More

    ಕೇಂದ್ರ ಸರ್ಕಾರದ ಎಚ್ಚರಿಕೆಗೆ ತಲೆಬಾಗಿದ ಟ್ವಿಟರ್​: ಹೊಸ ಐಟಿ ನಿಯಮ ಪಾಲಿಸಲು ಒಪ್ಪಿಗೆ​

    ನವದೆಹಲಿ: ಟ್ವಿಟರ್ ಹಾಗೂ ಕೇಂದ್ರ ಸರ್ಕಾರ ನಡುವಿನ ಹಗ್ಗಜಗ್ಗಾಟ ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವುದಾಗಿ ಟ್ವಿಟರ್​ ಒಪ್ಪಿಕೊಂಡಿದೆ.

    ಟ್ವಿಟರ್​ ತನ್ನ ಬಳಕೆದಾರರ ದೂರುಗಳನ್ನು ನಿರ್ವಹಿಸಲು ಭಾರತದಲ್ಲೇ ವಾಸಿಸುವ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಬೇಕೆಂಬ ಕೇಂದ್ರದ ನಿಯಮವನ್ನು ಪಾಲಿಸಿದ್ದು, ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಅಲ್ಲದೆ, ಶೀಘ್ರದಲ್ಲೇ ಇದರ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಭರವಸೆಯನ್ನು ನೀಡಿದೆ.

    ಫೆಬ್ರವರಿ 25 ರಂದು ಕೇಂದ್ರ ಐಟಿ ಸಚಿವಾಲಯ ಜಾರಿಗೊಳಿಸಿದ ಇನ್​ಫರ್ಮೇಷನ್ ಟೆಕ್ನಾಲಜಿ (ಇಂಟರ್​ಮೀಡಿಯರಿ ಗೈಡ್​ಲೈನ್ಸ್​ ಅಂಡ್​ ಡಿಜಿಟಲ್ ಮೀಡಿಯಾ ಎಥಿಕ್ಸ್​ ಕೋಡ್​) ರೂಲ್ಸ್​-2021 ಅನ್ನು ಪಾಲಿಸಲು ನಿರಾಕರಿಸುತ್ತಾ ಬಂದಿತ್ತು. ಇದು ಬಳಕೆದಾರರ ಮಾಹಿತಿ ಗೌಪ್ಯತೆಗೆ ವಿರುದ್ಧವಾಗಿದೆ ಎಂದು ಸಬೂಬು ನೀಡಿತ್ತು. ಆದರೆ ಸರ್ಕಾರ ನಿಯಮ ಪಾಲಿಸದಿದ್ದರೆ, ನಿಷೇಧಿಸುವ ಎಚ್ಚರಿಕೆಯನ್ನು ನೀಡಿತ್ತು.

    ಸ್ವತಃ ಟ್ವಿಟರ್​ ಬಳಕೆದಾರರಾದ ಅರ್ಜಿದಾರರು ಇಬ್ಬರು ವ್ಯಕ್ತಿಗಳ ಮಾನಹಾನಿ ಮಾಡುವಂತಹ ಸುಳ್ಳು ಟ್ವೀಟ್​ಗಳ​ ಬಗ್ಗೆ ದೂರು ನೀಡಲು ಪ್ರಯತ್ನಿಸಿದಾಗ, ಯಾವುದೇ ಅಧಿಕಾರಿಯ ವಿವರಗಳನ್ನು ಟ್ವಿಟರ್​ ನೀಡಿಲ್ಲದಿರುವುದು ಕಂಡುಬಂತು ಎನ್ನಲಾಗಿದೆ.

    ಟ್ವಿಟರ್​ ಮಾತ್ರವಲ್ಲದೆ, ಫೇಸ್​ಬುಕ್​, ಗೂಗಲ್​ ಹಾಗೂ ವಾಟ್ಸ್​ಆ್ಯಪ್​ ಕಂಪನಿಗಳು ಸಹ ಭಾರತದಲ್ಲಿ ಓರ್ವ ಅನುಸರಣಾಧಿಕಾರಿಯನ್ನು ನೇಮಕ ಮಾಡಬೇಕಿದೆ. ಈಗಾಗಲೇ ಈ ಕಂಪನಿಗಳು ಭಾರತ ಸರ್ಕಾರದ ಹೊಸ ಐಟಿ ನಿಯಮಕ್ಕೆ ಸಮ್ಮತಿಯನ್ನು ಸೂಚಿಸಿವೆ. (ಏಜೆನ್ಸೀಸ್​)

    ಯಡಿಯೂರಪ್ಪ ಸಮರ್ಥ ನಾಯಕ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಶಂಸೆ ಹಿಂದಿರುವ ಕಾರಣವಾದ್ರೂ ಏನು?

    ಲವ್​ ಫೇಲ್ಯೂರ್​ ಆಗಿದ್ದಕ್ಕೆ ಠಾಣೆಗೆ ಫೋನ್​ ಮಾಡಿ ಮಹಿಳಾ ಪಿಎಸ್​ಐ ಹೀಗ್​ ಮಾಡೋದಾ?

    ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts