More

    ಮೇ 6 ರಂದು ಎಸ್‌ಎಸ್‌ಎಂಸಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಎನ್‌ಐಸಿಯು ಲೋಕಾರ್ಪಣೆ

    ತುಮಕೂರು: ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಹೊರರೋಗಿಗಳ ವಿಸ್ತರಣಾ ಘಟಕದಲ್ಲಿನ ನವಜಾತ ಶಿಶುಗಳ ಎನ್‌ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಅನ್ನು ಮೇ 6 ರಂದು ಲೋಕಾರ್ಪಣೆ ಮಾಡಲಾಗುವುದು.

    ನಗರದ ಹೊರವಲಯದ ಅಗಳಕೋಟೆಯಲ್ಲಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಎನ್‌ಐಸಿಯು, ಪಿಐಸಿಯು, ಹೆರಿಗೆ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆಯನ್ನು ಬೆಳಗ್ಗೆ 10ಕ್ಕೆ ಸಾಹೇ ವಿವಿ ಕುಲಾಧಿಪತಿಗಳು ಆದ ಗೃಹ ಸಚಿವ ಡಾ. ಜಿ ಪರಮೇಶ್ವರ ನೇರವೇರಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲ ಡಾ.ಜಿ.ಎನ್. ಪ್ರಭಾಕರ್ ತಿಳಿಸಿದರು.

    ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಕನ್ನಿಕಾಪರಮೇಶ್ವರ, ಸಾಹೇ ಉಪಕುಲಪತಿ ಡಾ ಕೆ ಬಿ ಲಿಂಗೇಗೌಡ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಎಸ್‌ಎಸ್‌ಎಂಸಿ ಪ್ರಾಚಾರ್ಯ ಡಾ. ಎಂ ಬಿ ಸಾಣಿಕೊಪ್ಪ, ಸಾಹೇ ವಿವಿ ಪರೀಕ್ಷಾ ನಿಯಂತ್ರಣಕ ಡಾ ಗುರುಶಂಕರ್, ವೈದ್ಯಕೀಯ ಮೇಲ್ವಿಚಾರಕ ಡಾ.ಎನ್ ಎಸ್ ವೆಂಕಟೇಶ್, ಸಾಹೇ ವಿವಿ ಕುಲಾಧಿಪತಿ ಸಲಹೆಗಾರ ಡಾ ವಿವೇಕ್ ವೀರಯ್ಯ ಉಪಸ್ಥಿತರಿರುವರು.

    ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವಿಮೆ ಸೌಲಭ್ಯಗಳು ಆಸ್ಪತ್ರೆಯ ರೋಗಿಗಳಿಗೆ ಲಭ್ಯವಿದೆ. ಹಾಗಾಗಿ ಅತ್ಯಾಧುನಿಕ ಚಿಕಿತ್ಸೆ ಪಡೆಯಬಹುದು. ನುರಿತ ವೈದ್ಯಕೀಯ ತಂಡ ಎಲ್ಲಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಮೇಲ್ವಿಚಾರಕ ಡಾ.ಎನ್.ಎಸ್. ವೆಂಕಟೇಶ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಪ್ರಸೂತಿ ತಜ್ಞೆ ಡಾ ಇಂದಿರಾ, ಚರ್ಮರೋಗ ತಜ್ಞ ಡಾ. ಶಿವಾನಂದ, ಡಾ. ಕಿರಣ್, ಡಾ ಅರುಣ್, ಡಾ. ಪ್ರಸನ್ನಕುಮಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts