More

    ಪತ್ರಕರ್ತರಿಗೆ ಭಾರತ ಸುರಕ್ಷಿತ: ಲ್ಯಾಟಿನ್​ ಅಮೆರಿಕ, ಕೆರಿಬಿಯನ್​ ರಾಷ್ಟ್ರದಲ್ಲಿ ಹೆಚ್ಚು ಮಂದಿ ಹತ್ಯೆ

    ನವದೆಹಲಿ: ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪತ್ರಕರ್ತರು ಸುರಕ್ಷಿತವಾಗಿದ್ದಾರೆ.

    ವಿಶ್ವದಲ್ಲಿ 2019ರಲ್ಲಿ 56 ಮಂದಿ ಪತ್ರಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹತ್ಯೆಯಾಗಿದ್ದಾರೆ. ಭಾರತದಲ್ಲಿ ಈ ಅವಧಿಯಲ್ಲಿ ಪತ್ರಕರ್ತರ ಕೊಲೆ ಸಂಭವಿಸಿಲ್ಲ ಎಂದು ಯುನೆಸ್ಕೋ ತಿಳಿಸಿದೆ.

    ಲ್ಯಾಟಿನ್​ ಅಮೆರಿಕ ಮತ್ತು ಕೆರಿಬಿಯನ್​ ರಾಷ್ಟ್ರದಲ್ಲಿ 2019ರಲ್ಲಿ 21 ಮಂದಿ ಪತ್ರಕರ್ತರು ಕೊಲೆಯಾಗಿದ್ದಾರೆ. 2010 ರಿಂದ 2019ರವರೆಗೆ ಒಟ್ಟು 894 ಮಂದಿ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ.

    ಇದು ವರ್ಷಕ್ಕೆ ಸರಾಸರಿ ಶೇ. 90 ಇದೆ. 2018ಕ್ಕೆ ಹೋಲಿಕೆ ಮಾಡಿದರೆ 2019 ರಲ್ಲಿ ಪತ್ರಕರ್ತರ ಹತ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಆದರೂ ಕೆಲವು ರಾಷ್ಟ್ರಗಳಲ್ಲಿ ಇನ್ನು ಪತ್ರಕರ್ತರು ತೀವ್ರ ಅಪಾಯ ಎದುರಿಸುತ್ತಿದ್ದಾರೆ.

    ಪತ್ರಕರ್ತರಿಗೆ ಯುದ್ಧ ವರದಿಗಿಂತ ಸ್ಥಳೀಯವಾಗಿ ಭ್ರಷ್ಟಚಾರ ಹಾಗೂ ರಾಜಕೀಯ ವರದಿ ಮಾಡುವುದು ಹೆಚ್ಚು ಅಪಾಯಕಾರಿ ಎಂದು ಯುನೆಸ್ಕೋ ಹೇಳಿದೆ.

    ಕಳೆದ ವರ್ಷ ಯುದ್ಧ ನಡೆಯದ ರಾಷ್ಟ್ರಗಳಲ್ಲಿ ಪತ್ರಕರ್ತರು ಸ್ಥಳೀಯವಾಗಿ ವರದಿ ಮಾಡಿ ಅಧಿಕ ಮಂದಿ ಮೃತಪಟ್ಟಿದ್ದಾರೆ.
    ಹತ್ಯೆ ಹೊರತಾಗಿ ಪತ್ರಕರ್ತರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಮೌಖಿಕ ಮತ್ತು ದೈಹಿಕ ದಾಳಿಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts