More

    ಸೋಮವಾರದಿಂದ ಲಾಕ್​ಡೌನ್​, ಭಾನುವಾರವೇ ಶಾಪಿಂಗ್​ ಮುಗಿಸಿಕೊಳ್ಳಿ; ಜನರಿಗೆ ಕಾಲಾವಕಾಶ ನೀಡಿದ ಅಸ್ಸಾಂ ಸರ್ಕಾರ

    ನವದೆಹಲಿ: ಕರೊನಾ ಹೆಚ್ಚುತ್ತಿದ್ದಂತೆ ಹಲವು ರಾಜ್ಯಗಳು ಲಾಕ್​ಡೌನ್​ಗೆ ಮೊರೆ ಹೋಗಿವೆ. ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್​ಡೌನ್​ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

    ದೇಶದಲ್ಲಿ ಮೊದಲ ಬಾರಿಗೆ ಲಾಕ್​ಡೌನ್​ ಘೋಷಿಸಿದಾಗ, ಜನರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಇದು ಜನರಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿತ್ತು. ಈ ಕಾರಣ ಕಾರಣಗಳಿಂದಾಗಿ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಲಾಕ್​ಡೌನ್​ ಮುನ್ನ ಘೋಷಣೆ ಮಾಡಲಾಗಿದೆ. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

    ಇದನ್ನೂ ಓದಿ; ಜುಲೈ 31ರ ವರೆಗೆ ಲಾಕ್​ಡೌನ್​; ಶಾಲಾ-ಕಾಲೇಜುಗಳು ಬಂದ್​; ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆಲ್ಲಿ?

    ಗುವಾಹಟಿಯಲ್ಲಿ ಸೋಮವಾರದಿಂದ ( ಜೂನ್​ 27) 14 ದಿನಗಳವರೆಗೆ ಸಂಪೂರ್ಣ ಲಾಕ್​ಡೌನ್​ ಇರಲಿದೆ. ರಾತ್ರಿ 7 ಗಂಟೆಯಿಂದ ಬೆಳಗಿನ 7 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಹಿಮಾಂತ್​ ಬಿಸ್ವ ಸರ್ಮ ಹೇಳಿದ್ದಾರೆ. ಇಡೀ ಕಾಮರೂಪ್​ ಜಿಲ್ಲೆಗೆ ಅನ್ವಯಿಸಲಿದೆ.

    ಲಾಕ್​ಡೌನ್​ ಅವಧಿಯಲ್ಲಿ ಔಷಧ ಅಂಗಡಿಗಳು ಆಸ್ಪತ್ರೆಗಳು ಮಾತ್ರ ತೆರೆದಿರಲಿವೆ. ಹೀಗಾಗಿ ಭಾನುವಾರವೇ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಇತರ ನಗರ ಹಾಗೂ ನಗರಸಭೆ ಪ್ರದೇಶಗಳಲ್ಲೂ ಲಾಕ್​ಡೌನ್​ ಇರಲಿದ್ದು, ವಾರಾಂತ್ಯದಲ್ಲಿ ಅಗತ್ಯ ಸೇವೆಗಳನ್ನು ಪಡೆದುಕೊಳ್ಳು ಅವಕಾಶವಿರಲಿದೆ. ಬ್ಯಾಂಕ್​​ಗಳು ಸೀಮಿತ ಅವಧಿಗೆ ತೆರದಿರಲಿವೆ.

    ಇದನ್ನೂ ಓದಿ; ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ 

    ಜೂನ್​ 15ರ ನಂತರ ಗುವಾಹಟಿಯಲ್ಲಿ 700 ಹೊಸ ಪ್ರಕರಣಗಳು ವರದಿಯಾಗಿವೆ. ಈ ಕಾರಣಕ್ಕಾಗಿ ಲಾಕ್​​ಡೌನ್​ ಜಾರಿಗೊಳಿಸಲಾಗುತ್ತಿದೆ. ಗುರುವಾರವಷ್ಟೇ ಗುವಾಹಟಿಯೊಂದರಲ್ಲಿಯೇ 133 ಪ್ರಕರಣಗಳು ಪತ್ತೆಯಾಗಿವೆ.
    ಅಸ್ಸಾಮ್​ನಲ್ಲಿ ಸದ್ಯ 6321 ಪ್ರಕರಣಗಳಿದ್ದು, ಈ ಪೈಕಿ 2,279 ಸಕ್ರಿಯವಾಗಿವೆ. ಒಟ್ಟು 9 ಜನರು ಮೃತಪಟ್ಟಿದ್ದಾರೆ.

    ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts