More

    ಲಾಕ್​ಡೌನ್ ಆರಂಭದಿಂದಲೂ ಬಿಯರ್​ ಕುಡಿಯುತ್ತಲೇ ದಿನ ಕಳೆಯುತ್ತಿದ್ದಾರೆ, ಯಾರು ಗೊತ್ತಾ?

    ಕರೊನಾ ಲಾಕ್​ಡೌನ್​ನಿಂದಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್​, ವೈನ್​ಶಾಪ್, ಪಬ್​ಗಳು ಬೀಗ ಹಾಕಿದ್ದರಿಂದ ಮದ್ಯ ಸಿಗದೆ ಕಂಗೆಟ್ಟಿದ್ದ “ಎಣ್ಣೆ”ಪ್ರಿಯರು, ಮದ್ಯದಂಗಡಿ ಬಾಗಿಲು ತೆರೆದರೆ ಸಾಕಪ್ಪ ಎಂದು ದೇವರ ಮೊರೆ ಹೋಗಿದ್ದೂ ಉಂಟು. ಕುಂತಲ್ಲಿ ಕೂರಲಾರದೆ, ನಿಂತಲ್ಲಿ ನಿಲ್ಲಲಾರದೆ ಮದ್ಯಾರಾಧನೆಯ ಅವಕಾಶಕ್ಕಾಗಿ ಇಲ್ಲಿ ಚಾತಕಪಕ್ಷಿಯಂತೆ ಲಕ್ಷಾಂತರ ಮಂದಿ ಕಾಯುತ್ತಿದ್ದರು. ಆದರೆ, ಅಲ್ಲಿ ಮಾತ್ರ ಇಬ್ಬರು ಲಾಕ್​ಡೌನ್​ ಆರಂಭದಿಂದಲೂ ಎಣ್ಣೆ ಪಾರ್ಟಿ ಮಾಡಿಕೊಂಡು ಎಂಜಾಯ್​ ಮಾಡುತ್ತಿದ್ದಾರೆ! ಅದೂ ಪಬ್​ನಲ್ಲೇ… ಗೇಮ್ಸ್​ ಆಡಿಕೊಂಡು, ಬಿಯರ್​ ಕುಡಿದು…

    ಅಂದಹಾಗೆ ಅವರಿಬ್ಬರಿಗೂ ಅಂತಹ ಅವಕಾಶ ಸಿಕ್ಕಿದ್ದು ಉತ್ತರ ಲಂಡನ್‌ನಲ್ಲಿ. ದಿನಸಿ ಸಾಮಗ್ರಿ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಇದ್ದ ತುರ್ತು ಪರಿಸ್ಥಿತಿಯಲ್ಲೂ ಲಾಕ್​ಡೌನ್​ ಸಮಯವನ್ನು ಎಂಜಾಯ್ ಮಾಡುತ್ತ ಕಳೆದವರು ಡೊಮ್ ಟೌನ್‌ಸೆಂಡ್(29) ಮತ್ತು ಸ್ಟೀವ್ ಪಾಂಡ್ (39). ಇಲ್ಲಿನ ಸ್ಟೋಕ್ ನ್ಯೂಂಗ್ಟನ್‌ನ ‘ದಿ ಪ್ರಿನ್ಸ್’ ಹೆಸರಿನ ಪಬ್​ ಮೇಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅವರಿಬ್ಬರು ವಾಸಿಸುತ್ತಿದ್ದಾರೆ. ಕರೊನಾ ವೈರಸ್ ಕಾರಣ ಪಬ್​ ಮುಚ್ಚಲಾಗಿತ್ತು.

    ಇದನ್ನೂ ಓದಿ ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್​19ಗೆ ರಾಮಬಾಣ

    ಈ ಪಬ್‌ನ ಸಹಾಯಕ ವ್ಯವಸ್ಥಾಪಕರಾಗಿರುವ ಡೊಮ್ ಟೌನ್‌ಸೆಂಡ್ ಅವರು ಲಾಕ್​ಡೌನ್​ ಆರಂಭವಾಗುವ ಎರಡು ತಿಂಗಳ ಮೊದಲೇ ಪಬ್​ ಮೇಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಕ್ಕೆ ಬಂದಿದ್ದರು. ಲಾಕ್​ಡೌನ್​ನಿಂದಾಗಿ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದಾಗ ಪಕ್ಕದಲ್ಲೇ ಇದ್ದ ಸ್ಟೀವ್ ಗೆಳೆತನ ಬೆಳೆದಿದೆ. ಅವರಿಬ್ಬರೂ ಚೆಸ್​ ಸೇರಿ ಇತರ ಆಟ ಆಡುತ್ತ, ಆಹಾರ ತಯಾರಿಸಿಕೊಂಡು ತಿನ್ನುತ್ತ, ಟ್ಯಾಪ್​ನಲ್ಲಿ ತಾಜಾ ಬಿಯರ್​ ಕುಡಿಯುತ್ತ ಕಾಲಕಳೆಯುತ್ತಿದ್ದಾರೆ.

    ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟೀವ್​, ಕರೊನಾ ಸೋಂಕಿನ ಭೀತಿಯಲ್ಲಿದ್ದರು. ಹೋಂ ಕ್ವಾರಂಟೈನ್​ನಲ್ಲೇ ಇರಲು ನಿರ್ಧರಿಸಿದ್ದ ಇವರಿಗೆ ವೈದ್ಯರು ಸೋಂಕು ಇಲ್ಲ ಎಂದು ಖಚಿತ ಪಡಿಸಿದ ಬಳಿಕ ಡೋಮ್​ ಜತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇನ್ನು ಕುಡಿಯುತ್ತಲೇ ಆಪ್ತ ಸ್ನೇಹಿತರಾಗಿರುವ ಅವರಿಬ್ಬರೂ ದೂರ ಇರುವ ಮಾತೇ ಇಲ್ಲ ಎಂದಿದ್ದಾರೆ.

    ಇದನ್ನೂ ಓದಿ ಕರೊನಾ ವೈರಸ್​ ಭೀತಿಯ ಮಧ್ಯೆ ಕೊಲೆಗಾರ ಕಣಜ ಎಂಟ್ರಿ: ಕುಟುಕಿದ್ರೆ ಸಾಕು ಜೀವ ಹೋಗಲಿದೆ!

    ಪಬ್​ನ ಟ್ಯಾಪ್​ನಲ್ಲಿ ಬಿಯರ್​ ಸಿಗುತ್ತಿರುವ ಖುಷಿಯಲ್ಲಿ ವೈಯಕ್ತಿಕ ಸ್ವಚ್ಛತೆ ಮರೆತಿಲ್ಲ. ಪದೇಪದೆ ಸ್ಯಾನಿಟೈಸರ್​ ಬಳಸುತ್ತೇವೆ. ಲಾಕ್​ಡೌನ್ ನಿರ್ಬಂಧ ತೆಗೆದು ಹಾಕಿದ ಬಳಿಕ ಗ್ರಾಹಕರಿಗೆ ಸೇವೆ ನೀಡಲು ಕಾತರದಿಂದ ಕಾಯುತ್ತಿದ್ದೇನೆ. ಗ್ರಾಹಕರಿಗೆ ಪಬ್​ಗೆ ಪ್ರವೇಶವಿಲ್ಲ. ಲಾಕ್​ಡೌನ್​ ಮುಗಿದ ಕೂಡಲೇ ಒಂದು ದೊಡ್ಡ ಪಾರ್ಟಿ ಮಾಡಬೇಕು. ಹೊರಗಡೆ ಹೋಗಿ ಇಷ್ಟವಾದ ಆಹಾರ ಸೇವಿಸಬೇಕು. ಸ್ನೇಹಿತರನ್ನು ಕಾಣಬೇಕು. ಕುಟುಂಬದ ಜತೆ ಸಮಯ ಕಳೆಯಬೇಕು ಎಂದು ಡೋಮ್​ ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ ಐಎಎಸ್​ ಹುದ್ದೆಗೇರಿದ ಬುಡಕಟ್ಟು ಯುವತಿ ಹಿಂದಿದೆ ರೋಚಕ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts