More

    ಬೆಳೆದೇರಿ ಆಂಜನೇಯ ಸ್ವಾಮಿ ರಥೋತ್ಸವ

    ಉಜ್ಜಿನಿ: ಸಮೀಪದ ಬೆಳೆದೇರಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

    ಸಂಜೆಯಾಗುತ್ತಿದ್ದಂತೆ ಗ್ರಾಮದ ದೈವಸ್ಥರು ಶ್ರೀಸ್ವಾಮಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಹೊತ್ತು ತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ತೇರಿನಲ್ಲಿ ಪ್ರತಿಷ್ಠಾಪಿಸಿದರು. ನಂತರ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು. ಉಜ್ಜಿನಿ ಗ್ರಾಮದ ವಿಜಯಕುಮಾರ್ 55,101 ರೂ.ಗೆ ಪಡೆದುಕೊಂಡರು. ಬಳಿಕ ರಥವು ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ತೇರಿನ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು. ರಥವು ಪಾದಗಟ್ಟೆಯವರೆಗೆ ಸಾಗಿಬಂದು ದೇವಸ್ಥಾನದ ಬಳಿ ನೆಲೆ ನಿಂತಿತು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹರಕೆಗಳನ್ನು ತೀರಿಸಿದರು. ಉಜ್ಜಿನಿ, ನಾಗೇನಹಳ್ಳಿ, ಮಂಗಾಪುರ, ಪಾಲಯ್ಯನಕೋಟೆ, ನಿಂಬಳಗೆರೆ ಮತ್ತಿತರ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts