More

    ಇಂಗ್ಲೆಂಡ್-ವಿಂಡೀಸ್ ಟೆಸ್ಟ್‌ನಲ್ಲಿ ಅಂಪೈರ್‌ಗಳ ಅವಾಂತರ!

    ಸೌಥಾಂಪ್ಟನ್: 117 ದಿನಗಳ ಬಳಿಕ ಪುನರಾರಂಭ ಕಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್‌ಗಳು ಕಳಪೆ ತೀರ್ಪುಗಳಿಂದಾಗಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದಿಂದಾಗಿ ಐಸಿಸಿ, ತಟಸ್ಥ ಅಂಪೈರ್‌ಗಳಿಗೆ ಬದಲಾಗಿ ಸ್ಥಳೀಯ ಅಂಪೈರ್‌ಗಳ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂಪೈರ್‌ಗಳು ಅವಾಂತರ ಸೃಷ್ಟಿಸಿದ್ದಾರೆ.

    ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟ್ಟೆಲ್‌ಬೊರೊಗ್ ಪಂದ್ಯಕ್ಕೆ ಆನ್-ಫೀಲ್ಡ್ ಅಂಪೈರ್‌ಗಳಾಗಿದ್ದಾರೆ. ಇವರ ಒಂದೊಂದು ತೀರ್ಪು ಕೂಡ ಪ್ರವಾಸಿ ವಿಂಡೀಸ್ ತಂಡಕ್ಕೆ ಮಾರಕವಾಗಿದೆ. ಆದರೆ ಡಿಆರ್‌ಎಸ್ (ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ) ಬಳಕೆಯಿಂದಾಗಿ ವಿಂಡೀಸ್ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ಸಲವಾಗಿದೆ.

    ಇದನ್ನೂ ಓದಿ: VIDEO | ಆಹಾರವನ್ನು ತೂಕ ಮಾಡಿ ತಿನ್ನುತ್ತಾರೆ ವಿರಾಟ್​ ಕೊಹ್ಲಿ! ಕಾರಣವೇನು ಗೊತ್ತೇ?

    ಪಂದ್ಯದ 2ನೇ ದಿನದಾಟದಲ್ಲಿ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ 42 ರನ್‌ಗೆ 6 ವಿಕೆಟ್ ಕಬಳಿಸಿದರು. ಇದಕ್ಕೆ ಡಿಆರ್‌ಎಸ್ ಬಳಕೆಯೇ ಅವರಿಗೆ ನೆರವಾಗಿದೆ. ಮೈದಾನದ ಅಂಪೈರ್‌ಗಳು, ಆತಿಥೇಯ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವಿರುದ್ಧ ಅವರ ಎಲ್‌ಬಿಡಬ್ಲ್ಯು ಮನವಿಗಳನ್ನು ತಿರಸ್ಕರಿಸಿದಾಗ ಡಿಆರ್‌ಎಸ್ ಬಳಕೆಯಿಂದ ಯಶಸ್ಸು ಗಳಿಸುವಲ್ಲಿ ಸಲರಾಗಿದ್ದಾರೆ. ಇದರಿಂದಾಗಿ ಮೈದಾನದಲ್ಲಿ ಅಂಪೈರ್ ಯಾಕೆ ಬೇಕು, ತೃತೀಯ ಅಂಪೈರ್ ಮಾತ್ರ ಇರಲಿ ಸಾಕಾಗುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳು ಟೀಕಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಕ್ರಿಕೆಟ್ ಪುನರಾರಂಭಗೊಂಡರೂ, ಅಂಪೈರ್‌ಗಳ ನಿರ್ವಹಣೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಅಂಪೈರ್​ಗಳೂ ಮನುಷ್ಯರೆಂಬುದನ್ನು ಒಪ್ಪಿಕೊಳ್ಳುವೆ. ಆದರೆ ತಪ್ಪುಗಳಿಗೂ ಒಂದು ಮಿತಿ ಇರುತ್ತದೆ ಎಂದು ಕೆಲವರು ದೂರಿದ್ದಾರೆ. ಭಾರತದ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಕೂಡ ಅಂಪೈರ್‌ಗಳ ಬಗ್ಗೆ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts