More

    VIDEO| ಬೆತ್ತಲಾಗಿ ಯುವತಿಯರನ್ನು ಅಟ್ಟಾಡಿಸುತ್ತಿದ್ದ ಯೂನಿವರ್ಸಿಟಿ ಪ್ರೊಫೆಸರ್ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

    ಮೆಕ್ಸಿಕೋ: ನಡು ರಸ್ತೆಯಲ್ಲಿ ಪೂರ್ತಿ ಬೆತ್ತಲೆಯಾಗಿ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹಿಂಸಿಸುತ್ತಿದ್ದ ಯೂನಿವರ್ಸಿಟಿ ಪ್ರಾಧ್ಯಪಕ ಹಾಗೂ ಟ್ಯಾಟೂ ಕಲಾವಿದನೊಬ್ಬನನ್ನು ಮೆಕ್ಸಿಕೋ ನಗರ ಪೊಲೀಸರು ಕಳೆದ ಗುರುವಾರ ಬಂಧಿಸಿದ್ದಾರೆ.

    ಬಂಧಿತನನ್ನು ಎಡ್ವರ್ಡೊ ರೊಡ್ರಿಗಸ್ ಎಂದು ಗುರುತಿಸಲಾಗಿದೆ. ಈತ ಸುಮಾರು 100 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೇ 12ರಂದು ಹಗಲಿನ ಸಮಯದಲ್ಲೇ ಅಜ್ಕಾಪೊಟ್ಜಾಲ್ಕೊ ನಗರದ ಸಮೀಪದ ಕ್ಲವೇರಿಯಾ ಪಟ್ಟಣದಲ್ಲಿ ಮಹಿಳೆಯೊಬ್ಬರ ಮುಂದೆ ಬೆತ್ತಲಾಗಿದ್ದ. ತಕ್ಷಣ ಮಹಿಳೆ ಗಾಬರಿಯಿಂದ ಓಡಿ ಹೋದರು ಕಾರಿನಲ್ಲೇ ಆಕೆಯನ್ನು ಹಿಂಬಾಲಿಸಿದ್ದ. ಇದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೆ, ತನ್ನ ಕೃತ್ಯವನ್ನು ಆರೋಪಿಯು ಸಹ ವಿಡಿಯೋ ಮಾಡಿಕೊಳ್ಳುತ್ತಿದ್ದ.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

    ಈ ಕುರಿತು ದೂರು ದಾಖಲಾದ ಬೆನ್ನಲ್ಲೇ ಮೆಕ್ಸಿಕೋ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದರು. ಈ ವೇಳೆ ಆತನ ಕೃತ್ಯ ಬಯಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಮೆಕ್ಸಿಕೋದ ಅಜ್ಕಾಪೊಟ್ಜಾಲ್ಕೊ ನಗರಕ್ಕೆ ಕರೆತರಲಾಗಿದೆ. ಈತನ ಕೃತ್ಯ ಇದೇ ಮೊದಲೇನಲ್ಲ. ಹಿಂದೊಮ್ಮೆ 2018ರಲ್ಲಿ ತನ್ನ ಯೂನಿವರ್ಸಿಟಿಗೆ ಬೆಳ್ಳಂಬೆಳಗ್ಗೆ ತೆರಳುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಮುಂದೆ ನಡು ರಸ್ತೆಯಲ್ಲಿ ಬೆತ್ತಲಾಗಿ ಹಸ್ತಮೈಥುನ ಮಾಡಿಕೊಂಡಿದ್ದಲ್ಲದೆ, ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಹಿಂಸಿಸಿದ್ದ. ಆದರೆ, ಈತ 2018ರಲ್ಲಿ ನಡೆದಿದ್ದ ಕೃತ್ಯಕ್ಕೆ ಶಿಕ್ಷೆಗೆ ಒಳಗಾಗಿರಲಿಲ್ಲ. ಕಠಿಣ ಷರತ್ತಿನ ಮೇಲೆ ಎರಡು ವಾರಕ್ಕೂ ಮುಂಚಿತವಾಗಿಯೇ ಬಿಡುಗಡೆಯಾಗಿದ್ದ. ಕೋರ್ಟ್​ ಹೇಳಿದಂತೆ ಈತ ಪ್ರತಿವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.

    ಎರಡು ಯೂನಿವರ್ಸಿಟಿಯಲ್ಲಿ ರೊಡ್ರಿಗಸ್ ಸಂಗೀತ ಪ್ರಾಧ್ಯಾಪಕನಾಗಿದ್ದ. ಅಲ್ಲದೆ, ಸ್ಥಳೀಯ ಜಿಮ್​ನಲ್ಲಿ ಫಿಟ್​ನೆಸ್​ ಟ್ರೈನರ್​ ಸಹ ಆಗಿದ್ದ. ಸದ್ಯ ಆರೋಪಿ ಈಗಲೂ ಪ್ರಾಧ್ಯಪಕ ಹಾಗೂ ಜಿಮ್​ ಟ್ರೈನರ್​ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

    ಇದನ್ನೂ ಓದಿ: ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!

    ರೋಡ್ರಿಗಸ್​ 2017ರಿಂದಲೂ ನಕಲಿ ಫೇಸ್​ಬುಕ್​ ಪೇಜ್​ನಲ್ಲಿ ತನ್ನದೇ ಅಶ್ಲೀಲ ಫೋಟೋಗಳನ್ನು ಹರಿಬಿಡುತ್ತಿದ್ದ. ಅಲ್ಲದೆ, ತಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವಿಡಿಯೋಗಳನ್ನು ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ. ವಾಟ್ಸ್​ಆ್ಯಪ್​ನಲ್ಲೂ ನಕಲಿ ಫೋಟೋದೊಂದಿಗೆ ಸಕ್ರೀಯನಾಗಿದ್ದ ಆರೋಪಿ, ಕೆಲವರಿಗೆ ವಿಡಿಯೋ ಕಾಲ್​ ಮಾಡಿ ತನ್ನ ಜನನಾಂಗವನ್ನು ತೋರಿಸುತ್ತಿದ್ದ ಎಂದು ವರದಿಯಾಗಿದೆ.

    ಒಮ್ಮೆ ಮಹಿಳೆಯೊಬ್ಬರಿಗೆ ಆಕೆಯ ಸ್ನೇಹಿತನ ಮೂಲಕ ರೋಡ್ರಿಗಸ್​ ಪರಿಚಿತನಾಗಿದ್ದ. ಟ್ಯಾಟೂ ಹಾಕಿಸಿಕೊಳ್ಳುವಾಗ ನಡೆದ ಸಂಭಾಷಣೆಯ ಬೆನ್ನಲ್ಲೇ ಇಬ್ಬರು ಫ್ರೆಂಡ್ಸ್​ ಆಗಿ ಫೋನ್​ ನಂಬರ್​ ವಿನಿಮಯವು ಆಗಿತ್ತು. ಹೀಗೆ ವಾಟ್ಸ್​ಆ್ಯಪ್​ನಲ್ಲೇ ಚಾಟ್​ ಮಾಡುತ್ತಿದ್ದರು. ಇದಕ್ಕಿದ್ದಂತೆ ಒಂದು ದಿನ ರೋಡ್ರಿಗಸ್​ ಚಾಟ್​ ಸ್ವರೂಪವೇ ಬದಲಾಗಿ ಮಹಿಳೆಗೆ ತನ್ನ ಬೆತ್ತಲೆಯ ಫೋಟೋಗಳನ್ನು ಕಳುಹಿಸಿದ್ದ. ಬಳಿಕ ಇಬ್ಬರ ನಡುವಿನ ಸಂಪರ್ಕ ಮುರಿದುಬಿದ್ದಿತ್ತು.

    ಇದುವರೆಗೂ ಸುಮಾರು 6 ಮಹಿಳೆಯರು ರೋಡ್ರಿಗಸ್​ ವಿರುದ್ಧ ದೂರು ನೀಡಿದ್ದಾರೆ. ಆದರೆ, ಮೂವರು ಪ್ರಕರಣಗಳು ಮಾತ್ರ ದಾಖಲಾಗಿವೆ. ಈ ಪ್ರಕರಣಗಳಲ್ಲಿ ಯಾವುದಕ್ಕೂ ರೋಡ್ರಿಗಸ್​ ಶಿಕ್ಷೆಗೊಳಗಾಗಲಿಲ್ಲ ಏಕೆ ಎಂಬುದು ತಿಳಿದಿಲ್ಲ. ಸದ್ಯ ರೊಡ್ರಿಗಸ್ ಕೆಲಸದಲ್ಲಿ ಮತ್ತು ಅಜ್ಕಾಪೋಟ್ಜಾಲ್ಕೊ ಬೀದಿಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು ಸಾರ್ವಜನಿಕ ಸಚಿವಾಲಯದ ವಶದಲ್ಲಿದ್ದಾನೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಇದನ್ನೂ ಓದಿ: ‘ಕಾರು ಉರುಳಿದ್ದಲ್ಲ, ಸರ್ಕಾರ ಉರುಳದಿರಲು ಡ್ರಾಮಾ’: ದುಬೆ ಎನ್‌ಕೌಂಟರ್‌ಗೆ ಪ್ರತಿಕ್ರಿಯೆ

    ಬಿಹಾರದ ಶಾಲೆಯಲ್ಲಿ ಪೇರೆಂಟ್‌ಗೆ ಪ್ರಿನ್ಸಿಪಾಲ್ ಕಪಾಳಮೋಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts