More

    ಮೆಕ್ಕೆ ಜೋಳ ಬೆಳೆಗೆ ಲದ್ದಿಹುಳು ಕಾಟ

    ಉಜ್ಜಿನಿ: ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಮೆಕ್ಕೆ ಜೋಳ ಬಿತ್ತಿದ್ದು, ಫಸಲು ಉತ್ತಮವಾಗಿರುವ ಬೆನ್ನಲ್ಲೇ ಲದ್ದಿ ಹುಳು ಕಾಟ ಹೆಚ್ಚಾಗಿ, ಕೃಷಿಕರು ಆತಂಕಕ್ಕೀಡಾಗಿದ್ದಾರೆ.

    ಕಾಳಪುರ, ಉಜ್ಜಿನಿ, ಬೆನಕನಹಳ್ಳಿ, ತೂಲಹಳ್ಳಿ, ಹನುಮನಹಳ್ಳಿ, ನಾಗೇನಹಳ್ಳಿ, ಮಂಗಾಪುರ, ಗಾಣಗಟ್ಟೆ, ನಿಂಬಳಗೇರೆ ಮತ್ತಿತರೆಡೆ ಲದ್ದಿ ಹುಳು ಬಾಧೆ ಉಲ್ಬಣಿಸಿದೆ. ಬೆಳೆಗಳಿಗೆ ರಾತ್ರಿ ದಾಳಿ ಇಡುವ ಹುಳುಗಳು ಸುಳಿಗಳನ್ನೇ ತಿನ್ನುತ್ತಿದ್ದು, ಗರಿ ಹೊಡೆದಿರುವ ಮೆಕ್ಕೆಜೋಳ ಗಿಡ ಹಾಳಾಗುವ ಸ್ಥಿತಿಗೆ ಬಂದಿವೆ.

    ಹುಳು ನಿಯಂತ್ರಣಕ್ಕೆ ರೈತರು ಔಷಧ ಸಿಂಪಡಣೆ ಮಾಡುತ್ತಿದ್ದು, ಜಿಟಿಜಿಟಿ ಮಳೆ ಇರುವ ಕಾರಣ ಇದು ಉಪಯೋಗಕ್ಕೆ ಬರುತ್ತಿಲ್ಲ. ಅತಿಯಾಗಿ ಮಳೆ ಬಂದ ಕಾರಣ, ತಂಪು ಹೆಚ್ಚಾಗಿ ಲದ್ದಿಹುಳು ಕಾಟ ಹೆಚ್ಚಾಗಿದೆ ಎಂದು ರೈತರದ ವಾಗೀಶ್, ನಟರಾಜ, ನಾಗರಾಜ್, ಮಹಾಂತೇಶ್ ಅಳಲು ತೋಡಿಕೊಂಡಿದ್ಧಾರೆ.

    ಲದ್ದಿ ಹುಳು ನಿಯಂತ್ರಣಕ್ಕೆ ಕರಾಟೆ ಹಾಗೂ ಬೆಂಜೋವೆಟ್ ರಾಸಾಯನಿಕವನ್ನು ಸಿಂಪಡಣೆ ಮಾಡುವುದರಿಂದ ಕೀಟಗಳ ಕಾಟ ತಪ್ಪಿಸಬಹುದು.
    | ಶ್ಯಾಮಸುಂದರ, ತಾಲೂಕು ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts