More

    ಭಾರತದ ‘ಕೂ’ ಆ್ಯಪ್​ ಈಗ ಎಲಾನ್​ ಮಸ್ಕ್​ನ ಹೊಸ ಟಾರ್ಗೆಟ್! ಶುರುವಾಗುತ್ತಾ ಹೊಸ ಟ್ರೇಡ್​ ವಾರ್​?

    ಬೆಂಗಳೂರು: ಭಾರತದ ಮೈಕ್ರೋ ಬ್ಲಾಗಿಂಗ್​ ಸೈಟ್​ ‘ಕೂ’ನ ಟ್ವಿಟರ್​ ಖಾತೆಯನ್ನು ಎಲಾನ್​ ಮಸ್ಕ್​ ಈಗ ಬ್ಯಾನ್​ ಮಾಡಿದ್ದಾರೆ. ಅದಕ್ಕೂ ಮುಂಚೆ ಜಗತ್ತಿನ ಅನೇಕ ಪ್ರಮುಖ ಪತ್ರಿಕೋದ್ಯಮಿಗಳ ಟ್ವಿಟರ್​ ಅಕೌಂಟ್​ಗಳನ್ನೂ ಬ್ಯಾನ್​ ಮಾಡಲಾಗಿತ್ತು.

    ಇದನ್ನು ಟೀಕಿಸಿದ ಕೂ ಸ್ಥಾಪಕ, ಮಯಾಂಕ್​ ಬಿಡವಟ್ಕಾ ‘ಎಲಾನ್​ ಮಸ್ಕ್​ರ ಫ್ರೀ ಸ್ಪೀಚ್​ ಪಾಲಿಸಿ ಏನಾಯಿತು?’ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ನಿಲ್ಲದ ಮಯಾಂಕ್​, ಮಸ್ಕ್​ ತೆಗೆದುಕೊಂಡಿದ್ದ ಹಿಂದಿನ ಕೆಲವು ನಿರ್ಧಾರಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಹಿಂದೆ ಮಸ್ಕ್​, ಮ್ಯಾಸ್ಟೊಡಾನ್​ ಎನ್ನುವ ಸಾಮಾಜಿಕ ಜಾಲತಾಣ ಸುರಕ್ಷಿತ ಅಲ್ಲ ಎಂದು ಹೇಳಿ ಆ ತಾಣದ ಲಿಂಕ್​ಗಳನ್ನು ಟ್ವಿಟರ್​ನಲ್ಲಿ ಬ್ಯಾನ್​ ಮಾಡಿದ್ದರು. ಜೊತೆಗೇ ಮ್ಯಾಸ್ಟಡಾನ್​ನ ಟ್ವಿಟರ್​ ಖಾತೆಯನ್ನೂ ಬ್ಯಾನ್​ ಮಾಡಿದ್ದರು. ಈ ಆ್ಯಪ್​ ಕೂಡ ಟ್ವಿಟರ್​ನ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅದಕ್ಕೆ ತಮ್ಮ ಟ್ವೀಟ್​ನಲ್ಲಿ ಪ್ರತಿಕ್ರಿಯೆ ನೀಡಿದ್ದ ಮಯಾಂಕ್​, ‘ಇವರಿಗೆ ಇನ್ನೆಷ್ಟು ಅಧಿಕಾರ ಬೇಕು?’ ಎಂದು ಪ್ರಶ್ನಿಸಿದ್ದರು.

    ಇದಾದ ಮೇಲೆ ಕೂ ಆ್ಯಪ್​ಗೆ ಸಂಬಂಧಪಟ್ಟ ಟ್ವಿಟರ್​ನ ಅಕೌಂಟ್​ಅನ್ನು ಸಸ್ಪೆಂಡ್​ ಮಾಡಲಾಗಿದೆ. ಈ ಅಕೌಂಟ್​, ಕೂ ಕ್ವೆರೀಸ್​ ಎನ್ನುವ ಅಕೌಂಟ್​ಅನ್ನು ಬ್ಯಾನ್​ ಮಾಡಲಾಗಿದೆ. ಈ ಅಕೌಂಟ್​ ಮುಖಾಂತರ ಜನರು ಕೂ ಆ್ಯಪ್​ಗೆ ಸಂಬಂಧಪಟ್ಟ ಸಂದೇಹಗಳನ್ನು ಕೇಳುತ್ತಿದ್ದರು. ಇನ್ನು ಆ ಆಯ್ಕೆ ಇಲ್ಲದ ಹಾಗೆ ಆಗಿದೆ. ಈಗ ಟ್ವಿಟರ್​ಗೆ ಸ್ಪರ್ಧೆ ನೀಡುವ ಎಲ್ಲಾ ಸಾಮಾಜಿಕ ಜಾಲತಾಣಗಳನ್ನೂ ಎಲಾನ್​ ಮಸ್ಕ್​ ಟಾರ್ಗೆಟ್​ ಮಾಡುತ್ತಿದ್ದಾರೆ.

    ಈಗ, ಗುರುವಾರ ರಾತ್ರಿ ಟ್ವಿಟರ್​ನಿಂದ ಬ್ಯಾನ್​ ಆದ ಹಲವಾರು ಪತ್ರಕರ್ತರು, ಮಸ್ಕ್​ನ ಹೊಸ ನೀತಿ ಮತ್ತು ಅದನ್ನು ಹೇರಲು ಮಸ್ಕ್‌ ಬಳಸುತ್ತಿರುವ ಹುಚ್ಚು ಲಾಜಿಕ್​ ಬಗ್ಗೆ ಟೀಕಿಸಿ ಬರೆಯುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts