More

    ಉಡುಪಿಯಲ್ಲಿ ಬಿಜೆಪಿ ಮೇಲುಗೈ

    ಉಡುಪಿ: ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ 153ರಲ್ಲಿ 115 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.

    ಬುಧವಾರ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಕಾರ್ಕಳ ಮತ್ತು ಕಾಪು ತಾಲೂಕು ಗ್ರಾಪಂಗಳ ಪೂರ್ಣ ಫಲಿತಾಂಶವನ್ನು ಬೆಳಗಿನ ಜಾವ ಎರಡು ಮೂವತ್ತಕ್ಕೆ ಘೋಷಿಸಲಾಯಿತು. 153 ಪಂಚಾಯಿತಿಗಳಲ್ಲಿ 2,365 ಸ್ಥಾನಗಳಿಗೆ 128 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕೋಡಿ ಕನ್ಯಾನ ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರ ಕಾರಣ ಹನ್ನೆರಡು ಸ್ಥಾನಗಳು ಖಾಲಿ ಉಳಿದಿವೆ.

    ವಿಧಾನಸಭಾ ಕ್ಷೇತ್ರವಾರು: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತರು 15, ಕಾಂಗ್ರೆಸ್ ಬೆಂಬಲಿತರಿಗೆ 4 ಗ್ರಾಪಂಗಳಲ್ಲಿ ಬಹುಮತ ದೊರೆತಿದೆ. ಕಾಪುವಿನಲ್ಲಿ ಬಿಜೆಪಿ 17, ಕಾಂಗ್ರೆಸ್ 8, ಪಕ್ಷೇತರ 1. ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ 30, ಕಾಂಗ್ರೆಸ್ 2, ಒಂದು ಗ್ರಾಪಂನಲ್ಲಿ ಪಕ್ಷೇತರ, ಇನ್ನೊಂದರಲ್ಲಿ ಕಾಂಗ್ರೆಸ್- ಬಿಜೆಪಿ ಸಮಬಲ ಪಡೆದಿವೆ. ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ 27, ಕಾಂಗ್ರೆಸ್ 11 ಕಡೆ ಮೇಲುಗೈ ಸಾಧಿಸಿವೆ. ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ 25, ಕಾಂಗ್ರೆಸ್ 11 ಗ್ರಾಪಂಗಳಲ್ಲಿ ಬಹುಮತ ಗಳಿಸಿವೆ.

    ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಲಭಿಸಿದೆ. 125 ಪಂಚಾಯಿತಿಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿದ್ದು, 115ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
    – ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧ್ಯಕ್ಷ, ಬಿಜೆಪಿ

    ಕಾಂಗ್ರೆಸ್ ಜಿಲ್ಲೆಯ 55 ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 800ಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳು ಜಯ ಗಳಿಸಿದ್ದಾರೆ.
    – ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧ್ಯಕ್ಷ, ಕಾಂಗ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts