More

    ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..

    ಬೆಂಗಳೂರು: ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದು ತಿಂಗಳಿಗೆ 20 ಸಾವಿರ ರೂಪಾಯಿಯಂತೆ ಸಂಬಳ ಪಡೆದು ಮಾಡಬಾರದ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ವಿಕಾಸ್ ಮತ್ತು ಶಿವಂ ಬಂಧಿತ ಆರೋಪಿಗಳು. ಜಾರ್ಖಂಡ್​ನಿಂದ ಬೆಂಗಳೂರಿಗೆ ಬಂದಿದ್ದ ವಿಕಾಸ್ ಮತ್ತು ಶಿವಂ, ಇಲ್ಲಿನ ವೈಟ್‌ಫೀಲ್ಡ್‌ನ ಪಟ್ಟಂದೂರು ಸಮೀಪ ನೆಲೆಸಿದ್ದರು. ದೆಹಲಿಯಲ್ಲಿ ನೆಲೆಸಿರುವ, ಬಿಹಾರ ಮೂಲದ ಅಕ್ಷಯ್ ಪಾಂಡೆ ಇವರಿಬ್ಬರನ್ನು ಬೆಂಗಳೂರಿಗೆ ಕಳಿಸಿ, 20 ಸಾವಿರ ರೂಪಾಯಿ ಸಂಬಳ ಫಿಕ್ಸ್​ ಮಾಡಿ ಕೆಲಸಕ್ಕೆ ಇರಿಸಿಕೊಂಡಿದ್ದ.

    ಅಕ್ಷಯ್ ಪಾಂಡೆ ಡಾರ್ಕ್ ವೆಬ್‌ಸೈಟ್‌ನ ಬಿಟ್ ಕಾಯಿನ್ ಕೊಟ್ಟು ಅಂತಾರಾಷ್ಟ್ರೀಯ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸುತ್ತಿದ್ದ. ವಿದೇಶದಿಂದ ಕೊರಿಯರ್‌ನಲ್ಲಿ ದೆಹಲಿಗೆ ಡ್ರಗ್ಸ್ ತರಿಸಿಕೊಂಡು ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದ. ಆನಂತರ ತನ್ನ ಸಹಚರರ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದ. ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದ ಅಕ್ಷಯ್ ಪಾಂಡೆ ನಗರದಲ್ಲಿ ಸಣ್ಣ ತಂಡಗಳು ಮಾಡಿಕೊಂಡು ಎಲ್ಲೆಡೆ ನೆಟ್‌ವರ್ಕ್ ಬೆಳೆಸಿಕೊಂಡಿದ್ದಾನೆ.

    ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಸಿಲಿಕಾನ್ ಸಿಟಿಯಲ್ಲಿ ಮಾದಕವಸ್ತು ವ್ಯಸನಿಗಳ ಮನೆ ಬಾಗಿಲಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿಕಾಸ್ ಮತ್ತು ಶಿವಂ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತರಿಂದ 150 ಗ್ರಾಂ ಎಂಡಿಎಎ, ಎಕ್ಸ್​ಟೆಸಿ ಮಾತ್ರೆಗಳು, 400 ಗ್ರಾಂ ಚರಸ್, 3 ಕೆಜಿ ಹ್ಯಾಶಿಶ್ ಆಯಿಲ್, 30 ಕೆಜಿ ಗಾಂಜಾ ಸೇರಿ 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಇತ್ತೀಚಿಗೆ ಸೆರೆಸಿಕ್ಕ 6 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಪ್ರಕರಣದ ಬೆನ್ನತ್ತಿದ್ದಾಗ ಮತ್ತೊಂದು ಗ್ಯಾಂಗ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಿಂಗಳ ಹಿಂದೆ ಜಾರ್ಖಂಡ್​ನ ವಿಕಾಸ್ ಮತ್ತು ಶಿವಂ ಅವರನ್ನು ನಗರಕ್ಕೆ ಕಳುಹಿಸಿ ವೈಟ್‌ಫೀಲ್ಡ್‌ನಲ್ಲಿ ಡ್ರಗ್ಸ್ ಪೂರೈಕೆ ಜವಾಬ್ದಾರಿ ನೀಡಿದ್ದ ಪಾಂಡೆ, ಸ್ಥಳೀಯ ಇಬ್ಬರು ಸಬ್ ಪೆಡ್ಲರ್‌ಗಳನ್ನೂ ಜತೆಗೆ ನೇಮಿಸಿದ್ದ. ರೈಲಿನಿಂದ ಆರೋಪಿಗಳಿಗೆ ಡ್ರಗ್ಸ್ ಜತೆಗೆ ವ್ಯಸನಿಗಳ ಪಟ್ಟಿಯನ್ನು ಪಾಂಡೆ ಕಳುಹಿಸಿದ್ದ. ಆ ಪ್ರಕಾರ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಚರಸ್, ಎಂಡಿಎಂಎ, ಎಲ್‌ಎಸ್‌ಡಿ, ಹೈಡ್ರೋ ಗಾಂಜಾ ಹೀಗೆ ಎಲ್ಲ ರೀತಿಯ ಡ್ರಗ್ಸ್‌ಗಳು ಮಾರಾಟ ಮಾಡುತ್ತಿದ್ದರು. ಅದಕ್ಕಾಗಿ ಹೆಚ್ಚು ಜನರು ಈತನ ಬಳಿಯೇ ಡ್ರಗ್ಸ್ ಖರೀದಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    20 ಸಾವಿರ ಸಂಬಳ: ಪ್ರೌಢಶಾಲೆಯಲ್ಲಿ ವ್ಯಾಸಂಗ ತೊರೆದ ವಿಕಾಸ್ ಮತ್ತು ಶಿವಂಗೆ ಹಣದಾಸೆ ತೋರಿಸಿ ಡ್ರಗ್ಸ್ ಜಾಲಕ್ಕೆ ಅಕ್ಷಯ್ ಪಾಂಡೆ ಸೆಳೆದಿದ್ದ. ತಲಾ 20 ಸಾವಿರ ರೂ. ವೇತನ ಕೊಡುತ್ತಿದ್ದ. ಇದೇ ರೀತಿ ನಗರದಲ್ಲಿ ಬೇರೆಡೆ ಸಹ ಪಾಂಡೆ ತಂಡಗಳು ಎಲ್ಲೆಡೆ ಇರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​

    ಡ್ರಗ್​ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ತಿಳಿಸಿದವನ ಬಳಿಯೇ ಇತ್ತು ಗಾಂಜಾ ಮತ್ತು ಏರ್​ಗನ್​!

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts