More

    ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್​: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್​​

    ಬೆಂಗಳೂರು: ನಟ ಪುನೀತ್​ ರಾಜ​ಕುಮಾರ್​ ಅವರ ಅಭಿಮಾನಿಗಳಿಗೆ ಸದ್ಯ ಸಂತಸ ಸುದ್ದಿ ಇದಾಗಿದೆ. ಪುನೀತ್​​ ಅಗಲಿ 9 ತಿಂಗಳು ಕಳೆದರೂ ಅಭಿಮಾನಿಗಳು ಅವರನ್ನು ಸ್ಮರಿಸದ ದಿನವೇ ಇಲ್ಲ. ಒಂದಿಲ್ಲೊಂದು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತ ವಿಚಾರಗಳು ಹರಿದಾಡುತ್ತಲೇ ಇವೆ. ಇಂತಹ ಶ್ರೇಷ್ಠ ನಟನ ಬಗ್ಗೆ ಟ್ವಿಟ್ಟರ್​ ತಾನು ಮಾಡಿದ ಯಡವಟ್ಟಿನಿಂದ ಕೊನೆಗೂ ಬುದ್ದಿ ಕಲಿತಿದೆ.

    ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್​​ ಅವರ ಟ್ವಿಟ್ಟರ್​ ಖಾತೆಗೆ ನೀಡಲಾಗಿದ್ದ ನೀಲಿ ಟಿಕ್​​ ತೆಗೆದುಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ ತನ್ನಿಂದಾದ ತಪ್ಪನ್ನು ಸರಿಪಡಿಸಿಕೊಂಡಿದೆ.

    ಸಾಮಾಜಿಕ ಜಾಲತಾಣದಲ್ಲಿ ಪುನೀತ್​ ಅವರ ಬಗ್ಗೆಗಿನ ಕುತೂಹಲಕಾರಿ ವಿಷಯಗಳನ್ನು ಹುಡುಕುವಲ್ಲಿ ಈಗಲೂ ಜನರು ಹಿಂದೆ ಬಿದ್ದಿಲ್ಲ. ಅವರ ಪ್ರತಿಯೊಂದು ವಿಡಿಯೋಗಳನ್ನು ವೀಕ್ಷಿಸುತ್ತಲೇ ಇರುತ್ತಾರೆ. ಈ ನಡುವೆ ಸ್ಟಾರ್​ಗಳಿಗೆಂದೇ ನೀಡಲಾಗುವ ಬ್ಲ್ಯೂ ಟಿಕ್​ ಅನ್ನು ತೆಗೆದಿದ್ದ ಟ್ವಿಟ್ಟರ್​ ವಿರುದ್ಧ ಅಭಿಯಾನವನ್ನೇ ಆರಂಭಿಸಲಾಗಿತ್ತು.

    ಇದರಿಂದ ಅಭಿಮಾನಿಗಳು ಭಾರೀ ಅಸಮಾಧಾನವನ್ನೇ ಹೊರಹಾಕಿದ್ದರು. ಇಷ್ಟು ದಿನ ಇದ್ದ ಪುನೀತ್​ ರಾಜಕುಮಾರ್​​ ಅವರ ಟ್ವಿಟ್ಟರ್ ಖಾತೆಯಲ್ಲಿದ್ದ ನೀಲಿ ಟಿಕ್​ ಇದ್ದಕ್ಕಿದ್ದ ಹಾಗೆ ಮಾಯವಾಗಿತ್ತು. ಇದರಿಂದ ದೊಡ್ಡ ಮಟ್ಟದಲ್ಲಿ ನಡೆಸಿದ್ದ ಅಭಿಯಾನ ಪ್ರತಿಫಲ ನೀಡಿದೆ.

    ಪುನೀತ್​ ಅವರ ಖಾತೆಯಲ್ಲಿ ಹಲವು ತಿಂಗಳಿನಿಂದ ಯಾವುದೇ ಪೋಸ್ಟ್​ ಹಾಕದ ಕಾರಣ ನೀಲಿ ಟಿಕ್​ ತೆಗೆಯಲಾಗಿತ್ತು. ಆದರೆ ಅಭಿಮಾನಿಗಳು ನೀಲಿ ಟಿಕ್​ ಮರಳಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಸದ್ಯ ಈಗ ಅಪ್ಪು ಖಾತೆಗೆ ನೀಲಿ ಟಿಕ್​ ಮರಳಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. (ಏಜೆನ್ಸೀಸ್​)

    ಶಾಕಿಂಗ್​! ಮನೆಯೊಳಗಿದ್ದ 4 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಕೋತಿ ಮಾಡಿದ್ದೇನು?

    ಸೇತುವೆಯಿಂದ ಏಕಾಏಕಿ ನದಿಗೆ ಉರುಳಿತು ಬಸ್​: 13 ಜನರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts