More

    ಉಡುಪಿಯಲ್ಲಿ ವಾಹನ ತಪಾಸಣೆ ಬಿಗು

    ಉಡುಪಿ: ಲಾಕ್‌ಡೌನ್ ಹಿನ್ನೆಲೆ ಜಿಲ್ಲಾದ್ಯಂತ ತಾತ್ಕಾಲಿಕ 32 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅನಾವಶ್ಯಕ ವಾಹನ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಗಡಿ ಭಾಗದಲ್ಲಿ 8 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

    ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ಮಾಡಲಾಗಿದ್ದು, ಈ ಚೆಕ್‌ಪೋಸ್ಟ್‌ಗಳು 24 ಗಂಟೆ ಕಾರ್ಯನಿರ್ವಹಿಸುತ್ತಿವೆ. ಬೆಳಗ್ಗೆ 11ರ ನಂತರ ಅನಗತ್ಯ ತಿರುಗಾಡುವ ವಾಹನ ಓಡಾಟ ನಡೆಸುವ ಜನರ ವಿರುದ್ಧ ಕ್ರಮ ಕೈಗೊಳ್ಳಲು ಕೆಲವು ಕಡೆ ಹಗಲು ಹೊತ್ತಿನಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ನಿರ್ದೇಶನದಂತೆ ನಗರ ಠಾಣೆ ಪೊಲೀಸರು ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕಡಿಯಾಳಿಯಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್ ಸ್ಥಾಪಿಸಿ ವಾಹನಗಳನ್ನು ತಪಾಸಣೆ ನಡೆಸಿದರು. ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿ, ಟೆಂಪೋ ಹಾಗೂ ಆಂಬುಲೆನ್ಸ್‌ಗೆ ವಿನಾಯಿತಿ ನೀಡಿ, ಉಳಿದಂತೆ ಕಾರು, ದ್ವಿಚಕ್ರ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು. ಗುರುತಿನ ಚೀಟಿ, ಇತರೆ ದಾಖಲೆ ಪರಿಶೀಲನೆ ನಡೆಸಿದರು. ವಿನಾಕಾರಣ ಹೊರಗಡೆ ಬಂದಿದ್ದ ವಾಹನ ಮಾಲೀಕರನ್ನು ಹೆಚ್ಚಿನ ವಿಚಾರಣೆ ನಡೆಸಿದರು.

    ಹೆಚ್ಚಿದ ಓಡಾಟ: ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿವಾಹನ ಮತ್ತು ಜನರ ಓಡಾಟ ಹೆಚ್ಚಿತ್ತು. ನಗರದ ಕೆಎಂ ಮಾರ್ಗ ಸೇರಿದಂತೆ, ಇತರೆ ರಸ್ತೆಗಳಲ್ಲಿ ಜನರು ಖರೀದಿಗೆ ಸರತಿ ಸಾಲಿನಲ್ಲಿ ನಿಂತು ಕಾಯುತಿದ್ದರು. ಅಂಗಡಿ, ಮೆಡಿಕಲ್ ಶಾಪ್ ಎದುರು ವಾಹನಗಳ ಪಾರ್ಕಿಂಗ್ ಸಂಖ್ಯೆ ಹೆಚ್ಚಿತ್ತು. ಹೆಚ್ಚಿನ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಕೂರುವಂತೆ ಕುರ್ಚಿ ಇರಿಸಲಾಗಿತ್ತು. ದಿನಸಿ ಸ್ಟಾಕ್ ಖಾಲಿಯಾದ್ದರಿಂದ ಕೆಲವು ಅಂಗಡಿಗಳು ಬಾಗಿಲು ತೆರೆಯದಿದ್ದರೆ, ಕೆಲವು ಬೇಗನೆ ಮುಚ್ಚಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts