More

    ಮಹಾ ಗಡಿ ತಗಾದೆ: ಅಮಿತ್​ ಷಾ ನೇತೃತ್ವದಲ್ಲಿ ಡಿ.14 ಅಥವಾ ‌15ರಂದು ಜಂಟಿ ಸಭೆ

    ಬೆಂಗಳೂರು: ಮಹಾರಾಷ್ಟ್ರ ಗಡಿ ತಗಾದೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಯಲ್ಲಿ ಜಂಟಿ ಸಭೆ ಕರೆದಿದ್ದು, ಡಿ.14 ಅಥವಾ 15ರಂದು ನಿಗದಿಯಾಗುವ ಸಾಧ್ಯತೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ ಪ್ರಯುಕ್ತ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಮಿತ್​ ಷಾ ಅವರು ಆಹ್ವಾನಿಸಿದ್ದಾರೆ. ನಾನು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಈ ಸಭೆಯಲ್ಲಿ ಭಾಗವಹಿಸಲಿದ್ದು, ಅದಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆಯುವೆ ಎಂದರು.

    ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರುವೆ. ಆದಷ್ಟು ಸರ್ವಪಕ್ಷ ಸಭೆ ದಿನಾಂಕ ಗೊತ್ತುಪಡಿಸುವೆ ಎಂದು ತಿಳಿಸಿದರು.

    ಅಮಿತ್ ಷಾ ಅವರಿಗೆ ಮಹಾರಾಷ್ಟ್ರ ಸಂಸದರ ನಿಯೋಗ ಭೇಟಿ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದ ಸಂಸದರು ಭೇಟಿ ಮಾಡಲಿದ್ದು, ಸೋಮವಾರ ಕಾಲಾವಕಾಶ ಪಡೆದಿದ್ದಾರೆ. ಗಡಿ ರಕ್ಷಣೆ ವಿಷಯದಲ್ಲಿ ರಾಜ್ಯದ ನಿಲುವು ಸ್ಪಷ್ಟವಾಗಿದೆ ಎಂದು ಸಿಎಂ ಬೊಮ್ಮಾಯಿ‌ ಪುನರುಚ್ಚರಿಸಿದರು.

    ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

    ಸೈಕ್ಲೋನ್​ ಎಫೆಕ್ಟ್​: ಬೆಂಗಳೂರು ಸೇರಿದಂತೆ ಹಲವೆಡೆ ರಾತ್ರಿಯಿಡೀ ತುಂತುರು ಮಳೆ, ರಾಜ್ಯದಲ್ಲಿ ಥಂಡಿ ವಾತಾವರಣ

    ಉಡುಪಿಯಲ್ಲಿ ಭೀಕರ ಅಪಘಾತ: 2 ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲೇ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts