More

    ಐಎಎಸ್​ ಹುದ್ದೆಗೇರಿದ ಬುಡಕಟ್ಟು ಯುವತಿ ಹಿಂದಿದೆ ರೋಚಕ ಕಥೆ!

    ತಿರುವನಂತಪುರ: ಡಾಂಬರು ಕಾಣದ ಕುಗ್ರಾಮದಲ್ಲಿ ಕಿಟಕಿ-ಬಾಗಿಲೂ ಇಲ್ಲದ ಮುರುಕಲು ಮನೆಯಲ್ಲೇ ಬೆಳೆದ ಹುಡುಗಿ, ದಿನಗೂಲಿಕಾರರ ದಂಪತಿ ಮಗಳು, ಕಿತ್ತುತಿನ್ನುವ ಬಡತನದಲ್ಲೂ ಓದಿನ ಹಸಿವು ತಣಿಸಿಕೊಂಡ ಯುವತಿ, ಕೇರಳದ ಬುಡಕಟ್ಟು ಸಮುದಾಯದಲ್ಲೇ ಮೊದಲ ಬಾರಿಗೆ ಅದೂ ತನ್ನ ಮಾತೃಭಾಷೆಯಲ್ಲೇ ಐಎಎಸ್ ಪರೀಕ್ಷೆ ಪಾಸ್​ ಮಾಡಿದ ಸಾಧಕಿ ಶ್ರೀಧನ್ಯಾ ಸುರೇಶ್ ಅವರು ಕೋಝಿಕೋಡ್ ಜಿಲ್ಲೆಯ ಎಸಿ ಆಗಿ ನೇಮಕಗೊಂಡಿದ್ದಾರೆ.

    ಕಿತ್ತುತಿನ್ನುವ ಬಡತನವನ್ನೇ ನೋಡಿಕೊಂಡು ಆಗಲೋ ಈಗಲೋ ಬೀಳುವಂತಿರುವ ಮಾಸಲು ಗೋಡೆಯ ಮನೆಯಲ್ಲೇ ಬೆಳದ ಶ್ರೀಧನ್ಯಾ 2018ರಲ್ಲಿ ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡಿದ್ದರು. ಆ ಮೂಲಕ ಕೇರಳದ ಬುಡಕಟ್ಟು ಸಮುದಾಯದಲ್ಲಿ ಐಎಎಸ್​ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇವರ ಅಛಲ ಸಾಧನೆಗೆ ದೇಶಾದ್ಯಂತ ಅಭಿನಂದನೆಯ ಮಹಾಪೂರವೇ ಕೇಳಿಬಂದಿತ್ತು.

    ಇದನ್ನೂ ಓದಿ ಕುಡಿದ ಮತ್ತಿನಲ್ಲಿ ಜೀವಂತ ಹಾವನ್ನೇ ಕಚ್ಚಿ ಸಾಯಿಸಿದ!

    ಮಲಯಾಳಂ ಮಾಧ್ಯಮ ಶಾಲೆಯಲ್ಲಿ ಓದಿದ ಶ್ರೀಧನ್ಯಾ, ಕೋಝಿಕೋಡ್​ನ ದೇವಗಿರಿಯ ಸೇಂಟ್​ ಜೋಸೆಫ್​ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಕ್ಯಾಲಿಕಟ್​ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮಲಯಾಳಂ ಭಾಷೆಯಲ್ಲೇ ಐಎಎಸ್​ ಪರೀಕ್ಷೆ ಬರೆದು ಯಶ ಕಂಡರು. ಇವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದ್ದರಿಂದ ಐಎಎಸ್ ಓದಿನ ಹಾದಿ ಸುಲಭವಾಗಿರಲಿಲ್ಲ. ಐಎಎಸ್​ ಮುಖ್ಯ ಸಂದರ್ಶನಕ್ಕೆಂದು ದೆಹಲಿಗೆ ಹೋಗಬೇಕಿದ್ದ ಸಂದರ್ಭದಲ್ಲಿ ಇವರ ಬಳಿ ಹಣವೂ ಇರಲಿಲ್ಲ. ವಿಷಯ ತಿಳಿದ ಊರಿನವರು ಮತ್ತು ಹಿತೈಷಿಗಳು ಹಣ ಸಂಗ್ರಹಿಸಿ ಒಟ್ಟು 40 ಸಾವಿರ ರೂ. ಕೊಟ್ಟಿದ್ದರು.

    ಇವರ ತಂದೆ ಸುರೇಶ್​, ತಾಯಿ ಕಮಲಾ ಮನರೇಗಾ ದಿನಗೂಲಿಕಾರರು. ತಂದೆ ಸುರೇಶ್​ ಬೆನ್ನುಗೂನಾಗಿದ್ದು, ಬಡತನದಲ್ಲೂ ಮಗಳ ಓದಿಗೆ ಬೆಂಗಾವಲಾಗಿದ್ದರು. ವಯನಾಡ್ ಜಿಲ್ಲೆಯಲ್ಲಿ ಕಾಡಿನ ಮಧ್ಯದಲ್ಲಿರುವ ಇವರ ಮನೆಗೆ ಈಗಲೂ ರಸ್ತೆ ಇಲ್ಲ. 3ನೇ ಪ್ರಯತ್ನದಲ್ಲಿ 410ನೇ ಶ್ರೇಣಿ ಪಡೆಯುವ ಮೂಲಕ ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡಿ ಮಸ್ಸೂರಿಯಲ್ಲಿ ತರಬೇತಿ ಮುಗಿಸಿ ಬಂದಿರುವ ಶ್ರೀಧನ್ಯಾ, ಎರಡು ವಾರ ಕರೊನಾ ಕ್ವಾರಂಟೈನ್​ಗೆ ಒಳಪಟ್ಟು, ಎಸಿ ಆಗಿ ಅಧಿಕಾರ ಸ್ವೀಕರಿಸುವ ಸಿದ್ಧತೆಯಲ್ಲಿದ್ದಾರೆ.

    ಇದನ್ನೂ ಓದಿ ಕೊನೆಗೂ ನೀಟ್, ಜೆಇಇ ಮೇನ್ಸ್​ ಎಕ್ಸಾಂ ಡೇಟ್​ ಫಿಕ್ಸ್

    ಇವರಲ್ಲೂ ನಾಗರಿಗ ಸೇವಾ ಅಧಿಕಾರಿ ಆಗುವಂತೆ ಆಸೆ ಚಿಗುರಿಸಿದ್ದ ಶ್ರೀರಾಮ್​ ಸಾಂಬಶಿವ ರಾವ್​ ಪ್ರಸ್ತುತ ಕೋಝಿಕೋಡ್ ಜಿಲ್ಲಾಧಿಕಾರಿ. ಇವರು ಈ ಹಿಂದೆ ಎಸಿ ಆಗಿದ್ದಾಗ ಬುಡಕಟ್ಟು ಜನಾಂಗದ ಅಭಿವೃದ್ಧಿ ಕಾರ್ಯಕ್ರಮವೊಂದರಲ್ಲಿ ನಿರತರಾಗಿದ್ದರು. ಆ ವೇಳೆ ಇವರ ಪರಿಚಯ ಬೆಳೆಸಿಕೊಂಡ ಶ್ರೀಧನ್ಯಾ, ಐಎಎಸ್​ ಕನಸು ಕಟ್ಟಿಕೊಂಡರು. ಶ್ರೀರಾಮ್​ ಸಾಂಬಶಿವ ರಾವ್​ ಕೂಡ ಯುಪಿಎಸ್​ಸಿ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡಿ ಸಾಧನೆಗೆ ಪ್ರೇರಣೆ ನೀಡಿದ್ದರು. ಈಗ ಅವರೇ ಕೋಝಿಕೋಡ್​ ಜಿಲ್ಲಾಧಿಕಾರಿಯಾಗಿದ್ದು, ಗುರುವಿನ ಜತೆಯಲ್ಲೇ ವೃತ್ತಿ ಆರಂಭಿಸುವ ಅವಕಾಶವೂ ಶ್ರೀಧ್ಯನ್ಯಾಗೆ ಒಲಿದಿದೆ.

    ನಿರ್ಧಿಷ್ಟ ಗುರಿ, ಸಾಧಿಸುವ ಛಲ, ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದಕ್ಕೇ ಶ್ರೀಧನ್ಯಾ ಅವರೇ ಸಾಕ್ಷಿ. ಪ್ರದೇಶ, ಜಾತಿ, ಇಂಗ್ಲಿಷ್ ಭಾಷೆ… ಎಂಬೆಲ್ಲ ಕೀಳರಿಮೆ, ಭ್ರಮೆ.. ಇದ್ಯಾವುದರ ಚಿಂತೆಯೂ ನಿಮಗೆ ಬೇಡ. “ಚಿಯರ್ ಅಪ್” ಕನ್ನಡದ ಯುಪಿಎಸ್​ಸಿ ಪರೀಕ್ಷಾ ಆಕಾಂಕ್ಷಿಗಳಿಗೆ.. ‘ಆಲ್​ ದಿ ಬೆಸ್ಟ್​’.

    ಇದನ್ನೂ ಓದಿ ಲಾಕ್​ಡೌನ್​ನಲ್ಲೇ ರಾಜಕುಮಾರಿ ಕಿರೀಟ ಧರಿಸಿದ ಪಿಗ್ಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts