ನಡೆಯಲಿದೆ ಎಂದು ಯುಎನ್​ಜಿಎ ಅಧ್ಯಕ್ಷ ತಿಜ್ಜಾನಿ ಮುಹಮ್ಮದ್ ಬಂಡೆ ತಿಳಿಸಿದ್ದಾರೆ.

    ಜನರಲ್ ಅಸೆಂಬ್ಲಿಯ 10 ಕಾಯಂಯೇತರ ಸದಸ್ಯ ರಾಷ್ಟ್ರಗಳ ಪೈಕಿ ಐದು ಸ್ಥಾನಗಳಿಗೆ ಪ್ರತಿ ವರ್ಷ ಚುನಾವಣೆ ನಡೆಯುತ್ತದೆ. ಇದು ಎರಡು ವರ್ಷದ ಅವಧಿಯ ಸದಸ್ಯತ್ವ.ಏಷ್ಯಾ ಪೆಸಿಫಿಕ್​ ಪ್ರಾಂತ್ಯದ ಪ್ರತಿನಿಧಿಯಾಗಿ 2021-22ನೇ ಸಾಲಿಗೆ ಕಾಯಂಯೇತರ ಸದಸ್ಯತ್ವದ ಸ್ಥಾನಕ್ಕೆ ಭಾರತ ಸ್ಪರ್ಧಿಸುತ್ತಿದೆ. ಈ ಸ್ಥಾನಕ್ಕೆ ಭಾರತ ಮಾತ್ರವೇ ಅಭ್ಯರ್ಥಿಯಾಗಿರುವ ಕಾರಣ ಆಯ್ಕೆಯಾಗುವುದು ಖಚಿತವೆನಿಸಿದೆ.ಭಾರತದ ಅಭ್ಯರ್ಥಿತನವನ್ನು ಚೀನಾ, ಪಾಕಿಸ್ತಾನ ಸೇರಿ 55 ಸದಸ್ಯರ ಏಷ್ಯಾ ಪೆಸಿಫಿಕ್ ಗ್ರೂಪ್​ ಕಳೆದ ವರ್ಷವೇ ಶಿಫಾರಸು ಮಾಡಿತ್ತು.

    ಇದನ್ನೂ ಓದಿ: ಕುವೈತನ್​ಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಕರೊನಾಗೆ ಬಲಿ

    ಇದಕ್ಕೂ ಮುನ್ನ ಇದೇ ಕೌನ್ಸಿಲ್​ನ ಕಾಯಂಯೇತರ ಸದಸ್ಯ ರಾಷ್ಟ್ರವಾಗಿ ಭಾರತ 1950-51, 1967-68, 1972-73, 1977-78, 1984-85, 1991-92 ಮತ್ತು ತೀರಾ ಇತ್ತೀಚೆಗೆ ಅಂದರೆ 2011-12ರಲ್ಲಿ ಕೆಲಸ ನಿರ್ವಹಿಸಿತ್ತು. ವರ್ಷಾನುಗಟ್ಟಲೆ ಹೋರಾಟದ ಬಳಿಕ ಈಗ ಭಾರತ ಮುಂಚೂಣಿಗೆ ಬಂದಿದ್ದು, ಅರ್ಹವಾಗಿಯೇ ಕೌನ್ಸಿಲ್​ನ ಸದಸ್ಯತ್ವ ಸಿಗಬೇಕು ಎಂಬ ಮಾತು ಕೇಳಿಬರುತ್ತಿದೆ.

    ಕಳೆದ ವಾರ ನಡೆದ ಜನರಲ್ ಅಸೆಂಬ್ಲಿಯಲ್ಲಿ ಸೆಕ್ಯುರಿಟಿ ಕೌನ್ಸಿಲ್​ನ ಚುನಾವಣೆಯನ್ನು ಹೊಸ ಚುನಾವಣಾ ವ್ಯವಸ್ಥೆ ಮೂಲಕ ನಿರ್ವಹಿಸಲು ತೀರ್ಮಾನಿಸಲಾಗಿತ್ತು. ಹೊಸ ವ್ಯವಸ್ಥೆ ಪ್ರಕಾರ,ಜನರಲ್ ಅಸೆಂಬ್ಲಿ ಅಧ್ಯಕ್ಷರು ಸದಸ್ಯ ರಾಷ್ಟ್ರಗಳಿಗೆ ಚುನಾವಣೆಗಿಂತ ಐದು ದಿನ ಮುಂಚಿತವಾಗಿ ಪ್ರತಿ ಮತದಾರನ ಮತದಾನಕ್ಕೆ ಮೀಸಲಾಗಿರುವ ನಿಶ್ಚಿತ ಸಮಯದ ವಿವರವನ್ನು ನೀಡುತ್ತಾರೆ. ಮತದಾನ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಹಾಲ್​ನಲ್ಲಿ ಸಾಮಾಜಿಕ ಅಂತರದ ಮಾರ್ಗಸೂಚಿ ಪ್ರಕಾರವೇ ನಡೆಯಲಿದೆ.ಜನರಲ್ ಅಸೆಂಬ್ಲಿಯ ಅಧ್ಯಕ್ಷರೇ ಸ್ವತಃ ಈ ಪ್ರಕ್ರಿಯೆಯನ್ನು ಗಮನಿಸುತ್ತಾರೆ.

    ಇದನ್ನೂ ಓದಿ: ಗ್ರಾಪಂ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ವಿರೋಧ.. ಹೋರಾಟದ ಎಚ್ಚರಿಕೆ ಕೊಟ್ಟ ಸಿದ್ದು!

    ಭಾರತವನ್ನು ಹೊರತುಪಡಿಸಿದರೆ, ಪಶ್ಚಿಮ ಯುರೋಪ್​ ಮತ್ತು ಇತರೆ ರಾಷ್ಟ್ರಗಳ ಕೆಟಗರಿಯ ಎರಡು ಸ್ಥಾನಗಳಿಗೆ ಕೆನಡಾ ಮತ್ತು ಐರ್ಲೆಂಡ್​, ನಾರ್ವೆಗಳು ಸ್ಪರ್ಧಿಸುತ್ತಿವೆ.ಲ್ಯಾಟಿನ್ ಅಮೆರಿಕ ಮತ್ತು ಕರೆಬಿಯನ್ ಕೆಟಗರಿಗೆ ಮೆಕ್ಸಿಕೋ ಏಕೈಕ ಸ್ಪರ್ಧಿ. ಆಫ್ರಿಕನ್ ಗ್ರೂಪ್​ನ ಪ್ರತಿನಿಧಿಯಾಗಿ ಕೆನ್ಯಾ ಮತ್ತು ಜಿಬೌಟಿಗಳು ಸ್ಪರ್ಧಿಸುತ್ತಿವೆ. (ಏಜೆನ್ಸೀಸ್)

    ಎಚ್ಚರಿಕೆ! ಲಕ್ಷಕ್ಕೂ ಅಧಿಕ ಗುರುತಿನ ಚೀಟಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕಿದೆ ಎಂದು ಎಚ್ಚರಿಸಿದ ಸೈಬರ್​ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts