More

    ಸುಂದರಾಂಗ ಚಂದಿರನ ಸೌಂದರ್ಯದ ಅನಾವರಣ, ಮೊದಲ ಬಾರಿಗೆ ಚಂದ್ರನ ಮೇಲ್ಮೈನ ಪಟ ತಯಾರಿಸಿದ ವಿಜ್ಞಾನಿಗಳು

    ನವದೆಹಲಿ: ಚಂದ್ರ ಸುಂದರಾಂಗ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆತನ ಸೌಂದರ್ಯವನ್ನು ಹಾಡಿ, ಹೊಗಳದ ಕವಿಗಳಿಲ್ಲ. ಪ್ರೇಮಿಗಳ ಪಾಲಿಗೆ ಆತನ ಬೆಳದಿಂಗಳೇ ಪರಮಪಾವನ.

    ಇಂಥ ಚಂದ್ರನ ನಿಜಸೌಂದರ್ಯವನ್ನು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಪಟದ ಮೂಲಕ ಅನಾವರಣಗೊಳಿಸಿದ್ದಾರೆ. ರಂಗುರಂಗಾದ ಈ ಪಟವನ್ನು ಕಂಡಾಗ, ಚಂದಿರ ಇಷ್ಟೊಂದು ಸುಂದರಾಂಗನೇ! ಎಂದು ಆಶ್ಚರ್ಯದಿಂದ ಉದ್ಗರಿಸುವಂತೆ ಆಗುತ್ತದೆ.

    ಅಮೆರಿಕದ ಜಿಯಾಲಾಜಿಕಲ್​ ಸರ್ವೇ ವಿಭಾಗದ ಆ್ಯಸ್ಟ್ರೋಜಿಯಾಲಜಿ ಸೈನ್ಸ್​ ಸೆಂಟರ್​ ಮೊದಲ ಬಾರಿಗೆ ಚಂದ್ರನ ಸೌಂದರ್ಯವನ್ನು ವರ್ಣಿಸುವ ಪಟವನ್ನು ಸಿದ್ಧಪಡಿಸಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಮತ್ತು ಲೂನಾರ್​ ಪ್ಲಾನೇಟರಿ ಇನ್​ಸ್ಟಿಟ್ಯೂಟ್​ನ ಸಹಯೋಗದಲ್ಲಿ 1:50,00,000 ಸ್ಕೇಲ್​ನಲ್ಲಿ ಈ ಪಟವನ್ನು ಸಿದ್ಧಪಡಿಸಲಾಗಿದೆ.

    ಅಪೊಲೋದ ಆರು ಯೋಜನೆಗಳ ಅವಧಿಯ ಚಂದ್ರನ ಪ್ರಾದೇಶಿಕ ಪಟವನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಲೂನಾರ್​ ರೆಕೊನೈಸಾನ್ಸ್​ ಆರ್ಬಿಟರ್​ ಹಾಗೂ ಜಪಾನ್​ನ ಸೆಲೇನ್​ (ಎಸ್​ಇಎಲ್​ಇಎನ್​ಇ) ರವಾನಿಸಿದ ಚಿತ್ರಗಳನ್ನು ಬಳಸಿಕೊಂಡು ಯೂನಿಫೈಡ್​ ಜಿಯೋಲಾಜಿಕ್​ ಮ್ಯಾಪ್​ ಆಫ್​ ದಿ ಮೂನ್​ ಎಂಬ ಹೆಸರಿನ ಚಂದ್ರನ ಪಟವನ್ನು ಸಿದ್ಧಪಡಿಸಲಾಗಿದೆ.

    ಚಂದ್ರನ ಸೌಂದರ್ಯವನ್ನು ಆಸ್ವಾದಿಸದ, ಅದರೆಡೆಗೆ ಆಕರ್ಷಿತರಾಗದ ಮನುಷ್ಯರೇ ಇಲ್ಲ. ಆದ್ದರಿಂದ ಚಂದ್ರನ ನಿಜ ಸೌಂದರ್ಯವನ್ನು ವರ್ಣಿಸುವ ಹಾಗೂ ನಾಸಾದ ಭವಿಷ್ಯದ ಯೋಜನೆಗಳಿಗೆ ಅನುವಾಗುವ ರೀತಿಯಲ್ಲಿ ಪಟವನ್ನು ರೂಪಿಸಲಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್​ ಸರ್ವೇ ಅಧಿಕಾರಿಗಳು ಹೇಳಿದ್ದಾರೆ.

    ಲಾಕ್​ಡೌನ್​ ತಂದ ನಲಿವು; ಸ್ವಚ್ಛ ಗಂಗಾ ನದಿಯಲ್ಲಿ ಎರಡು ಡಾಲ್ಫಿನ್​ಗಳ ಸ್ವಚ್ಛಂದ ವಿಹಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts