More

    ಉಡುಪಿ ಪರ್ಯಾಯೋತ್ಸವದಲ್ಲಿ ಅನ್ನಸಂತರ್ಪಣೆ| ಭಕ್ಷ್ಯ ತಯಾರಿ ಆರಂಭಿಸಿದ 100 ಬಾಣಸಿಗರು

    ಉಡುಪಿ: ಪರ್ಯಾಯೋತ್ಸವದಲ್ಲಿ ಅನ್ನಸಂತರ್ಪಣೆಗಾಗಿ 100ಕ್ಕೂ ಅಧಿಕ ಬಾಣಸಿಗರಿಂದ ಬೈಲಕೆರೆ ಮೈದಾನದಲ್ಲಿ ಸೋಮವಾರ ಭಕ್ಷೃ ತಯಾರಿ ಕೆಲಸ ಪ್ರಾರಂಭವಾಗಿದೆ. ಜ.17ರಂದು ರಾತ್ರಿ 35ರಿಂದ 40 ಸಾವಿರ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. 18ರಂದು 40ರಿಂದ 50 ಸಾವಿರ ಭಕ್ತರ ಅನ್ನಸಂತರ್ಪಣೆಗೆ ಸಿದ್ಧತೆ ನಡೆಯುತ್ತದೆ. ಪರ್ಯಾಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಬಾಣಸಿಗರು ಭಕ್ಷೃ ಭೋಜ್ಯಗಳ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಕೃಷ್ಣ ಮಠ ಪಾರ್ಕಿಂಗ್ ಏರಿಯಾ ಬಳಿಯ ಬೈಲಕೆರೆ ಸೇರಿಗಾರ ಕುಟುಂಬಸ್ಥರ ಸುಮಾರು ಒಂದೂವರೆ ಎಕರೆ ಸ್ಥಳದಲ್ಲಿ ಪ್ರಸಾದ ತಯಾರಿ ಮತ್ತು ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

    ಬೆಲ್ಲದ ಲಾಡು: ಸಕ್ಕರೆ ಮತ್ತು ಮೈದಾನ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಬಾರಿ ಬೆಲ್ಲದ ಪಾಕದಿಂದ ಸುಮಾರು 60 ಸಾವಿರ ಲಾಡು ಹಾಗೂ ಸುಮಾರು 60 ಸಾವಿರ ಗೋಧಿ ಹಿಟ್ಟಿನ ಬರ್ಫಿ, 1.20 ಲಕ್ಷ ಸಜ್ಜಿಗೆ ವಡೆ ತಯಾರಿಸಲಾಗುತ್ತದೆ. ಇದರ ಜತೆಗೆ ಪರ್ಯಾಯದಲ್ಲಿ ಭಾಗವಹಿಸುವ ಗಣ್ಯರಿಗೆ ವಿತರಿಸಲು 10 ಸಾವಿರ ದೊಡ್ಡ ಲಡ್ಡಿಗೆ ಪ್ರಸಾದ ತಯಾರಿ ನಡೆಯುತ್ತಿದೆ.

    ಭೋಜನ ವ್ಯವಸ್ಥೆ: 17ರಂದು ರಾತ್ರಿ ನಿರ್ಗಮನ ಪರ್ಯಾಯ ಶ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ ರಥಬೀದಿಯಲ್ಲಿ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಿಂದ ಪ್ರಾರಂಭಿಸಲಾಗಿದೆ. ಅದರಂತೆ ಸುಮಾರು 40 ಸಾವಿರ ಮಂದಿಗೆ ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
    18ರಂದು ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು, ಸುಮಾರು 50 ಸಾವಿರ ಮಂದಿಗೆ 2 ಬಗೆ ಪಲ್ಯ, ಅನ್ನ ಸಾರು, ಮಟ್ಟುಗುಳ್ಳ ಸಾಂಬಾರು, ಗೋಧಿ ಪಾಯಸ, ಲಾಡು, ಬರ್ಫಿ, ವಡೆ, ಮಜ್ಜಿಗೆ ಇರಲಿದೆ.

    ಪರ್ಯಾಯದ ಅಡುಗೆ ವ್ಯವಸ್ಥೆ ಈಗಾಗಲೇ ಪ್ರಾರಂಭವಾಗಿದ್ದು, 100ಕ್ಕೂ ಅಧಿಕ ಬಾಣಸಿಗರು ಬೆಳಗ್ಗೆ 7 ರಿಂದ ಸಾಯಂ 5.30ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಊಟಕ್ಕೆ ಬಫೆ ಮತ್ತು ಟೇಬಲ್ ವ್ಯವಸ್ಥೆ ಇರಲಿದೆ.
    ವಿಷ್ಣುಮೂರ್ತಿ ಭಟ್ ಉದ್ಯಾವರ, ಪಾಕಶಾಲೆ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts