More

    21 ವಿಶ್ವವಿದ್ಯಾಲಯಗಳೇ ನಕಲಿ, ಆ ಪೈಕಿ ರಾಜಧಾನಿಯಲ್ಲೇ ಅಧಿಕ: ಯುಜಿಸಿ ಘೋಷಣೆ..

    ನವದೆಹಲಿ: ನಕಲಿ ಎಂಬುದು ಇರದ ಕ್ಷೇತ್ರವೇ ಇಲ್ಲವೇನೋ.. ಶಿಕ್ಷಣ ಕ್ಷೇತ್ರದಲ್ಲೂ ಅಂಥ ಮತ್ತೊಂದು ನಕಲಿ ಪ್ರಕರಣ ಬಯಲಿಗೆ ಬಂದಿದೆ. ದೇಶದ 21 ವಿಶ್ವವಿದ್ಯಾಲಯಗಳ ಅಸಲಿಯತ್ತನ್ನು ಬಹಿರಂಗಪಡಿಸಿರುವ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್​ (ಯುಜಿಸಿ), ಅಷ್ಟೂ ವಿಶ್ವವಿದ್ಯಾಲಯಗಳು ನಕಲಿ ಎಂಬುದಾಗಿ ಘೋಷಿಸಿದೆ. ಜೊತೆಗೆ ಎರಡು ವಿವಿಗಳು ನಿಯಮಗಳನ್ನು ಉಲ್ಲಂಘಿಸಿವೆ ಎಂಬುದನ್ನೂ ಅದು ತಿಳಿಸಿದೆ.

    ಈ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಅತ್ಯಧಿಕ ನಕಲಿ ವಿಶ್ವವಿದ್ಯಾಲಯಗಳು ಕಂಡುಬಂದಿವೆ ಎಂಬುದನ್ನೂ ಅದು ತಿಳಿಸಿದೆ. ಮಾತ್ರವಲ್ಲ, ರಾಜ್ಯವಾರು ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಅದು ತನ್ನ ವೆಬ್​ಸೈಟ್​​ನಲ್ಲಿ (https://www.ugc.ac.in/) ಪ್ರಕಟಿಸಿದೆ. ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 8 ನಕಲಿ ವಿಶ್ವವಿದ್ಯಾಲಯಗಳು ಪತ್ತೆಯಾಗಿದ್ದರೆ, ನಂತರದ ಸ್ಥಾನದಲ್ಲಿ ಉತ್ತರಪ್ರದೇಶವಿದೆ. ಅಲ್ಲಿ ಏಳು ನಕಲಿ ವಿಶ್ವವಿದ್ಯಾಲಯಗಳು ಕಂಡುಬಂದಿವೆ.

    ದೆಹಲಿ, ಉತ್ತರಪ್ರದೇಶ ಮಾತ್ರವಲ್ಲದೆ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಒಡಿಶಾ, ಪುದುಚೇರಿ ಮತ್ತು ಆಂಧ್ರಪ್ರದೇಶಗಳಲ್ಲೂ ನಕಲಿ ವಿಶ್ವವಿದ್ಯಾಲಯಗಳು ಕಂಡುಬಂದಿವೆ ಎಂದು ತಿಳಿಸಿರುವ ಯುಜಿಸಿ, ಅವುಗಳ ಮಾಹಿತಿಯನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಿದೆ. ಅಲ್ಲದೆ ಈ ವಿಶ್ವವಿದ್ಯಾಲಯಳ ಪದವಿಗೆ ಮಾನ್ಯತೆ ಇಲ್ಲ ಎಂಬುದನ್ನೂ ತಿಳಿಸಿದೆ.

    ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗ್ಗೆ ನಾಪತ್ತೆ!

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಇಬ್ಬರು ರೌಡಿಗಳಿಗೆ 1 ತಿಂಗಳವರೆಗೆ ಗಡಿಪಾರು; ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts