ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಬುಧವಾರದಂದು ಇಬ್ಬರು ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಲಾಗಿದೆ. ಚೀನಾ ಪ್ರಜೆಗಳು ಕಾರಿನಲ್ಲಿ ಚಲಿಸುತ್ತಿದ್ದು, ಬೈಕ್ನಲ್ಲಿ ಬಂದ ಹಲ್ಲೆಕೋರರು ದಾಳಿ ನಡೆಸಿ ಪರಾರಿಯಾಗಿರುವುದಾಗಿ ತಿಳಿಸಲಾಗಿದೆ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಾರಿನತ್ತ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಚೀನಾ ಪ್ರಜೆಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಕರಾಚಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ‘ಪಾಕಿಸ್ತಾನದಲ್ಲಿರುವ ಚೀನಾದ ನಾಗರಿಕರನ್ನು ಪಾಕಿಸ್ತಾನವು ರಕ್ಷಿಸುವ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ’ ಹೇಳಿದ್ದಾರೆ.
ಈ ಹಿಂದೆ ಖೈಬರ್ ಪಖ್ತುನ್ಖ್ವಾದಲ್ಲಿನ ಮೇಲ್ ಕೊಹಿಸ್ತಾನಲ್ಲಿರುವ ದಾಸು ಅಣೆಕಟ್ಟು ಸ್ಥಳಕ್ಕೆ ಜುಲೈ 14ರಂದು ಚೀನಾದ ಇಂಜಿನಿಯರ್‌ಗಳನ್ನು ಸಾಗಿಸುತ್ತಿದ್ದ ಬಸ್ ಮೇಲೆ ಐಇಡಿ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಚೀನಾದ ಒಂಬತ್ತು ಪ್ರಜೆಗಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ, ನೈಋತ್ಯ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಚೀನಾದ ರಾಯಭಾರಿಗಳು ತಂಗಿದ್ದ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟಗೊಂಡು ನಾಲ್ಕು ಜನರು ಸಾವನ್ನಪ್ಪಿದ್ದರು. (ಏಜೆನ್ಸೀಸ್)

ಕರೊನಾ ವಿಚಾರದಲ್ಲಿ ದಾಖಲೆ ಬರೆದ ಕೇರಳ! ಒಂದೇ ದಿನ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢ
‘ನನ್ನ ಫೋನ್ ಹ್ಯಾಕ್ ಆಗಿದೆ, ಇದು ಎಮೆರ್ಜೆನ್ಸಿಗಿಂತ ಅತಿ ಕೆಟ್ಟ ಪರಿಸ್ಥಿತಿ’