More

    ಭಾರತದಲ್ಲಿ ಯುಎಸ್ ಮಿಷನ್​ನಿಂದ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿ ವೀಸಾ ನೀಡಿಕೆ; ಬೇರೆಲ್ಲ ದೇಶಗಳಿಂತಲೂ ಅಧಿಕ..

    ಚೆನ್ನೈ: ಭಾರತದಲ್ಲಿ ಯುಎಸ್​ ಮಿಷನ್​ ಈ ವರ್ಷ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದು, ಪ್ರಸ್ತುತ ವರ್ಷ ಈಗಾಗಲೇ 82,000 ವಿದ್ಯಾರ್ಥಿಗಳು ಅದನ್ನು ಪಡೆದಿದ್ದಾರೆ. ಅಲ್ಲದೆ, ಯುಎಸ್​ ವಿದ್ಯಾರ್ಥಿ ವೀಸಾ ಪಡೆದವರಲ್ಲಿ ಭಾರತೀಯ ವಿದ್ಯಾರ್ಥಿಗಳೇ ಅಧಿಕ ಪ್ರಮಾಣದಲ್ಲಿದ್ದಾರೆ.

    ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ದೂತಾವಾಸಗಳಾದ ಚೆನ್ನೈ, ಹೈದರಾಬಾದ್, ಕೋಲ್ಕತ ಮತ್ತು ಮುಂಬೈಗಳಲ್ಲಿ ಈ ವೀಸಾಗಳ ವಿತರಣೆ ಆಗಿವೆ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಅಭ್ಯಾಸಕ್ಕೆ ತೊಡಗಲು ಸಾಧ್ಯವಾಗುವಂತೆ ವೀಸಾ ಹಂಚಿಕೆ ಆದ್ಯತೆ ವಹಿಸಿ ಈ ಕೇಂದ್ರಗಳಲ್ಲಿ ಪ್ರಕ್ರಿಯೆ ನಡೆಸಲಾಗಿತ್ತು.

    ಚಾರ್ಜ್ ಡಿ’ ಅಫೇರ್ಸ್ (ಸಿಡಿಎ) ಪೆಟ್ರೀಷಿಯಾ ಲ್ಯಾಸಿನಾ ಅವರು ಭಾರತದ ಸಾಧನೆಯಲ್ಲಿ ಯುಎಸ್ ಮಿಷನ್ ಪಾತ್ರವನ್ನು ಶ್ಲಾಘಿಸಿದರು. ಕೋವಿಡ್-19 ಅವಧಿಯಲ್ಲಿ ವಿಳಂಬವಾಗಿತ್ತು. ಆದರೆ ಈ ಸಲ ಬಹಳಷ್ಟು ವಿದ್ಯಾರ್ಥಿಗಳು ಬೇಗ ವೀಸಾ ಪಡೆದು ಅಧ್ಯಯನಕ್ಕಾಗಿ ಯುನಿವರ್ಸಿಟಿಗಳನ್ನು ತಲುಪಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗುತ್ತಿದೆ. ಈ ಬೇಸಿಗೆಯೊಂದರಲ್ಲೇ ನಾವು 82 ಸಾವಿರ ವಿದ್ಯಾರ್ಥಿಗಳಿಗೆ ವೀಸಾ ನೀಡಿದ್ದೇವೆ. ಇದು ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಅಧಿಕ. ಹೆಚ್ಚಿನ ಭಾರತೀಯ ಕುಟುಂಬಗಳಿಗೆ ಯುನೈಟೆಡ್ ಸ್ಟೇಟ್ಸ್ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಬೇಡಿಕೆಯಿರುವ ದೇಶವಾಗಿ ಉಳಿದಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ವಿದ್ಯಾರ್ಥಿಗಳು ನಮ್ಮ ಎರಡೂ ದೇಶಗಳಿಗೆ ನೀಡುವ ಪ್ರಮುಖ ಕೊಡುಗೆಗಳಿಗೆ ಇದು ನಿದರ್ಶನವಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

    ಭಾರತದಲ್ಲಿ ಯುಎಸ್ ಮಿಷನ್​ನಿಂದ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿ ವೀಸಾ ನೀಡಿಕೆ; ಬೇರೆಲ್ಲ ದೇಶಗಳಿಂತಲೂ ಅಧಿಕ..

    ಕಾನ್ಸುಲರ್ ವ್ಯವಹಾರಗಳ ಸಚಿವ ಕೌನ್ಸಿಲರ್ ಡಾನ್ ಹೆಫ್ಲಿನ್ ಮಾತನಾಡಿ, ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣ ಮುಂದುವರಿಸಲು ನೆರವಾಗುವಲ್ಲಿ ನಾವು ಪಾತ್ರ ವಹಿಸಿದ್ದೇವೆ ಎಂಬುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಯುಎಸ್ ರಾಜತಾಂತ್ರಿಕತೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ಚಲನಶೀಲತೆ ಕೇಂದ್ರಿತವಾಗಿದೆ. ಇಲ್ಲಿಯೂ ವಿದ್ಯಾರ್ಥಿಗಳ ಕೊಡುಗೆ ಮಹತ್ತರವಾದದ್ದು ಎಂದಿದ್ದಾರೆ.

    ಯುಎಸ್​ನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳು ಶೇ. 20ರಷ್ಟಿದ್ದಾರೆ. 2021ರ ಓಪನ್​ ಡೋರ್ಸ್ ವರದಿ ಪ್ರಕಾರ 2020-21ರ ಶೈಕ್ಷಣಿಕ ವರ್ಷದಲ್ಲಿ 1,67,582 ಭಾರತೀಯ ವಿದ್ಯಾರ್ಥಿಗಳು ಯುಎಸ್​ನಲ್ಲಿ ಅಭ್ಯಾಸ ಮಾಡಿದ್ದರು ಎಂದು ಹೇಳಿದ್ದಾರೆ.

    ಆರೋಗ್ಯದ ಕುರಿತು ಆತಂಕ, ವೈದ್ಯರ ನಿಗಾದಲ್ಲಿ ರಾಣಿ ಎಲಿಜಬೆತ್​ II..

    ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆ ಮತ್ತಷ್ಟು ಜೋರು; ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

    ನಟ ಧ್ರುವ ಸರ್ಜಾ ಪತ್ನಿಗೆ ಅದ್ಧೂರಿ ಸೀಮಂತ; ಕುಟುಂಬಸ್ಥರು, ಆಪ್ತರು ಭಾಗಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts