More

    ಟೀಮ್ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್‌ನ 30 ಕಿಲೋಮೀಟರ್ ಅಂತರದಲ್ಲಿ ವಿಮಾನ ಅವಘಡ..!

    ಸಿಡ್ನಿ: ಟೀಮ್ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್‌ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿ ಶನಿವಾರ ವಿಮಾನ ಅಪಘಾತವಾಗಿರುವ ಘಟನೆ ಜರುಗಿದೆ. ಸ್ಥಳೀಯ ಕಾಲಮಾನ ಸಂಜೆ 4.30ಕ್ಕೆ ಈ ಅವಘಡ ಸಂಭವಿಸಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಕ್ರಿಕೆಟ್ ಹಾಗೂ ಫುಟ್‌ಬಾಲ್ ಮೈದಾನದಲ್ಲಿ ಬಿದ್ದಿದೆ ಎಂದು ತಿಳಿದು ಬಂದಿದೆ.

    ಘಟನೆಯಿಂದ ಇಬ್ಬರಿಗೆ ಗಾಯಗಳಾಗಿದ್ದು, ಹೆಚ್ಚಿನ ಪ್ರಾಣಪಾಯವಾಗಿಲ್ಲ. ಕೂದಲೆಳೆ ಅಂತರದಲ್ಲಿ ಭಾರಿ ಪ್ರಮಾಣದ ಅವಘಡ ತಪ್ಪಿದೆ ಎಂದು ಕ್ರೊಮೆರ್ ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ ಗ್ರೇಗ್ ರೊಲ್ಲಿನ್ಸ್ ತಿಳಿಸಿದ್ದಾರೆ. ಸಮೀಪದಲ್ಲಿ ಕ್ರಿಕೆಟ್ ಆಡುತ್ತಿದ್ದ ಕ್ರಿಕೆಟಿಗರು ನೆರವಿಗೆ ಧಾವಿಸಿದರು ಎಂದರು. ಘಟನೆಯಿಂದ ಇಬ್ಬರಿಗೆ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ವಿಮಾನದ ತರಬೇತಿ ಶಾಲೆಯೊಂದಕ್ಕೆ ಸೇರಿದ್ದಾಗಿದ್ದು, ತನಿಖೆ ಮುಂದುವರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts