More

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರು ಖರೀದಿ- ಮಾರಾಟ: ಲಾಭ ಮಾಡಿಕೊಳ್ಳಲು ಮೋತಿಲಾಲ್​ ಓಸ್ವಾಲ್​ ಬ್ರೋಕರೇಜ್​ ಸಲಹೆ ಹೀಗಿದೆ…

    ಮುಂಬೈ: ಪ್ರಮುಖ ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ಹೂಡಿಕೆದಾರರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳನ್ನು ಖರೀದಿಸಲು ಈಗ ಸಲಹೆ ನೀಡಿದೆ.

    165 ರೂಪಾಯಿ ಗುರಿ ಬೆಲೆಯೊಂದಿಗೆ ಖರೀದಿಸಲು ಅದು ಶಿಫಾರಸು ಮಾಡಿದೆ. ಬುಧವಾರ ಈ ಬ್ಯಾಂಕ್​ ಷೇರು ಬೆಲೆಯು ಶೇ. 2.04ರಷ್ಟು ಹೆಚ್ಚಳವಾಗಿ 142.80 ರೂಪಾಯಿ ತಲುಪಿದೆ. ಈಗ 142 ರೂಪಾಯಿ ಬೆಲೆಗೆ ಖರೀದಿಸಬೇಕು ಹಾಗೂ ನಂತರದಲ್ಲಿ 165 ರೂಪಾಯಿ ಬೆಲೆಗೆ ಮಾರಾಟ ಮಾಡಬಹುದು ಎಂಬುದು ಮೋತಿಲಾಲ್​ ಓಸ್ವಾಲ್​ ಲೆಕ್ಕಾಚಾರವಾಗಿದೆ. ಈ ರೀತಿ ಮಾಡಿದರೆ ನಿಮಗೆ ಶೇಕಡಾ 18ರಷ್ಟು ಲಾಭ ದೊರೆಯುತ್ತದೆ.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಕಳೆದ 3 ತಿಂಗಳಲ್ಲಿ ಹೂಡಿಕೆದಾರರಿಗೆ 47% ಮತ್ತು ಕಳೆದ 2 ವರ್ಷಗಳಲ್ಲಿ 232% ಲಾಭವನ್ನು ನೀಡಿವೆ.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂರನೇ ತ್ರೈಮಾಸಿಕ (Q3) ಫಲಿತಾಂಶಗಳು:

    ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್​ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭವು 59.9%ರಷ್ಟು ವರ್ಷದಿಂದ ವರ್ಷಕ್ಕೆ (YoY) ಹೆಚ್ಚಳವನ್ನು ದಾಖಲಿಸಿದ 3,589.9 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ರೂ 2,244.8 ಕೋಟಿ ನಿವ್ವಳ ಲಾಭವನ್ನು ಬ್ಯಾಂಕ್​ ಕಂಡಿತ್ತು.

    ಯೂನಿಯನ್ ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ (NII), ಬ್ಯಾಂಕ್ ತನ್ನ ಸಾಲ ನೀಡುವ ಚಟುವಟಿಕೆಗಳಿಂದ ಗಳಿಸುವ ಬಡ್ಡಿ ಆದಾಯ ಮತ್ತು ಠೇವಣಿದಾರರಿಗೆ ಪಾವತಿಸುವ ಬಡ್ಡಿಯ ನಡುವಿನ ವ್ಯತ್ಯಾಸವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 8,628.1 ಕೋಟಿ ರೂಪಾಯಿ ಇತ್ತು. ಈಗ 6.3% ರಷ್ಟು ಏರಿಕೆಯಾಗಿ 9,168 ಕೋಟಿ ರೂಪಾಯಿಗೆ ಏರಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ (GNPA) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 6.38% ಕ್ಕೆ ಹೋಲಿಸಿದರೆ ಡಿಸೆಂಬರ್ ತ್ರೈಮಾಸಿಕಕ್ಕೆ 4.83% ಕ್ಕೆ ತಲುಪಿದೆ.

    ಸ್ಟಾಕ್ ಪರ್ಫಾರ್ಮೆನ್ಸ್ ಮತ್ತು ರಿಟರ್ನ್:

    BSE ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರಿನ 52-ವಾರದ ಗರಿಷ್ಠ ಬೆಲೆಯು ರೂ 145.25 ಮತ್ತು 52 ವಾರಗಳ ಕನಿಷ್ಠ ಬೆಲೆಯು ರೂ 60.32 ಆಗಿದೆ. ಬ್ಯಾಂಕ್ 1,03,551.90 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಕಳೆದ 6 ತಿಂಗಳಲ್ಲಿ 58% ಲಾಭವನ್ನು ನೀಡಿವೆ, ಕಳೆದ 1-ವರ್ಷದಲ್ಲಿ 74% ಆದಾಯ ತಂದುಕೊಟ್ಟಿವೆ. ಕಳೆದ 3-ವರ್ಷಗಳಲ್ಲಿ 350% ನಷ್ಟು ಲಾಭವನ್ನು ನೀಡಿವೆ. ಕಳೆದ 5 ವರ್ಷಗಳಲ್ಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಬೆಲೆ 69% ಏರಿಕೆಯಾಗಿದೆ.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಬ್ಯಾಂಕ್‌ನ ಒಟ್ಟು ಷೇರು ಬಂಡವಾಳದಲ್ಲಿ ಭಾರತ ಸರ್ಕಾರವು 76.99 ಪ್ರತಿಶತವನ್ನು ಹೊಂದಿದೆ. ಮುಂಬೈ (ಭಾರತ) ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಅನ್ನು ನವೆಂಬರ್ 11, 1919 ರಂದು ಲಿಮಿಟೆಡ್​ ಕಂಪನಿಯಾಗಿ ನೋಂದಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts