More

    ಅಂತಿಮ ವರ್ಷದ ಪದವಿ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಯುಜಿಸಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ?

    ನವದೆಹಲಿ: ಕೋವಿಡ್ 19 ಸೋಂಕಿನ ಸಂಕಷ್ಟದ ನಡುವೆ ಸೆಪ್ಟೆಂಬರ್ 30ರೊಳಗೆ ಅಂತಿಮ ವರ್ಷದ ಪರೀಕ್ಷೆ ಮಾಡಿ ಮುಗಿಸುವಂತೆ ಕಾಲೇಜುಗಳಿಗೆ, ಯೂನಿವರ್ಸಿಟಿಗಳಿಗೆ ಜುಲೈ 6ರಂದು ನಿರ್ದೇಶನ ನೀಡಿರುವ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಕೋರ್ಟ್ ಕೋರಿಕೆಯಂತೆ ಈ ಸಂಬಂಧ ಇಂದು ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್ (ಯುಜಿಸಿ) ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.

    ಪರೀಕ್ಷೆ ನಡೆಸುವ ವಿಚಾರದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯುವುದನ್ನು ನಿರಾಕರಿಸಿರುವ ಯುಜಿಸಿ, ಸೆಪ್ಟೆಂಬರ್ 30ರೊಳಗೆ ಪರೀಕ್ಷೆ ನಡೆಸಬೇಕು ಎಂಬ ತನ್ನ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಅಲ್ಲದೆ, ಇದಕ್ಕೆ ವಿಸ್ತೃತ ಸ್ಪಷ್ಟೀಕರಣವನ್ನೂ ನೀಡಿದೆ. ಮಾರ್ಗಸೂಚಿಯ ಪರಿಷ್ಕರಣೆ ಇಲ್ಲ ಎಂದಿರುವ ಯುಜಿಸಿ, ಹಲವು ಪರಿಣತ ಸದಸ್ಯರ ಸಮಿತಿ ನೀಡಿರುವ ಶಿಫಾರಸಿನ ಮೇರೆಗೆ ಈ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಮತ್ತೆ ಪರಿಷ್ಕರಿಸುವ ಅಗತ್ಯ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ

    ಅಂತಿಮ ವರ್ಷದ ಪರೀಕ್ಷೆ ನಡೆಸದಂತೆ ಮತ್ತು ಕಳೆದ ವರ್ಷದ ಸಾಧನೆ ಅಥವಾ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ ಫಲಿತಾಂಶ ಘೋಷಿಸುವಂತೆ ನಿರ್ದೇಶನ ನೀಡಬೇಕು ಎಂದು ಅನೇಕರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಯಾವ ವಿದ್ಯಾರ್ಥಿಯಾದರೂ ಫಲಿತಾಂಶ ಸುಧಾರಿಸುವುದಕ್ಕೆ ಅವಕಾಶ ಕೋರಿದರೆ ಅದಕ್ಕೂ ಅವಕಾಶ ನೀಡಬೇಕು ಎಂಬ ಅಂಶವೂ ಮನವಿ ಅರ್ಜಿಯಲ್ಲಿದೆ.

    2030ರ ವೇಳೆಗೆ ಶಿಕ್ಷಕ ವೃತ್ತಿಯ ಕನಿಷ್ಠ ಶೈಕ್ಷಣಿಕ ಅರ್ಹತೆ ಬದಲು: ಹೊಸ ಅರ್ಹತೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts