More

    ರೋಗಿಗಳಿಗೆ ಚಿಕಿತ್ಸೆ ನೀಡಿ ಜೈಲು ಶಿಕ್ಷೆಗೆ ಗುರಿಯಾದ ದಂತ ವೈದ್ಯೆ: ಕಾರಣ ಕೇಳಿದ್ರೆ ಅಚ್ಚರಿಗೊಳ್ತಿರಾ!

    ಪರ್ತ್​ (ಆಸ್ಟ್ರೇಲಿಯಾ): ಸ್ವಯಂ ಪ್ರತ್ಯೇಕವಾಗಿದ್ದಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಉಕ್ರೇನಿಯನ್​ ದಂತ ವೈದ್ಯೆ ಹಾಗೂ ಪವರ್​ಲಿಫ್ಟರ್​ ಇದೀಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ನತಾಲಿಯಾ ನೈರ್ನ್​ (30) ಶಿಕ್ಷೆಗೆ ಗುರಿಯಾದ ವೈದ್ಯೆ. ಆಸ್ಟ್ರೇಲಿಯಾದ ತುರ್ತುಸ್ಥಿತಿ ನಿರ್ವಹಣಾ ಕಾಯ್ದೆಯ ಅನುಸರಣೆ ಮತ್ತು ಆದೇಶವನ್ನು ಅನುಸರಿಸಲು ವಿಫಲವಾದ ಹಿನ್ನೆಲೆಯಲ್ಲಿ ಪರ್ತ್ ನ್ಯಾಯಾಲಯದಲ್ಲಿ ಶುಕ್ರವಾರ ಆರೋಪಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.

    ಇದನ್ನೂ ಓದಿ: ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು

    ಡಾಕ್ಟರ್​ ವೃತ್ತಿಯ ಜತೆಗೆ ಬಿಡುವಿನ ಸಮಯದಲ್ಲಿ ಪವರ್​ಲಿಫ್ಟರ್​ ಆಗಿರುವ ನೈರ್ನ್​, ಜೂನ್​ 16ರಂದು ಪೂರ್ವ ಕರಾವಳಿಯಿಂದ ಪೂರ್ವ ಆಸ್ಟ್ರೇಲಿಯಾಗೆ ಭೇಟಿ ನೀಡಿದ ಬಳಿಕ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಸ್ವಯಂ ಪ್ರತ್ಯೇಕವಾಗಿದ್ದರು. ಆದಾಗ್ಯು, ಜೂನ್​ 17 ಮತ್ತು 18ರಂದು ಪೊಲೀಸ್​ ಅಧಿಕಾರಿಗಳು ಪರ್ತ್​ ಉಪನಗರದಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿದಾಗ ಆಕೆ ಅಲ್ಲಿರಲಿಲ್ಲ.

    ಜೂನ್​ 21 ರಿಂದ 29ರವರೆಗೆ ಆಕೆ ಅನೇಕ ರೋಗಿಗಳಿಗೆ ತನ್ನ ಜೂಂಡಾಲಪ್​ ಡೆಂಟಲ್​ ಕ್ಲೀನಿಕ್​ನಲ್ಲಿ ಚಿಕಿತ್ಸೆ ನೀಡಿದ್ದಾಳೆಂದು ಅಧಿಕಾರಿಗಳು ನೈರ್ನ್​ ವಿರುದ್ಧ ದೂರಿದ್ದಾರೆ. ಈ ಸಂಬಂಧ ಆಕೆಗೆ ಸಮನ್ಸ್​ ಕೂಡ ನೀಡಲಾಗಿತ್ತು. ಆದರೆ, ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ, ಕಾನೂನು ಪ್ರಾತಿನಿಧ್ಯವನ್ನು ಪಡೆಯಲು ನಿರಾಕರಿಸಿದರು. ಇದರಿಂದ ಕೋರ್ಟ್​ ಎಚ್ಚರಿಕೆ ನೀಡಿತ್ತು.

    ಇದನ್ನೂ ಓದಿ: ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಇದೀಗ ಆಕೆಗೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. 12 ತಿಂಗಳ ಶಿಕ್ಷೆ ಅಥವಾ 50 ಸಾವಿರ ಡಾಲರ್​ (3,736,801 ರೂ.) ದಂಡ ಕಟ್ಟಬೇಕಿದೆ. ಶಿಕ್ಷೆಗಾಗಿ ಆಗಸ್ಟ್ 7 ರಂದು ನ್ಯಾಯಾಲಯಕ್ಕೆ ಮರಳಲು ನೈರ್ನ್‌ಗೆ ಜಾಮೀನು ನೀಡಲಾಗಿದೆ. (ಏಜೆನ್ಸೀಸ್​)

    ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts