More

    ಕರೊನಾ ಹೊಡೆತಕ್ಕೆ ಒಂದೇ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತೇ? ನಾಲ್ಕು ತಿಂಗಳಿಂದ ಏರುತ್ತಲೇ ಇದೆ ನಿರುದ್ಯೋಗ ಪ್ರಮಾಣ

    ನವದೆಹಲಿ: ಕಳೆದ ವರ್ಷದಿಂದ ಕಾಡಲಾರಂಭಿಸಿದ ಕರೊನಾ, ಅದರ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್​ಡೌನ್​ ಎರಡೂ ಸೇರಿ ಕಳೆದ ವರ್ಷವೇ ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದರು. ಆ ಬಳಿಕ ಕರೊನಾ ಹಾವಳಿ ಇನ್ನೇನು ತಗ್ಗಿತು ಎಂಬಷ್ಟರಲ್ಲಿ ಅದರ ಎರಡನೇ ಅಲೆ ಮತ್ತಷ್ಟು ತೀವ್ರವಾಗಿ ಬೀಸಿದ್ದು, ಜನಜೀವನವನ್ನು ಇನ್ನಷ್ಟು ಅಲ್ಲೋಲ-ಕಲ್ಲೋಲ ಆಗಿಸಿದೆ.

    ಬೇಸರದ ಸಂಗತಿ ಎಂದರೆ ಈಗಾಗಲೇ ಕೆಲಸ ಕಳೆದುಕೊಂಡವರೇ ಮುಂದೇನು, ಯಾವ ಕೆಲಸ ಎಂಬ ಚಿಂತೆಯಲ್ಲಿರುವಾಗಲೇ ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಲಾಕ್​ಡೌನ್​, ಕರ್ಫ್ಯೂ ಹೇರಲಾಗಿದೆ. ಪರಿಣಾಮವಾಗಿ ಕೈಗಾರಿಕೆ, ವ್ಯಾಪಾರ ಚಟುವಟಿಕೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದು ಮತ್ತೊಂದು ಹಂತದ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಎಂಬಷ್ಟು ಉದ್ಯೋಗ ನಷ್ಟ ಸಂಭವಿಸಿದ್ದು, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಾರ್ಚ್​ನಲ್ಲಿ ಶೇ. 6.5ರಷ್ಟಿದ್ದ ನಿರುದ್ಯೋಗ ಪ್ರಮಾಣ ಏಪ್ರಿಲ್​ನಲ್ಲಿ ಶೇ. 7.97ಕ್ಕೆ ತಲುಪಿದೆ. ಅರ್ಥಾತ್ ಒಂದೇ ತಿಂಗಳಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸೆಂಟರ್ ಫಾರ್​ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಖಾಸಗಿ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಕಂಡುಬಂದಿದೆ.

    ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ! ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ…

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts