More

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂವ್​ ಜಿಲ್ಲೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಪ್ರತಿರೋಧ ತೋರಿದ ಇಬ್ಬರು ಉಗ್ರರು ಸೋಮವಾರ ಬೆಳಗ್ಗೆ ಎನ್​ಕೌಂಟರ್​ಗೆ ಬಲಿಯಾಗಿದ್ದಾರೆ.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಕುಲ್ಗಾಂವ್ ಜಿಲ್ಲೆಯ ದಮ್ಹಾಲ್​ ಹಾಂಜಿಪೊರಾ ಪ್ರದೇಶದ ಖುರ್ ಗ್ರಾಮದಲ್ಲಿ ಉಗ್ರರು ಅಡಗಿದ್ದರು. ರಕ್ಷಣಾ ಪಡೆಗಳು ಉಗ್ರರಿದ್ದ ಪ್ರದೇಶವನ್ನು ಸುತ್ತುವರಿದು ಶರಣಾಗತಿಗೆ ಸೂಚಿಸಿದಾಗ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಸೇನಾಪಡೆ ಪ್ರತಿದಾಳಿ ನಡೆಸಿದ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇದನ್ನೂ ಓದಿ:  ಸೋಂಕಿಗೆ ಸೆನ್ಸ್ ಮಾಸ್ಕ್ ಶಾಕ್

    ಕಾರ್ಡನ್​ ಆ್ಯಂಡ್ ಸರ್ಚ್ ಆಪರೇಷನ್​ ಅನ್ನು ಸಿಆರ್​ಪಿಎಫ್​, ಕುಲ್ಗಾಂವ್ ಪೊಲೀಸ್, 34 ಆರ್​ಆರ್ ತಂಡಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ನಡೆಸಿದೆ. ಇದಕ್ಕೂ ಮುನ್ನ ಕಳೆದ ಮಂಗಳವಾರ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್​ಬಾಗ್​ ಸಿಂಗ್​, ಪಾಕಿಸ್ಥಾನದಿಂದ 300ಕ್ಕೂ ಹೆಚ್ಚು ಉಗ್ರರು ಗಡಿಯಲ್ಲಿದ್ದು, ಪಿಒಕೆ ಮೂಲಕ ಒಳನುಸುಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಈ ವರ್ಷ 30 ಉಗ್ರರು ಜಮ್ಮು-ಕಾಶ್ಮೀರದೊಳಕ್ಕೆ ನುಸುಳಿದ ವರದಿ ಇದ್ದು, ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದ್ದರು. ಇದರ ಬೆನ್ನಿಗೆ ನಿಗಾವನ್ನು ಇನ್ನಷ್ಟು ಬಿಗಿಗೊಳಿಸಿರುವ ಭದ್ರತಾ ಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆಯನ್ನೂ ಮುಂದುವರಿಸಿವೆ. (ಏಜೆನ್ಸೀಸ್)

    ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್​ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts