ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಬಾಲಿವುಡ್ ನಟಿ ಅಹನಾ ಕುಮ್ರಾ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವಿಶೇಷವಾದ ಗೌರವ ಸಲ್ಲಿಸಿದ್ದರು. ಜೂಲನ್ ಗೋಸ್ವಾಮಿ ಅವರಂತೆಯೇ ಕಾಣುವ ತಮ್ಮ ಚಿತ್ರಗಳನ್ನು ಅಹನಾ ಪೋಸ್ಟ್ ಮಾಡಿದ್ದರು. ಜೂಲನ್ ಅವರಂತೆಯೇ ಕೇಶವಿನ್ಯಾಸ ಮಾಡಿದ್ದ ಅಹನಾ, ಭಾರತ ತಂಡದ ಜೆರ್ಸಿಯನ್ನೂ ಧರಿಸಿದ್ದರು. ಆದರೆ ಫೋಟೋಶೂಟ್​ನ ಮೇಕ್‌ಅಪ್ ವಿಚಾರದಲ್ಲಿ ಅಹನಾ ಮಾಡಿದ ಎಡವಟ್ಟಿನಿಂದಾಗಿ ಇದೀಗ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ಜೂಲನ್ ಅವರ ಮೈಬಣ್ಣಕ್ಕೆ ಹೋಲಿಕೆಯಾಗಿ ಅಹನಾ ಕೂಡ … Continue reading ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?