More

    ‘ಅಂಪೈರ್ಸ್‌ ಕಾಲ್’ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದೇಕೆ?

    ಪುಣೆ: ಡಿಆರ್‌ಎಸ್‌ನಲ್ಲಿ ನೀಡಲಾಗುವ ‘ಅಂಪೈರ್ಸ್‌ ಕಾಲ್’ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ. ಅಲ್ಲದೆ, ಸ್ವಲ್ಪ ಪ್ರಮಾಣದಲ್ಲಾದರೂ ಸರಿ, ಚೆಂಡು ವಿಕೆಟ್‌ಗೆ ಬಡಿಯುತ್ತದೆಯೇ ಇಲ್ಲವೇ ಎಂಬುದನ್ನು ಆಧರಿಸಿಯೇ ಎಲ್‌ಬಿಡಬ್ಲ್ಯು ತೀರ್ಪುಗಳನ್ನು ನೀಡಬೇಕು ಎಂದಿದ್ದಾರೆ.

    ಐಸಿಸಿಯ ಹಾಲಿ ನಿಯಮ ಪ್ರಕಾರ, ಚೆಂಡಿನ ಶೇ. 50ಕ್ಕಿಂತ ಹೆಚ್ಚಿನ ಭಾಗ ವಿಕೆಟ್‌ಗೆ ಬಡಿಯುತ್ತದೆ ಎಂದು ಕಂಡುಬಂದರೆ ಮಾತ್ರ ಎಲ್‌ಬಿಡಬ್ಲ್ಯು ತೀರ್ಪು ನೀಡಲಾಗುತ್ತದೆ. ಇಲ್ಲದಿದ್ದರೆ ಅಂಪೈರ್ಸ್‌ ಕಾಲ್ ಅಂದರೆ ಮೈದಾನದ ಅಂಪೈರ್ ಮೊದಲು ನೀಡಿರುವ ತೀರ್ಪನ್ನೇ ಉಳಿಸಿಕೊಳ್ಳಲಾಗುತ್ತದೆ. ವಿರಾಟ್ ಕೊಹ್ಲಿ ಈ ಮುನ್ನ ಮೈದಾನದ ಅಂಪೈರ್‌ಗಳ ‘ಸಾಫ್ಟ್​ ಸಿಗ್ನಲ್’ ನಿಯಮದ ವಿರುದ್ಧವೂ ಕಿಡಿಕಾರಿದ್ದರು.

    ಇದನ್ನೂ ಓದಿ: ಆರತಕ್ಷತೆ ಚಿತ್ರದಿಂದಾಗಿ ಕೆಂಗಣ್ಣಿಗೆ ಗುರಿಯಾದ ಜಸ್‌ಪ್ರೀತ್ ಬುಮ್ರಾ!

    ‘ಡಿಆರ್‌ಎಸ್ ಇದ್ದಿರದ ದಿನಗಳಿಂದಲೂ ನಾನು ಆಡುತ್ತಿದ್ದೇನೆ. ಆಗ ಅಂಪೈರ್ ಮೈದಾನದಲ್ಲಿ ನೀಡುವ ತೀರ್ಪು ಅಂತಿಮವಾಗಿರುತ್ತಿತ್ತು. ಅದು ಔಟ್ ಆಗಿದ್ದರೂ ಸರಿ, ನಾಟೌಟ್ ಆಗಿದ್ದರೂ ಸರಿ. ಆದರೆ ಈಗ ಡಿಆರ್‌ಎಸ್‌ನಲ್ಲಿ ಬರುವ ಅಂಪೈರ್ಸ್‌ ಕಾಲ್ ಸಾಕಷ್ಟು ಗೊಂದಲ ಸೃಷ್ಟಿಸುತ್ತಿದೆ. ಬ್ಯಾಟ್ಸ್‌ಮನ್ ಓರ್ವ ಬೋಲ್ಡ್ ಆದಾಗ, ಚೆಂಡು ಶೇ.50ಕ್ಕಿಂತ ಹೆಚ್ಚು ಭಾಗ ಬಡಿದರೆ ಮಾತ್ರ ಬೋಲ್ಡ್ ಎಂದು ಪರಿಗಣಿಸಬೇಕೆಂದು ಹೇಳಲಾಗದು. ಇದೇ ಕ್ರಿಕೆಟ್ ಸಾಮಾನ್ಯ ಜ್ಞಾನದ ಪ್ರಕಾರ, ಎಲ್‌ಬಿಡಬ್ಲ್ಯು ತೀರ್ಪು ನೀಡುವಾಗಲೂ, ಚೆಂಡು ಸಣ್ಣ ಪ್ರಮಾಣದಲ್ಲಿ ವಿಕೆಟ್‌ಗೆ ಬಡಿಯುತ್ತದೆ ಎಂದು ಕಂಡುಬಂದರೆ ಔಟ್ ಎಂದೇ ತೀರ್ಪು ನೀಡಬೇಕು’ ಎಂದು ಕೊಹ್ಲಿ ವಾದ ಮಂಡಿಸಿದ್ದಾರೆ.

    ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?

    ಆರ್.ಅಶ್ವಿನ್ ಮಹಿಳಾ ಕ್ರಿಕೆಟ್ ಪ್ರೀತಿಗೆ ಇಂಗ್ಲೆಂಡ್ ಸ್ಟಾರ್ ಆಟಗಾರ್ತಿ ಫಿದಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts