More

    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

    ಬೆಂಗಳೂರು: ಆಧಾರ್​ ಫೋಟೋಕಾಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಯುನಿಕ್​ ಐಡೆಂಟಿಫಿಕೇಷನ್​ ಆಥಾರಿಟಿ ಆಫ್​ ಇಂಡಿಯಾ (ಯುಐಡಿಎಐ) ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಬೆನ್ನಿಗೇ ಆ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟನೆಯೊಂದನ್ನು ನೀಡಿದೆ.

    ಎಲ್ಲದಕ್ಕೂ ಆಧಾರ್​ ಸಂಖ್ಯೆಯನ್ನು ಕೇಳುವ ಸರ್ಕಾರವೇ ಇದೀಗ ಆಧಾರ್​ ಸಂಖ್ಯೆಯನ್ನು ಪೂರ್ತಿಯಾಗಿ ಹಂಚಿಕೊಳ್ಳಬಾರದು ಎಂದು ಹೇಳುತ್ತಿದೆ ಎಂಬುದಾಗಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತ ಪ್ರಕಟಣೆ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಲು ಆರಂಭಿಸಿದೆ ಎಂಬುದನ್ನು ಅರಿತ ಯುಐಡಿಎಐ ಸ್ಪಷ್ಟೀಕರಣ ಕೂಡ ನೀಡಿದೆ.

    ಮೇ 27ರಂದು ನೀಡಿದ್ದ ಪತ್ರಿಕಾ ಹೇಳಿಕೆ ಬಿಡುಗಡೆಗೆ ಸಂಬಂಧಿಸಿದಂತೆ ಎಂಬುದಾಗಿ ಇಂದು ಇನ್ನೊಂದು ಪತ್ರಿಕಾ ಹೇಳಿಕೆಯನ್ನು ಯುಐಡಿಎಐ ಬಿಡುಗಡೆ ಮಾಡಿದೆ. ಆಧಾರ್​ ಕಾರ್ಡ್​ನ ಫೋಟೋಶಾಪ್​ ಮಾಡಿ ದುರ್ಬಳಕೆ ಮಾಡುವುದನ್ನು ತಡೆಯುವ ಯತ್ನವಾಗಿ ಅಂಥದ್ದೊಂದು ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತು. ಅದಕ್ಕಾಗಿ ಸಾರ್ವಜನಿಕರು ತಮ್ಮ ಆಧಾರ್​ ಕಾರ್ಡ್​ನ ಫೋಟೋಕಾಪಿ ಯಾರೊಂದಿಗೂ ಹಂಚಿಕೊಳ್ಳದಂತೆ ತಿಳಿಸಲಾಗಿತ್ತು. ಬದಲಾಗಿ ಕೊನೆಯ ನಾಲ್ಕು ಅಂಕಿಗಳನ್ನು ಹೊರತುಪಡಿಸಿ ಉಳಿದ ಅಂಕಿಗಳನ್ನು ಮರೆಮಾಚಿದ ಕಾರ್ಡ್ ಮಾತ್ರ ಹಂಚಿಕೊಳ್ಳುವಂತೆ ಸಲಹೆ ನೀಡಲಾಗಿತ್ತು.

    ಆದರೆ ಇದನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಕಂಡುಬಂದಿದ್ದು, ಅದೇ ಕಾರಣಕ್ಕಾಗಿ ಆ ಸಲಹೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದೆಗೆದುಕೊಳ್ಳಲಾಗಿದೆ. ಅದಾಗ್ಯೂ ಆಧಾರ್ ಕಾರ್ಡ್​ ಹೊಂದಿರುವವರು ತಮ್ಮ ವಿವೇಚನೆ ಹಾಗೂ ದೂರದೃಷ್ಟಿಗೆ ಅನುಸಾರವಾಗಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬೇಕು ಎಂದು ಪ್ರಾಧಿಕಾರವು ತಿಳಿಸಿದೆ. ಅಲ್ಲದೆ ಪ್ರಾಧಿಕಾರವು ಆಧಾರ್​ ಕಾರ್ಡ್​ದಾರರ ಗುರುತು ಮತ್ತು ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂಬುದಾಗಿಯೂ ಪ್ರಾಧಿಕಾರ ತಿಳಿಸಿದೆ.

    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..
    ಯುಐಡಿಎಐ ಹೊರಡಿಸಿದ ಹೊಸ ಪತ್ರಿಕಾ ಹೇಳಿಕೆ
    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..
    ಯುಐಡಿಎಐ ಹೊರಡಿಸಿದ್ದ ಹಳೇ ಪತ್ರಿಕಾ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts