More

    2ನೇ ಬಾರಿಗೆ ಟ್ವಿಟ್ಟರ್‌ ಅಕ್ಷರಗಳ ಮಿತಿ ಹೆಚ್ಚಳ; ಶೀಘ್ರದಲ್ಲೇ ಹತ್ತು ಸಾವಿರಕ್ಕೆ ಏರಿಕೆ

    ನ್ಯೂಯಾರ್ಕ್: ಇನ್ಮುಂದೆ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಟ್ವಿಟ್ಟರ್‌ ಬಳಕೆದಾರರು ಬಹಳ ದೀರ್ಘವಾದ ಟ್ವೀಟ್‌ಗಳನ್ನು ಪೋಸ್ಟ್ ಮಾಡಬಹುದಾಗಿದೆ. ಟ್ವಿಟ್ಟರ್‌ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10 ಸಾವಿರಕ್ಕೆ ಏರಿಸಲಾಗುವುದು ಎಂದು ಕಂಪನಿಯ ಸಿಇಒ ಎಲಾನ್ ಮಸ್ಕ್ ಘೋಷಿಸಿದ್ದಾರೆ.

    ಹತ್ತು ಸಾವಿರ ಅಕ್ಷರಗಳೊಂದಿಗೆ ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಜನರಿಗೆ ಅವಕಾಶ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಳಕೆದಾರರಿಗೆ ಹೊರತರಲಾಗುವುದು ಎಂದು ಕಂಪನಿಯ ಎಲಾನ್ ಮಸ್ಕ್ ದೃಢಪಡಿಸಿದ್ದಾರೆ.

    ಇದನ್ನೂ ಓದಿ: ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ಧನ ರೆಡ್ಡಿ

    ಬ್ಲೂಟಿಕ್‌’ ಪಡೆದುಕೊಂಡಿರುವ ಅಮೆರಿಕದ ಬಳಕೆದಾರರು 4 ಸಾವಿರ ಅಕ್ಷರಗಳನ್ನು ಬಳಸಿ ಟ್ವೀಟ್‌ ಮಾಡಬಹುದು ಎಂದು ಇತ್ತೀಚೆಗೆ ಕಂಪನಿ ತಿಳಿಸಿತ್ತು. ಆದರೆ 10 ಸಾವಿರ ಅಕ್ಷರಗಳ ಮಿತಿಯನ್ನು ಎಲ್ಲರೂ ಬಳಕೆ ಮಾಡಬಹುದೇ ಅಥವಾ ‘ಬ್ಲೂಟಿಕ್‌’ ಪಡೆದುಕೊಂಡಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆಯೇ ಎಂಬುದರ ಕುರಿತಾಗಿ ಎಲಾನ್‌ ಮಸ್ಕ್‌ ಯಾವುದೇ ಸ್ಪಷ್ಟನೆ ನೀಡಿಲ್ಲ. 16 ವರ್ಷದ ಇತಿಹಾಸದಲ್ಲಿ ಇದು 2ನೇ ಬಾರಿಗೆ ಟ್ವೀಟರ್‌ ಅಕ್ಷರಗಳ ಮಿತಿಯನ್ನು ಹೆಚ್ಚು ಮಾಡುತ್ತಿದೆ. 2017ರಲ್ಲಿ ಮೊದಲ ಬಾರಿಗೆ ಅಕ್ಷರ ಮಿತಿಯನ್ನು ಹೆಚ್ಚಿಸಿದ್ದ ಟ್ವಿಟ್ಟರ್‌ ಮಿತಿಯನ್ನು 140 ಅಕ್ಷರಗಳಿಂದ 280 ಅಕ್ಷರಗಳಿಗೆ ಏರಿಕೆ ಮಾಡಿತ್ತು.

    ಇದನ್ನೂ ಓದಿ: ಹಿಂದೂ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ಜೋಡಿ

    ಟ್ವಿಟ್ಟರ್‌ ಬ್ಲೂ ಚಂದಾದಾರಿಕೆಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಪಾವತಿಸದ ಬಳಕೆದಾರರು ಈ ವೈಶಿಷ್ಟ್ಯ ಅನ್ವಯವಾಗಲಿದೆಯಾ ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ. ಪಾವತಿಸಿದ ಬಳಕೆದಾರರಿಗೆ ಹೊಸ 10,000 ಅಕ್ಷರಗಳ ಮಿತಿಯನ್ನು ನೀಡುತ್ತದೆ ಎನ್ನಲಾಗಿದೆ. ಈ ವೈಶಿಷ್ಟ್ಯವು ಯಾವಾಗ ಬರುತ್ತದೆ ಎಂಬುದಕ್ಕೆ ಎಲಾನ್ ಮಸ್ಕ್ ಸ್ಪಷ್ಟನೆ ನೀಡಿಲ್ಲ ಮತ್ತು ಅದನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ.

    ವಿದ್ಯುತ್ ತಂತಿ ತಗುಲಿ ಪ್ರಾಣ ಬಿಟ್ಟ ಮೂರು ಆನೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts