More

    ಸಿಲಿಂಡರ್​ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರ ಸಾವು

    ಕುಣಿಗಲ್​: ಪಟ್ಟಣದಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಲಿಸದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ. ಕೋಟೆ ವಾಸಿಗಳಾದ ಕುಶಾಲ್​ (11), ಶಿವಣ್ಣ (45) ಮತರು.
    ಕಾರಪುರಿ ವ್ಯಾಪಾರಿಯಾಗಿದ್ದ ರವಿಕುಮಾರ್​ ಅವರು ಪುರಿ ಹುರಿಯಲು ನಾಲ್ಕು ಕೆಜಿಯ ಗ್ಯಾಸ್​ ಸಿಲಿಂಡರ್​ ಸ್ಟೌ ಬಳಸುತ್ತಿದ್ದರು. ಮೇ 17ರಂದು ರವಿಕುಮಾರ್​ ಹೆಂಡತಿ ಶ್ರುತಿ, ಪುತ್ರಿ ಹೇಮಲತಾಳನ್ನು ಟ್ಯೂಷನ್​ಗೆ ಬಿಡಲು ಮನೆಯಿಂದ ಹೊರ ಬಂದ ವೇಳೆ ಸ್ಫೋಟವಾಗಿದೆ. ಶಬ್ದ ಕೇಳಿ ಮನೆ ಒಳಗೆ ಹೋಗಿ ನೋಡಿದಾಗ ಸಿಲಿಂಡರ್​ ಸ್ಫೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಇದನ್ನು ಗಮನಿಸಿದ ಶ್ರುತಿ ಕೂಗಿಕೊಂಡಿದ್ದಾರೆ. ತಕ್ಷಣ ಮೇಲಿನ ಮನೆಯಲ್ಲಿದ್ದ ಹೇಮಲತಾ, ಶಿವಣ್ಣ, ಮಂಜಮ್ಮ, ಸಮೀನಾ ಓಡಿ ಬಂದಿದ್ದಾರೆ. ಇವರೊಂದಿಗೆ ರವಿಕುಮಾರ್​ ಮಗ ಕುಶಾಲ್​ ಸಹ ಮನೆಯೊಳಗೆ ಬಂದಿದ್ದು, ಬೆಂಕಿ ತಗುಲಿ ಎಲ್ಲರೂ ಗಾಯಗೊಂಡಿದ್ದಾರೆ. ಕುಣಿಗಲ್​ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೇ ಕುಶಾಲ್​, ಶಿವಣ್ಣ ಮತಪಟ್ಟಿದ್ದಾರೆ. ಅವಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಹೇಮಲತಾ, ಮಂಜಮ್ಮ, ಸಮೀನಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

    ಸಿಲಿಂಡರ್​ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts