More

    ಭಾರತಕ್ಕೊಂದು ಸಲಾಂ ಎಂದ ವಿಶ್ವಸಂಸ್ಥೆ – COVID19 ಸೋಂಕು ತಡೆಗೆ ಇತರೆ ದೇಶಗಳಿಗೆ ನೆರವು ನೀಡುತ್ತಿರುವ ದೇಶಗಳ ಬಗ್ಗೆ ಮೆಚ್ಚುಗೆ

    ವಿಶ್ವಸಂಸ್ಥೆ: ಕರೊನಾ COVID19 ವೈರಸ್​ ಸೋಂಕು ತಡೆಯ ಜಾಗತಿಕ ಸಮರದಲ್ಲಿ ಇತರೆ ದೇಶಗಳಿಗೆ ನೆರವು ನೀಡುತ್ತಿರುವ ಭಾರತದ ಕ್ರಮವನ್ನು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್​ ಪ್ರಶಂಸಿದ್ದಾರೆ. ಮಲೇರಿಯಾ ನಿರೋಧಕ ಹೈಡ್ರೋಕ್ಸಿಕ್ಲೋರೋಕ್ವಿನ್​ ಎಂಬ ಮಲೇರಿಯಾ ನಿರೋಧಕ ಔಷಧವನ್ನು ಸಾಕಷ್ಟು ಪ್ರಮಾಣದಲ್ಲಿ ಬೇರೆ ದೇಶಗಳಿಗೂ ಕಳುಹಿಸುತ್ತಿರುವ ಭಾರತ, ಆ ಮೂಲಕ ಜಗತ್ತಿನ ವಿವಿಧ ರಾಷ್ಟ್ರಗಳ ಪಾಲಿಗೆ ಆಶಾಕಿರಣವಾಗಿ ಕಂಡುಬಂದಿತ್ತು. ಅವರು ಕೂಡ ಈ ಔಷಧವನ್ನು ಕರೊನಾ ಸೋಂಕು ತಡೆಯಲು ಬಳಸುತ್ತಿದ್ದು, ಭಾರತಕ್ಕೆ ಧನ್ಯವಾದಗಳನ್ನು, ಔಷಧ ಕಳುಹಿಸಿದ ನಡೆಗೆ ಮೆಚ್ಚುಗೆಯನ್ನೂ ಸೂಚಿಸಿದ್ದವು.

    ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್​ ಸಂಭಾವ್ಯ ಚಿಕಿತ್ಸಾ ಔಷಧವೆಂದು ಗುರುತಿಸಿದ್ದು, ನ್ಯೂಯಾರ್ಕ್​ನಲ್ಲಿ 1,500ಕ್ಕೂ ಹೆಚ್ಚು ರೋಗಿಗಳ ಮೇಲೆ ಪ್ರಯೋಗಿಸಿದೆ. ಅಲ್ಲಿ ಅದಕ್ಕೆ ಯಶಸ್ಸು ಸಿಕ್ಕಿದ್ದು, ಇದರೊಂದಿಗೆ ಈ ಔಷಧದ ಬೇಡಿಕೆ ಹೆಚ್ಚಾಗಿದೆ. ಭಾರತವೂ ಮಾನವೀಯತೆ ನೆಲೆಯಲ್ಲಿ ಔಷಧವನ್ನು ನೇರವಾಗಿ ರಫ್ತು ಮಾಡುವುದರ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

    ಇದೀಗ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟರೆಸ್​ ಕೂಡ ಭಾರತದ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಕರೊನಾ ಸೋಂಕು ತಡೆಯುವಲ್ಲಿ ಜಾಗತಿಕವಾಗಿ ಕಂಡುಬಂದಿರುವ ಈ ಒಗ್ಗಟ್ಟು ಉತ್ತಮ ಬೆಳವಣಿಗೆ ಎಂದಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಯಾವ ರಾಷ್ಟ್ರಗಳೆಲ್ಲ ನೆರವು ನೀಡುವುದಕ್ಕೆ ಶಕ್ತವಾಗಿವೆಯೋ ಆ ರಾಷ್ಟ್ರಗಳು ಉಳಿದ ರಾಷ್ಟ್ರಗಳಿಗೆ ನೆರವು ನೀಡುತ್ತಿವೆ. ಇದು ಖುಷಿಯ ವಿಚಾರ ಎಂದು ಹೇಳಿದ್ದಾರೆ.

    ಕರೊನಾ ವೈರಸ್​ ಸೋಂಕು ಹರಡುತ್ತಿದ್ದಂತೆ, ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧವನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸಿಕೊಡುವ ಭಾರತದ ಪ್ರಯತ್ನಕ್ಕೆ ಸಂಬಂಧಿಸಿ ಗುಟೆರಸ್​​ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಭಾರತ ಕರೊನಾ ಪೀಡಿತ 55 ರಾಷ್ಟ್ರಗಳಿಗೆ ಈ ಔಷಧವನ್ನು ಕಳುಹಿಸಿಕೊಡುವ ಪ್ರಯತ್ನದಲ್ಲಿದೆ. ಅಮೆರಿಕ, ಮಾರಿಷಸ್​, ಸೇಚೆಲ್ಲಸ್​ ಈಗಾಗಲೇ ಈ ಔಷಧ ಪಡೆದುಕೊಂಡಿದ್ದು, ಉಳಿದವುಗಳಿಗೆ ಶೀಘ್ರದಲ್ಲೇ ಸಿಗಲಿದೆ.

    ನೆರೆಯಲ್ಲಿರುವ ಆಫ್ಘನ್​, ಭೂತಾನ್, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್​, ಮಾರಿಷಸ್, ಶ್ರೀಲಂಕಾ, ಮ್ಯಾನ್ಮಾರ್​ಗಳಿಗೆ ಕೂಡ ಭಾರತ ಔಷಧ ಕಳುಹಿಸುತ್ತಿದೆ. ಇದಲ್ಲದೆ, ಝಾಂಬಿಯಾ, ಡೊಮಿನಿಕನ್ ರಿಪಬ್ಲಿಕ್​, ಮಡ್​ಗಾಸ್ಕರ್​, ಉಗಾಂಡ, ಬರ್ಕಿನಾ ಫಾಸೋ, ನಿಗರ್​, ಮಾಲಿ, ಕಾಂಗೊ, ಈಜಿಪ್ಟ್​, ಅರ್ಮೇನಿಯಾ, ಕಜಕ್​ಸ್ತಾನ್​, ಈಕ್ವಡಾರ್​, ಜಮೈಕಾ, ಸಿರಿಯಾ, ಉಕ್ರೇನ್​, ಚಾದ್​, ಜಿಂಬಾಬ್ವೆ, ಫ್ರಾನ್ಸ್, ಜೋರ್ಡಾನ್​, ಕೀನ್ಯಾ, ನೆದರ್ಲೆಂಡ್​, ನೈಜೀರಿಯಾ, ಒಮನ್​, ಪೆರುಗಳಿಗೂ ಈ ಔಷಧವನ್ನು ಭಾರತ ಪೂರೈಸುತ್ತಿದೆ. (ಏಜೆನ್ಸೀಸ್​)

    ತೆಂಗಿನ ಮರದ ಗರಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟ ಮಹಿಳೆ

    ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts